ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಕಾರಿಡಾರ್
ಅಪ್ಪಾ ನಿನ್ನ ಹತ್ತಿರ ಬರೋದಿಕ್ಕೆ ನಂಗೆಷ್ಟು ಭಯ ಆಗ್ತಿದೆ ಗೊತ್ತಾ... ನಿನ್ನ ಕೈಯಲ್ಲಿರುವ ನಾಗರಬೆತ್ತ... ಹುಣಸೇ ಬೆತ್ತಗಳು ಎಲ್ಲಿ ಮಾತನಾಡಲಾರಂಭಿಸುತ್ತವೆಯೋ ಎಂಬ ಭಯ ನಿರಂತರ ಕಾಡ್ತಿವೆ...
ನನ್ನ ಬೆಳ್ಳನೆಯ ಬೆನ್ನಿನಲ್ಲಿ ನಿನ್ನ ಬೆತ್ತಗಳು ಎಲ್ಲಿ ಚಿತ್ತಾರಬಿಡಿಸಲಾರಂಭಿಸುತ್ತವೆಯೋ ಎಂಬ ಸಣ್ಣ ಭಯ ಕಾಡುತ್ತಿದೆ... ಯಾಕಪ್ಪಾ ನನ್ನ ಮೇಲೆ ನಿಂಗೆ ಪ್ರೀತಿ ಇಲ್ಲ... ಅಮ್ಮ ಅರ್ಥಮಾಡಿಕೊಳ್ಳುವಂತೆ ನೀನ್ಯಾಕಪ್ಪಾ ನನ್ನ ಭಾವನೆಗಳನ್ನು ಅರ್ಥೈಸಿಕೊಳ್ತಿಲ್ಲ... ಪ್ರೀತಿಯ ಮಾತುಗಳಿಂದ ಮಗಳನ್ನು ತಿದ್ದೋ ಬದಲು ಬೆತ್ತದ ಮೂಲಕ ಯಾಕಪ್ಪಾ ತಿದ್ದೋ ಪ್ರಯತ್ನ ಮಾಡ್ತಿರುತ್ತಿ... ಸಿಟ್ಟಿನ ನಿನ್ನ ಆ ಮುಖವನ್ನು ನನ್ನಿಂದ ನೋಡಲಾಗುತ್ತಿಲ್ಲ... ಈ ನಿನ್ನ ಮಗಳಿಗಾಗಿ ಒಂದು ನಿಷ್ಕಲ್ಮಶ ನಗು ಬೀರು.

ನನಗೆ ಜ್ವರ ಬಂದಾಗ ಒಂದೇ ಒಂದು ದಿನವಾದರೂ ಔಷಧಿ ತೆಗೆದುಕೊಂಡಿದ್ದಿಯಾ ಅಂತ ನೀನು ಕೇಳಿದ್ಯಾ... ಊಟ ನಿದ್ದೆ ಸರಿಯಾಗಿ ಮಾಡಿದ್ಯಾ ಅಂತ ಕೇಳ್ತಿಯಾ... ಶಾಲೆಯ ವಿಚಾರವಂತೂ ಕೇಳೋದೇ ಇಲ್ಲ ಬಿಡು... ನಿನ್ನ ಮಡಿಲಲ್ಲಿ ತಲೆ ಇಟ್ಟು ಗಡದ್ದಾಗಿ ನಿದ್ದೆ ಮಾಡಬೇಕು ಅಂತ ಅನ್ನಿಸುತ್ತೆ...ನನ್ನ ಮನದ ನೋವುಗಳೆಲ್ಲವ ಮರೆಯಲು ಪೆನ್ನು ಮತ್ತು ಹಾಳೆಗಳನ್ನು ಬಿಟ್ಟರೆ ನನಗಾವ ದಾರಿಯೂ ಕಾಣುತ್ತಿಲ್ಲ. ನೀನು ನನ್ನನ್ನು ಎಷ್ಟೇ ತಿರಸ್ಕರಿಸಿದರೂ ನಾನು ನಿನ್ನನ್ನು ಮಾತ್ರ ತಿರಸ್ಕರಿಸೋಲ್ಲ...ಯಾಕೆ ಗೊತ್ತಾ ನೀನಂದರೆ ನನಗೆ ಪಂಚ ಪ್ರಾಣ...

- ಮಲ್ಲಿಕಾ ಭಟ್ ಪರಪ್ಪಾಡಿ.
ತೃತೀಯ ಬಿ.ಎ.
ಆಳ್ವಾಸ್ ಕಾಲೇಜು, ಮೂಡಬಿದಿರೆ.

1 comments:

siri said...

nice Mallika....

Post a Comment