ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಪ್ರಾದೇಶಿಕ ಸುದ್ದಿ
ನೀರ್ಚಾಲು: ಕಳೆದ ಅಕ್ಟೋಬರ್ 17 ರಂದು ಎರ್ದುಂಕಡವು ಹೊಳೆಯಲ್ಲಿ ದಾರುಣವಾಗಿ ಮೃತಪಟ್ಟ ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲಾ ವಿದ್ಯಾರ್ಧಿಗಳಾದ ಅಜೀಷ್, ಅಜಿತ್, ಅಭಿಲಾಶ್, ರತನ್ ಕುಮಾರ್ ಅವರ ಕುಟುಂಬದ ಸಹಾಯಾರ್ಥವಾಗಿ ಜಿಲ್ಲೆಯ ವಿವಿಧ ಶಾಲೆಗಳಿಂದ, ಸಹೃದಯರಿಂದ ಸಂಗ್ರಹಿಸಿದ ರೂ. 1,81,603 ಸಹಾಯಧನವನ್ನು ಮಂಗಳವಾರ ಕಾಸರಗೋಡು ವಿದ್ಯಾಭ್ಯಾಸ ಜಿಲ್ಲಾ ಶಿಕ್ಷಣಾಧಿಕಾರಿ ಎನ್.ಕೆ.ಮೋಹನದಾಸ್ ಮೃತರ ಕುಟುಂಬಕ್ಕೆ ನೀಡಿದರು. ನಾರಾಯಣ ಮತ್ತು ರಾಘವ ಇವರು ಮೊತ್ತವನ್ನು ಸ್ವೀಕರಿಸಿದರು. ಶಾಲಾ ಆಡಳಿತ ಮಂಡಳಿ ಕಾರ್ಯದರ್ಶಿ ಜಯದೇವ ಖಂಡಿಗೆ, ಬದಿಯಡ್ಕ ಗ್ರಾಮ ಪಂಚಾಯತು ಸದಸ್ಯ ಎಂ.ಅಬ್ಬಾಸ್, ಶಾಲಾ ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷ ದಿವಾಕರ ಮಾನ್ಯ, ಶಾಲಾ ಮುಖ್ಯೋಪಾಧ್ಯಾಯ ಯು.ರವಿಕೃಷ್ಣ, ಕಾಸರಗೋಡು ಜಿಲ್ಲಾ ಪತ್ರಕರ್ತರ ಸಂಘಟನೆಯ ಅಧ್ಯಕ್ಷ ಸಿಬಿ ಜೋನ್ ಉಪಸ್ಥಿತರಿದ್ದರು.
ವರದಿ: ರವಿಶಂಕರ ದೊಡ್ಡಮಾಣಿ

0 comments:

Post a Comment