ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ
ಸಾಮರಸ್ಯ ಪೂರ್ಣ ಅಭಿವೃದ್ಧಿ ಪ್ರಕ್ರಿಯೆಗಾಗಿ ಸಾಮರಸ್ಯ ಗ್ರಾಮ ಯೋಜನೆ : ಸದನದಲ್ಲಿ ಮುಖ್ಯಮಂತ್ರಿಗಳ ಘೋಷಣೆ

ಬೆಂಗಳೂರು:ಪ್ರಸಕ್ತ ಸರಕಾರದ ಅವಧಿಯಲ್ಲಿ ಆಯವ್ಯಯದ ಗಾತ್ರವನ್ನು 1.00 ಲಕ್ಷ ಕೋಟಿ ರೂ ಗಳಿಗೆ ಹೆಚ್ಚಿಸುವ ಗುರಿ ಹೊಂದಲಾಗಿದೆ ಎಂದು ಮುಖ್ಯಮಂತ್ರಿಯವರು ತಿಳಿಸಿದರು. ಅವರು ಇಂದು ಆಯವ್ಯಯದ ಚರ್ಚೆಗೆ ಉತ್ತರಿಸುತ್ತಿದ್ದರು.ವಿರೋಧ ಪಕ್ಷಗಳ ನಾಯಕರ ಟೀಕೆ, ಸಲಹೆ , ಸೂಚನೆಗಳನ್ನು ಗಮನದಲ್ಲಿರಿಸಿಕೊಂಡು ಕಾರ್ಯರೂಪಕ್ಕೆ ತರಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದ ಮುಖ್ಯಮಂತ್ರಿಗಳು ಜಗತ್ತಿನಾದ್ಯಂತ ಆರ್ಥಿಕ ಹಿನ್ನೆಡೆ ಇದ್ದು ಸಂಕಷ್ಟ ಪರಿಸ್ಥಿತಿ ಇರುವ ಸಂದರ್ಭದಲ್ಲಿಯೂ ಇತರ ರಾಜ್ಯಗಳಿಗೆ ಹೋಲಿಸಿದಾಗ ಕರ್ನಾಟಕದ ಸಾಲದ ಮೊತ್ತ ಬಹಳ ಕಡಿಮೆ. ರಾಜ್ಯದ ತೆರಿಗೆ ಸಂಗ್ರಹಣೆ ಅತ್ಯುತ್ತಮ, ವಿತ್ತೀಯ ಕೊರತೆ ಕೇಂದ್ರದ ಮಿತಿಯಲ್ಲಿದ್ದು ಆರ್ಥಿಕ ನಿರ್ವಹಣೆಗೆ 13ನೇ ಹಣಕಾಸು ಆಯೋಗ, ಭಾರತೀಯ ರಿಸರ್ವ್ ಬ್ಯಾಂಕ್ ಮತ್ತು ಯೋಜನಾ ಆಯೋಗವು ಮುಕ್ತಕಂಠದ ಶ್ಲಾಘನೆಮಾಡಿದೆ ಎಂದರು.

ವಿದ್ಯುತ್ ಕ್ಷೇತ್ರಕ್ಕೆ ಅತ್ಯಂತ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಈಗಾಗಲೇ ಪ್ರಾರಂಭಗೊಂಡ ಯೋಜನೆಗಳನ್ನು ಅವಧಿಯೊಳಗೆ ಪೂರ್ಣಗೊಳಿಸಲು ಕ್ರಮ. ಪವನ ವಿದ್ಯುತ್, ಕಿರುಜಲ ವಿದ್ಯುತ್ ಯೋಜನೆಗಳಿಗೆ ಹೆಚ್ಚಿನ ಗಮನ ನೀಡಲಾಗುವುದು. 5000 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಗುರಿಯನ್ನುಯಿರಿಸಿಕೊಳ್ಳಲಾಗಿದೆ ಎಂದರು.

ಕೃಷಿ ಉತ್ಪಾದನೆ ಹೆಚ್ಚಿಸುವ ಮೂಲಕ ಆಹಾರ ಉತ್ಪಾದನೆಯಲ್ಲಿ ಸ್ವಾವಲಂಭನೆ ಸಾಧಿಸುವ ಮೂಲಕ ಜಿ.ಡಿ.ಪಿ. ಯನ್ನ ಶೇ 9 ರಷ್ಟು ಸಾಧಿಸುವ ಗುರಿಯಿದೆ ಎಂದರು.

ಪ್ರಧಾನ ಮಂತ್ರಿಗಳು ಪ್ರತಿಬಾರಿಯು ತಾವು ಭೇಟಿಮಾಡಿದ ಸಂದರ್ಭದಲ್ಲಿ ಬೆಂಗಳೂರು ನಗರದ ಅಭಿವೃದ್ಧಿ ಕುರಿತು ವಿಚಾರಿಸುವುದು ಸಂತಸದ ಸಂಗತಿಯಾಗಿದೆ. ಈ ಸಂದರ್ಭದಲ್ಲಿ ನಾವೆಲ್ಲರೂ ಒಟ್ಟಾಗಿ ನಗರದ ಅಭಿವೃದ್ಧಿಗಾಗಿ ಹೆಚ್ಚಿನ ಅನುದಾನವನ್ನು ಕೇಂದ್ರದಿಂದ ದೊರಕಿಸಲು ಪ್ರಯತ್ನಿಸಬೇಕೆಂದರು.

