ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಪ.ಗೋ.ಪತ್ರಗಳು

'ಇಮಾಂ ಸಾಬಿಗೂ, ಗೋಕುಲಾಷ್ಟಮಿಗೂ ಏನು ಸಂಬಂಧ... ?'. ಈ ಉಕ್ತಿ ಇದ್ದದೆ. ಆದರೆ ಕ್ರಿಕೆಟ್ ಗೂ ಯಕ್ಷಗಾನಕ್ಕೂ ಏನು ಸಂಬಂಧ ? ಹೌದು... ಸಂಬಂಧ ಇತ್ತು ! ಅದೂ ೧೯೬೦ರ ದಶಕದಲ್ಲೇ ಹೀಗೊಂದು ಸಂಬಂಧ ಇತ್ತು.
ಈಗೇನಿದ್ದರೂ ಕ್ರಿಕೆಟ್ ನಲ್ಲಿ ಐ ಪಿ ಎಲ್ , ಟ್ವೆಂಟಿ- ಟ್ವೆಂಟಿಗಳ ಕಾಲ. ಇಂದಿನ ದಿನಗಳಲ್ಲಿ ಕ್ರಿಕೆಟ್ ತಂಡಗಳಿಗೆ ರಾಷ್ಟ್ರೀಯ, ಬಹುರಾಷ್ಟ್ರೀಯ ಸಂಸ್ಥೆಗಳು ಪ್ರಾಯೋಜಕರಾಗಿ ನೆರವು ನೀಡುತ್ತಿದ್ದಾರೆ. ಆಟಗಾರರಿಗಂತೂ ಭರ್ಜರಿ ಕಾಸು !
೧೯೬೦ ರ ದಶಕದಲ್ಲಿ ಶ್ರೀ.ಕೃಷ್ಣ ಜನ್ಮ,ಚಂದ್ರಾವಳೀ ವಿಲಾಸ ,ಅಗ್ರಪೂಜೆ ಎಂಬ ಕಥಾಭಾಗದ ಯಕ್ಷಗಾನ ಪ್ರದರ್ಶನವನ್ನು ಆಯೋಜಿಸಿ ಕ್ರಿಕೆಟ್ ತಂಡಕ್ಕೆ ಕರಾವಳಿಯ ಗಂಡುಗಲೆ ಯಕ್ಷಗಾನ ಸಹಾಯ ಮಾಡಿತ್ತು ಎಂದು ಕನ್ನಡ ನಾಡಿನ ಹಿರಿಯ ಪತ್ರಕರ್ತ 'ಸುದ್ದಿಜೀವಿ' ಬೆಂಗಳೂರಿನ ಶ್ರೀ. ಹೆಚ್.ಆರ್.ನಾಗೇಶರಾವ್ ಸಂಗ್ರಹದಲ್ಲಿದ ಮಂಗಳೂರಿನ ಅಂದಿನ ಕನ್ನಡ ಸಂಜೆ ದಿನಪತ್ರಿಕೆ "ವಾರ್ತಾಲೋಕ" ದಿನಾಂಕ ೧೪ ಡಿಸೆಂಬರ್ ೧೯೬೩ ರ ಆವೃತ್ತಿಯಿಂದ ತಿಳಿದು ಬಂದಿದೆ.ಮಂಗಳೂರಿನ ಉರ್ವ ಬ್ರದರ್ಸ್ ಕ್ರಿಕೆಟ್ ಕ್ಲಬ್ಬಿನ ನಿಧಿಯ ಸಹಾಯಾರ್ಥವಾಗಿ ಈ ಯಕ್ಷಗಾನ ಪ್ರದರ್ಶನವನ್ನು ಆಯೋಜಿಸಲಾಗಿತ್ತು.


ಪ.ಗೋ. ಎಂದೇ ಪ್ರಸಿದ್ದರಾಗಿದ್ದ ಹಿರಿಯ ಪತ್ರಕರ್ತ ಪದ್ಯಾಣ ಗೋಪಾಲಕೃಷ್ಣ ಅವರ ಸಂಪಾದಕತ್ವದಲ್ಲಿ ಪ್ರಕಟವಾಗುತಿದ್ದ 'ವಾರ್ತಾಲೋಕ'ದಲ್ಲಿ ಈ ಬಗ್ಗೆ ಜಾಹೀರಾತು ನೀಡಲಾಗಿತ್ತು. ಕೂಡ್ಲು ಶ್ರೀ.ಗೋಪಾಲಕೃಷ್ಣ ಯಕ್ಷಗಾನ ನಾಟಕ ಸಭಾ ಅವರು ಉರ್ವ ಮಾರ್ಕೆಟ್ ಬಳಿಯ ಮೈದಾನದಲ್ಲಿ ಈ ಪ್ರದರ್ಶನ ನೀಡಿದ್ದರು.

ಅಚ್ಚರಿ: ಆಗ ಟಿಕೆಟ್ ದರವಾದರು ಎಷ್ಟು ಇತ್ತು ಗೊತ್ತೇ ? ರಿಸರ್ವ್ - ೩ ರೂ, ಫಸ್ಟ್ ಕ್ಲಾಸ್ -೨ ರೂ, ಸೆಕಂಡ್ ಕ್ಲಾಸ್ -೧ ರೂ.ಮತ್ತು ೫೦ ಪೈಸೆ.

ಲೇಖನ : ಶ್ರೀ.ಬಿ.ಆರ್.ಗಣೇಶ,ಸಂಜೆವಾಣಿ.
. (ಚಿತ್ರ ಕೃಪೆ : ಶ್ರೀ.ಹಾಲ್ದೊಡ್ಡೇರಿ ಸುಧೀಂದ್ರ, ಬೆಂಗಳೂರು.)

1 comments:

harish konaje said...

abba yenri idhu? cricket yakshagana? odhi khushi aithu, collection ge hatsup...!

Post a Comment