ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಪ್ರಾದೇಶಿಕ ಸುದ್ದಿ
ಮೂಲ್ಕಿ:ಧನಾತ್ಮಕ ಚಿಂತನೆಯೊಂದಿಗೆ ನಿರಂತರ ಶ್ರಮಕ್ಕೆ ನೀಡಲಾಗುವ ಪ್ರೋತ್ಸಾಹವು ಕಲಾವಿಧನ ಹುಟ್ಟಿಗೆ ಕಾರಣವಾಗುತ್ತದೆ ಎಂದು ಮಿಮಿಕ್ರಿ ಪಟು ಪಟ್ಟಾಭಿರಾಮ ಸುಳ್ಯ ಹೇಳಿದರು.ಮೂಲ್ಕಿಯ ತೋಕೂರು ತಪೋವನ ರಾಮಣ್ಣ ಶೆಟ್ಟಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಬುಧವಾರ ಹತ್ತು ದಿನಗಳ ಬೇಸಿಗೆ ಶಿಬಿರವನ್ನು ಉದ್ಘಾಟಿಸಿದ ಬಳಿಕ ಮಾತನಾಡಿದರು.ತನ್ನ ನೋವನ್ನು ಲೆಕ್ಕಿಸದೆ ಇತರರನ್ನು ನಗಿಸಿ ಮನ ಬೆಳಗಿಸುವ ಕಲೆ ಕಲಾವಿದನಿಗೆ ಸಿದ್ದಿಸಿದರೆ ಮಾತ್ರ ಆತ ಜನ ಮಾನಸದಲ್ಲಿ ಶಾಶ್ವತ ಸ್ಥಾನ ಪಡೆಯುತ್ತಾನೆ. ನಗು ಯಾವತ್ತೂ ಇತರರ ಮನ ಮುದಗೊಳಿಸುವುದರೊಂದಿಗೆ ಸದಾ ಹಸನ್ಮುಖರಾಗಿರುವವರಿಗೆ ಅನಾರೋಗ್ಯ ಕಾಡದು ಎಂದ ಅವರು ಮಕ್ಕಳ ಮನೋಭಾವನೆಯನ್ನು ಹೆತ್ತವರು ಅರಿಯುದರೊಂದಿಗೆ ಅವರ ಬೆಳವಣಿಗೆಗೆ ಆದರ್ಶರಾಗಿರಿ ಎಂದರು.ಶಿಕ್ಷಕ ರಕ್ಷಕ ಸಂಘದ ಪೂರ್ವಾಧ್ಯಕ್ಷ ಜಿನರಾಜ್ ಬಂಗೇರ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು.ಹತ್ತು ದಿನಗಳ ಶಿಬಿರದಲ್ಲಿ ಮಕ್ಕಳಿಗೆ ಪೈಂಟಿಂಗ್, ಹಾಡು, ಗೀತೆ, ಪುಷ್ಪಾಲಂಕಾರ, ಕಾಗದದ ಚೀಲ, ಮುಖವಾಡ, ತುಳು ಜಾನಪದ ಆಚರಣೆ, ನೈಸಗರ್ಿಕವಾಗಿ ತಯಾರಿಸುವ ಆಹಾರ, ಚಿತ್ರಗಳು, ಸಂಗೀತ, ಎಂಬ್ರೋಡರಿ ಇನ್ನಿತರ ಕಲೆಗಾರಿಕೆಗೆ ತರಬೇತಿಯನ್ನು ನೀಡಲಾಗುವುದು ಎಂದು ಶಾಲಾ ಮಖ್ಯೋಪಾಧ್ಯಾಯಿನಿ ಗೀತಾ ವೆಂಕಟ್ರಾಮನ್ ತಿಳಿಸಿದರು.

ವಿದ್ಯಾರ್ಥಿಗಳಾದ ಸ್ವೀಡನ್, ಕಾವ್ಯ, ಪ್ರಿಸ್ಕಾ, ಮುಫಿದಾ ಉಪಸ್ಥಿತರಿದ್ದರು.ಮಕ್ಕಳಿಗೆ ಪಟ್ಟಾಭಿರಾಮ ಸುಳ್ಯರವರು ಹಾಸ್ಯ ಚಟಾಕಿ, ಮಿಮಿಕ್ರಿ, ಪ್ರಾಣಿ ಪಕ್ಷಿಗಳ ಧ್ವನಿ, ಚಲನ ಚಿತ್ರ ನಟರ, ರಾಜಕಾರಣಿಗಳ ಅನುಕರಣೆ, ಮುಖಬಾವ, ನಗುವಿನ ವಿವಿಧ ರೂಪಗಳು, ನೆರಳಿನ ಆಟವನ್ನು ಪ್ರದರ್ಶಿಸಿ ರಂಜಿಸಿದರು.
ವರದಿ: ಭಾಗ್ಯವಾನ್ ಮುಲ್ಕಿ

0 comments:

Post a Comment