ಗ್ರಾಮೀಣ ಪ್ರದೇಶಗಳಲ್ಲಿ ಸಂಘರ್ಷದ ವಾತಾವರಣ ನಿವಾರಿಸಿ ಸಾಮರಸ್ಯದ ಬದುಕಿಗೆ ನಾಂದಿ ಹಾಡಿ ಅಭಿವೃದ್ಧಿ ಪ್ರಕ್ರಿಯೆಯನ್ನು ಸುಧಾರಿಸಲು 2010-11 ನೇ ಸಾಲಿನಿಂದ ಪ್ರೋತ್ಸಾಹಧನ ನೀಡಲು ಸಾಮರಸ್ಯ ಯೋಜನೆ ಪ್ರಾರಂಭಿಸಲಾಗುವುದು.

ಈ ಯೋಜನೆಯಡಿ ಪ್ರೋತ್ಸಾಹಧನಕ್ಕೆ ಅರ್ಹವಾಗಲು ಈ ಕೆಳಕಂಡ ನಿಬಂಧನೆಗಳಿಗೆ ಒಳಪಡಬೇಕಾಗುತ್ತದೆ.

ಗ್ರಾಮವು ಸಂಘರ್ಷ, ಘರ್ಷಣೆ, ಜಗಳ, ತಂಟೆಗಳಿಂದ ಮುಕ್ತವಾಗಿರಬೇಕು.
ಗ್ರಾಮದಲ್ಲಿ ಸೌಹಾರ್ದ-ಸಾಮರಸ್ಯದಿಂದ ಕೂಡಿದ ವಾತಾವರಣ ಇರಬೇಕು.
ಗ್ರಾಮದಲ್ಲಿ ಯಾವುದೇ ಸಂಘರ್ಷಕ್ಕೆ ಎಡೆಮಾಡಿಕೊಡದೆ ಗ್ರಾಮದಲ್ಲಿನ ಸಮಸ್ಯೆಗಳನ್ನು ಪರಸ್ಪರ ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳುವ ವಾತಾವರಣವಿರಬೇಕು.
ಒಗ್ಗಟನ್ನು ಪ್ರದರ್ಶಿಸುವ ಮೂಲಕ ಗ್ರಾಮದಲ್ಲಿ ಶಾಂತಿ, ಸುವ್ಯವಸ್ಥೆ, ಸಾಮಾಜಿಕ ಸಾಮರಸ್ಯ ಕಾಯ್ದುಕೊಳ್ಳುವುದು.
ಗ್ರಾಮವನ್ನು ಸರ್ವಾಂಗೀಣ ಅಭಿವೃದ್ಧಿಯತ್ತ ಕೊಂಡ್ಯೊಯಲು ನೆರವಾಗುವಂತೆ ಸಾಧ್ಯವಾದರೆ ಚುನಾವಣೆ ಅಥವಾ ಇನ್ನಿತರೆ ವಿಷಯಗಳಲ್ಲಿ ತೀವ್ರ ಭಿನ್ನಮತಕ್ಕೆ ಎಡೆಮಾಡಿ ವೈಷಮ್ಯಕ್ಕೆ ತಿರುಗದೆ ಒಮ್ಮತ ನಿರ್ಧಾರಕ್ಕೆ ಬರುವ ವಾತಾವರಣ ಇರಬೇಕು ಈ ವಿಚಾರಗಳನ್ನು ತಿಳಿಸಿದರು.

ಬೆಳಗಾವಿ ವಿಶ್ವವಿದ್ಯಾಲಯ

ಬೆಳಗಾವಿಯಲ್ಲಿರುವ ಕಿತ್ತೂರು ರಾಣಿ ಚೆನ್ನಮ್ಮ ಸ್ನಾತಕೋತ್ತರ ಕೇಂದ್ರವನ್ನು 2010-11 ನೇ ಸಾಲಿನಲ್ಲಿ ನೂತನ ವಿಶ್ವವಿದ್ಯಾಲಯ ಎಂದು ಘೋಷಿಸಿ ಅಭಿವೃದ್ಧಿಪಡಿಸಲಾಗುವುದು.

