ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವೈವಿಧ್ಯ

ಹೋರಾಟದಿಂದ ತುಂಬಿರುವ ಬದುಕಿನಲ್ಲಿ ಕತ್ತಲೆಯನ್ನು ಕೊಡವಿ ಮುಂಬೆಳಗು ಮೂಡುವ ಭರವಸೆ, ನಂಬಿಕೆಯನ್ನು ಸೃಷ್ಠಿಸುವ ಧಾರಾವಾಹಿಯೇ ಮುಂಜಾವು.
ಬಾಳಿನ ಪಯಣದಲ್ಲಿ ಎದುರಾಗುವ ಒಂದೊಂದು ಘಟನೆಗಳು ವ್ಯಕ್ತಿಯನ್ನು ಮತ್ತಷ್ಟು ಗಟ್ಟಿಗನನ್ನಾಗಿ, ಪರಿಪೂರ್ಣನನ್ನಾಗಿ ಮಾಡುತ್ತಾ ಸಾಗುತ್ತವೆ ಅದಕ್ಕೆ ಒಂದಷ್ಟು ಪ್ರೀತಿ, ನಂಬಿಕೆ, ವಿಶ್ವಾಸ ಮತ್ತು ಸೃಜನಶೀಲತೆ ಬೆರೆತಾಗ ಬದುಕು ಅರ್ಥಪೂರ್ಣವಾಗುತ್ತದೆ ಎಂಬ ಜೀವನದ ಸಂದೇಶವನ್ನು ಸಾರುತ್ತಾ ಸಾಗುವ ಈ ಧಾರಾವಾಹಿಯನ್ನು ಮುಕ್ತ, ಮನ್ವಂತರ, ಮಿಂಚು, ಮುಕ್ತ ಮುಕ್ತ ಹಲವಾರು ಈಟೀವಿ ಕನ್ನಡ ವಾಹಿನಿಯ ಜನಪ್ರಿಯ ಧಾರಾವಾಹಿಗಳ ಖ್ಯಾತಿಯ ನಿರ್ದೇಶಕ ಟಿ.ಎನ್.ಸೀತಾರಾಮ್ ರವರ ನೂತನ ಧಾರಾವಾಹಿ ಮುಂಜಾವು. `ಭೂಮಿಕಾ ಕ್ರಿಯೇಷನ್ಸ್' ರವರ ನಿರ್ಮಾಣದಲ್ಲಿ ಇದೇ ಮಾರ್ಚ್ 8 ರಿಂದ ಪ್ರತಿ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 8-30 ಕ್ಕೆ ಈಟೀವಿ ಕನ್ನಡ ವಾಹಿನಿಯಲ್ಲಿ ಮೂಡಿಬರಲಿದೆ.


ಸಮಾಜದಲ್ಲಿ ಗೌರವಯುತ ಸ್ಥಾನ ಪಡೆದ ನಿವೃತ್ತ ಶಿಕ್ಷಕ ದಂಪತಿಗಳ 4 ಮಕ್ಕಳ ಒಂದು ಕೌಟುಂಬಿಕ ಕಥೆಯೇ ಮುಂಜಾವು. ಇಲ್ಲಿ 4 ಜನ ಮಕ್ಕಳ ಜೀವನದಲ್ಲಿ ಎದುರಾಗುವ ವಿಭಿನ್ನವಾದ ಘಟನೆಗಳು, ಅವುಗಳನ್ನು ಜವಾಬ್ದಾರಿಯುತವಾಗಿ ನಿಭಾಯಿಸುವ ರೀತಿ, ಅವರುಗಳ ಸ್ಪರ್ಧಾ ಮನೋಭಾವ, ಚಾತುರ್ಯದಿಂದ ಮುನ್ನಡೆಯುವ ಹಾದಿ ಸಮಾಜದ ಕಣ್ಣಿಗೆ ಕುಕ್ಕುವಾಗ, ಮದುವೆಯ ಹಂತ ತಲುಪಿದ ಮಕ್ಕಳನ್ನು ನಯವಾಗಿ ತಮ್ಮೆಡೆಗೆ ಸೆಳೆಯಬೇಕೆಂಬ ಆಮಿಷೆಯ ಉನ್ನತ ವರ್ಗದ ವರ್ತನೆ, ಅತ್ಯಂತ ಪ್ರೀತಿ, ವಿಶ್ವಾಸ ತುಂಬಿರುವ ಸುಮಧುರ ಬಾಂಧವ್ಯದ ಕುಟುಂಬಕ್ಕೆ ಸವಾಲಾಗಿ ಬಿಂಭಿಸುವ ಮಗ - ಸೊಸೆಯರ ಸಂಬಂಧ, ವಿಧವೆಯಾದ ಮಗಳ ಮರುಮದುವೆ ಮತ್ತು ಇಂದು ಕಾಲೇಜಿನಲ್ಲಿ ಮಜಾ ಮಾಡುವ ನಿಜ ಜೀವನದ ಅರ್ಥವೇ ಗೊತ್ತಿರದ ಸದಾ ಗೊಂದಲದಲ್ಲಡಗಿರುವ ಯುವಪೀಳಿಗೆಯ ಮೇಲೆ ಬೆಳಕು ಚೆಲ್ಲುವ ಧಾರಾವಾಹಿ ಮುಂಜಾವು.


ಒಟ್ಟಿನಲ್ಲಿ ಪ್ರಸ್ತುತ ಸಮಾಜದಲ್ಲಿ ಬದಲಾಗುತ್ತಿರುವ ವಿದ್ಯಮಾನಗಳ ಸಂಪೂರ್ಣ ಅವಲೋಕನವನ್ನು ಕಿರುತೆರೆಯಲ್ಲಿ ಸೃಷ್ಠಿಸುವ ಪ್ರಯತ್ನವೇ ಮುಂಜಾವು.

0 comments:

Post a Comment