ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಭಕ್ತಿಸಿಂಚನ

ತುಳುನಾಡಿನ ಮದ್ಯ ಭಾಗದಲ್ಲಿ ಮೂಲಿಕಾಪುರವೆಂದು ನಾಮಾಂಕಿತ ಗೊಂಡಿರುವ ಇತಿಹಾಸ ಪ್ರಸಿದ್ದವಾದ ಮೂಲ್ಕಿಯಲ್ಲಿ ಹಿಂದೆ ಒಂಬತ್ತು ಮಾಗಣೆ (32ಗ್ರಾಮ)ಗಳನ್ನು ಒಳಗೊಂಡ ಈ ಪ್ರದೇಶದ ಉತ್ತರದಲ್ಲಿ ಶಾಂಭವಿ ನದಿ ,ದಕ್ಷಿಣದಲ್ಲಿ ನಂದಿನಿ (ಪಾವಂಜೆ ಹೊಳೆ),ಪಶ್ಚಿಮದಲ್ಲಿ ಸಮುದ್ರ ವಿದ್ದು ಈ ವ್ಯಾಪ್ತಿಯಲ್ಲಿ ಬರುವ ನದಿಗಳು,ಗುಡ್ಡ,ಬೆಟ್ಟ ಪ್ರದೇಶಗಳು ಇಲ್ಲಿನ ಚರಿತ್ರೆಯಲ್ಲಿ ಪ್ರಮುಖ ಪಾತ್ರವಹಿಸಿದ್ದು ಮುಲ್ಕಿ ಪ್ರದೇಶವು ಮೂಲಿಕೆಗಳಿಗೆ ಪ್ರಸಿದ್ಧವಾದುದರಿಂದ ಮೂಲಿಕಾ ಪುರವೆಂದು ಮತ್ತು ಶಾಂಭವಿ ನದಿಯಲ್ಲಿ ಚಲಿಸುತಿದ್ದ ಬೃಹತ್ ಸರಕು ದೋಣಿಗಳಿಂದ ಸುಂಕ(ಮೂಲಿ) ವಸೂಲಿ ಮಾಡುವ ಸ್ಥಳವಾದುದರಿಂದ ಮುಲ್ಕಿ ಎಂದು ಹೆಸರಾಯಿತು ಎಂದು ಇತಿಹಾಸ ತಿಳಿಸುತ್ತದೆ.ಧಾರ್ಮಿಕ ದೃಷ್ಠಿಯಿಂದ ನೋಡುವುದಾದರೆ ಶಾಂಭವಿ ನದಿ ಪರಿಸರ ಶಿವಾಲಯಗಳ ಬೀಡು ಎಂದು ಹೇಳಲಾಗುತ್ತಿದ್ದು ಈ ಪ್ರದೇಶದಲ್ಲಿ ಹನ್ನೋಂದು ಶಿವಾಲಯಗಳಿದ್ದವು ಎಂಬ ಪ್ರತೀತಿಯಿದೆ.ಕ್ರಿ.ಶ.1705ರ ವರೆಗಿನ ಪೋರ್ಚ್ ಗೀಸ ದಾಖಲೆಗಳು ಇನ್ನಿತರ ಸಮಕಾಲೀನ ಕವಿಗಳ ಬರಹಗಳು ಕಾರನಾಟೆ (ಈಗಿನ ಕಾರ್ನಾಡು) ಎಂದು ಉಲ್ಲೇಖಿಸುತ್ತಾ ಇಲ್ಲಿನ ದೇವಳಗಳು ಮತ್ತು ವ್ಯಾಪಾರ ಕೇಂದ್ರಗಳ ಬಗ್ಗೆ ಮಾಹಿತಿ ಇದೆ ಎಂದು ಖ್ಯಾತ ಇತಿಹಾಸ ಸಂಶೋಧಕ ಡಾ.ಕೆ.ಜಿ.ವಸಂತ ಮಾಧವರ ಮೂಲಿಕೆಯ ಇತಿಹಾಸ ಪುಸ್ತಕದಲ್ಲಿ ಬರೆಯಲ್ಪಟ್ಟಿದೆ.ಮುಲ್ಕಿ ಸೀಮೆಯ ಕಾರ್ನಾಡಿಗೆ ತನ್ನದೇ ಆದ ಇತಿಹಾಸವಿದೆ ಇದನ್ನು ಅಲ್ಲಿರುವ ಶಾಸನಗಳು,ವಿದೇಶಿಯರ ಬರಹಗಳು,ಮತ್ತು ಆಗಿನ ಕಾಲದ ಕವಿಗಳ ಸಾಹಿತ್ಯ ಕೃತಿಗಳು ಈ ಪ್ರದೇಶದ ಬಗ್ಗೆ ಬೆಳಕು ಚೆಲ್ಲುತ್ತದೆ.ಕಾರ್ನಾಡಿನ ಹರಿ-ಹರ ದೇವಾಲಯವು ಬಹಳ ಅಪರೂಪ ಇಲ್ಲಿ ಹರನು ಪಶ್ಚಿಮಾಭಿಮುಖ ನಾಗಿಯೂ ಹರಿಯು ಪೂರ್ವಾಭಿಮುಖನಾಗಿ ಎದುರು ಬದರಾಗಿದ್ದಾರೆ ಇಂತಹ ಬೆರಳೆಣಿಕೆಯ ದೇವಾಲಯಗಳು ನಮ್ಮ ದೇಶದಲ್ಲಿದೆ ಎಂದು ಬಲ್ಲವರ ಮಾತು.ಈ ಎರಡು ದೇವಾಲಯಗಳ ನಡುವೆ ವಿಶಾಲ ಸರೋವರವಿದ್ದು ಇಂದು ಉಪಯೋಗಿಸುವವರಿಲ್ಲದೆ ಪಾಳು ಬಿದ್ದಿದೆ.ವಿಷ್ಣು ಗುಡಿಯ ಲ್ಲಿರುವ ವಿಷ್ಣು ಮೂರ್ತಿಯ ಶಿಲ್ಪದ ರಚನೆ ಹೊಯ್ಸಳರ ಕಾಲದ್ದೆಂದು ಸುಮಾರು ಕ್ರಿ.ಶ.11ರಿಂದ 14ನೇ ಶತಮಾನ ಎಂದು ಅಲ್ಲಿರುವ ಶಾಸನಗಳು ಸೂಚಿಸುವುದಾದರೂ ಎಂದು ಪ್ರತಿಷ್ಟಾಪಿಸಲ್ಪಟ್ಟಿದೆ ಎಂದು ತಿಳಿಸುವ ದಾಖಲೆಗಳು ಸಿಕ್ಕಿಲ್ಲ ಲಭಿಸಿಲ್ಲ.