ಉಚಿತ ಬೈಸಿಕಲ್ ಯೋಜನೆ:

8ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾಥಿ/ವಿದ್ಯಾರ್ಥಿನಿಯರಿಗೆ ನೀಡುತ್ತಿರುವ ಉಚಿತ ಬೈಸಿಕಲ್ ಸೌಲಭ್ಯವನ್ನು 2010-11 ನೇ ಸಾಲಿನಿಂದ ಬಸ್ಪಾಸ್ ಮತ್ತು ಹಾಸ್ಟೆಲ್ ಸೌಲಭ್ಯ ಪಡೆಯುತ್ತಿರುವ ವಿದ್ಯಾರ್ಥಿಗಳಿಗೂ ವಿಸ್ತರಿಸಲಾಗುವುದು.

ತಂಬಾಕು ಮೇಲಿನ ತೆರಿಗೆ ಇಳಿತ:

ತಂಬಾಕು ಉತ್ಪನ್ನಗಳ ಮೇಲಿನ ತೆರಿಗೆಯನ್ನು ಶೇ 12.5 ರಿಂದ ಶೇ 15 ಕ್ಕೆ ಏರಿಕೆ ಹಾಗೂ ಅವುಗಳ ಮೇಲೆ ಗರಿಷ್ಠ ಚಿಲ್ಲರೆ ಬೆಲೆ ಆಧಾರದ ಮೇಲೆ ಮೌಲ್ಯವರ್ಧಿತ ತೆರಿಗೆ ವಿಧಿಸಲು ನಾನು ಮುಂಗಡ ಪತ್ರದಲ್ಲಿ ತಾವು ಪ್ರಸ್ತಾಪಿಸಿದ್ದಾಗಿಯೂ, ಆದರೆ ಈಗಾಗಲೇ ತಂಬಾಕು ಉತ್ಪನ್ನಗಳ ಮೇಲೆ ವಿಧಿಸಲಾಗುತ್ತಿರುವ ತೆರಿಗೆ ಹೆಚ್ಚಾಗಿದೆ ಹಾಗೂ ಅದರಂತೆ ಅವುಗಳ ಮೇಲಿನ ಮೌಲ್ಯವರ್ಧಿತ ತೆರಿಗೆ ಏರಿಕೆ ಪ್ರಸ್ತಾಪನೆಯನ್ನು ಪುನರ್ ಪರಿಶೀಲಿಸಲು ಮಾನ್ಯ ವಿರೋಧ ಪಕ್ಷದ ನಾಯಕರು ಮಾಡಿರುವ ಸಲಹೆಯನ್ನು ಪರಿಗಣಿಸಿ ಜೊತೆಗೆ ನೆರೆಯ ತಮಿಳುನಾಡು, ಕೇರಳ ಮತ್ತು ಆಂಧ್ರಪ್ರದೇಶಗಳಲ್ಲಿ ತೆರಿಗೆ ದರ ಕಡಿಮೆ ಇರುವುದರಿಂದ ಕಾನೂನುಬಾಹಿರವಾಗಿ ಆ ರಾಜ್ಯಗಳಿಂದ ತಂಬಾಕು ಉತ್ಪನ್ನಗಳನ್ನು ತಂದು ನಮ್ಮ ರಾಜ್ಯದಲ್ಲಿ ಮಾರಾಟಮಾಡಿ ತೆರಿಗೆ ವಂಚಿಸುವ ಸಾಧ್ಯತೆಗಳು ಇರುವ ಅಂಶವನ್ನು ಪರಿಗಣಿಸಿ ತಂಬಾಕು ಉತ್ಪನ್ನಗಳ ಮೇಲಿನ ಪ್ರವೇಶ ತೆರಿಗೆಯನ್ನು ಶೇ 4 ರಿಂದ 2 ಕ್ಕೆ ಇಳಿಸಲು ಉದ್ದೇಶಿಸಲಾಗಿದೆಯೆಂದು ಮುಖ್ಯಮಂತ್ರಿಗಳು ತಿಳಿಸಿದರು.

ಶಾಲೆಗಳಿಗೆ ಅನುದಾನ:

1987-95 ರವರೆಗಿನ ಪ್ರಾಥಮಿಕ, ಪ್ರೌಢ ಮತ್ತು ಪದವಿಪೂರ್ವ ಕಾಲೇಜುಗಳಿಗೆ ಆರ್ಥಿಕ ಮಿತವ್ಯಯ ಆದೇಶವನ್ನು ಸಡಿಲಿಸಿ 1-4-2010 ರಿಂದ ಅನುದಾನವನ್ನು ನೀಡಲಾಗುತ್ತದೆ. ಜಿಲ್ಲಾ ಪಂಚಾಯಿತಿಗಳಿಗೆ 2010-11 ರಿಂದ 1 ಕೋಟಿ ರೂ ಗಳ ಅನಿರ್ಬಂಧಿತ ಅನುದಾನ (ಅನ್ಟೈಟ್ ಗ್ರಾಂಟ್) ಬಿಡುಗಡೆ ಮಾಡಲಾಗುವುದು ಎಂದು ಮುಖ್ಯಮಂತ್ರಿಗಳು ಸದನಕ್ಕೆ ತಿಳಿಸಿದರು.

0 comments:

Post a Comment