ಈ ಶಾಸನದಿಂದಾಗಿ ಕಾನರ್ಾಡು ಆಚಾರ್ಯ ಮಾಧ್ವರ ಕಾಲಕ್ಕಿಂತ ಹಿಂದೆಯೇ ವೈಷ್ಣವ ಆರಾಧನಾ ಕೇಂದ್ರವಾಗಿತ್ತು ಎಂದು ತಿಳಿಯಬಹುದು.ಇಲ್ಲಿರುವ ಈಶ್ವರ ದೇವಾಲಯದಲ್ಲಿ ಲಿಂಗ ರೂಪಿಯಾಗಿ ಹರನಿದ್ದರೆ ಸಂದರ ಕಸೂತಿ ಕೆತ್ತನೆಗಳನ್ನು ಹೊಂದಿರುವ ನಂದಿ ದೇವಸ್ಥಾನದ ತೀರ್ಥ ಮಂಟಪ ದಲ್ಲಿದೆ.ಇಲ್ಲಿನ ರುದ್ರ ದೇವರಿಗೆ ಅಭಿಶೇಕ ಬಹಳ ಪ್ರಿಯವಾದ ಸೇವೆಯಾಗಿದ್ದು ದೂರದ ಊರುಗಳಿಂದ ಬರುವ ಭಕ್ತಾದಿಗಳಿಂದ ಬಹಳ ಸಂಖ್ಯೆಯಲ್ಲಿ ರುದ್ರಾಭಿಶೇಖ ಬಹಳ ವಿಜೃಂಭಣೆಯಿಂದ ಜರಗುತ್ತದೆ.ಹರಿ ದೇವಳದಲ್ಲಿ ವಿಷ್ಣು ಅಲಂಕಾರ ಪ್ರಿಯನಾಗಿದ್ದು ಸರ್ವಾಲಂಕಾರ ಪೂಜೆ ಇಲ್ಲಿ ನ ವೈಶಿಷ್ಯ ಅಲ್ಲದೆ ಈ ದೇವಳಗಳು ಮದುವೆಯಾಗದ ಯುವಕ ಯುವತಿಯರ ನೆಂಟಸ್ತಿಕೆ ಕೂಡುವಿಕೆಗಾಗಿ ಪಾರ್ವತೀ ಸ್ವಯಂವರ ಪೂಜೆಯಲ್ಲಿ ಪ್ರಸಿದ್ಧಿ ಪಡೆದಿದೆ.ಮಾತ್ರವಲ್ಲದೆ ಇಲ್ಲಿ ನ ಸ್ಥಳೀಯ ದೈವಗಳಾದ ರಕ್ತೇಶ್ವರಿ,ಬ್ರಹ್ಮ ಮತ್ತು ಧರ್ಮಸ್ಥಾನಗಳ ಆರಾಧನಾ ಕೇಂದ್ರಗಳು ಇಲ್ಲಿನ ಪ್ರದೇಶಕ್ಕೆ ಚೈತ್ಯನ್ಯವನ್ನು ತಂದಿದೆ.
ದೇಶದಲ್ಲಿಯೇ ವಿಶಿಷ್ಟವಾದ ಈ ಮಂದಿರಗಳು ಭಕ್ತಾಧಿಗಳಿಗೆ ತಮ್ಮ ಆಸೆ ಆಕಾಂಕ್ಷೆಗಳನ್ನು ಪೂರೈಸುವಂತ ಉತ್ತಮ ಸ್ಥಳಗಳಾಗಿ ಬೆಳಗುತ್ತಿವೆ.
ಭಾಗ್ಯವಾನ್ ಮುಲ್ಕಿ

0 comments:

Post a Comment