ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಸಾಹಿತ್ಯ
ನಿನ್ನೆಯ ಸಂಚಿಕೆಯಿಂದ...

ಹ್ಹಾ... ಅಂದಹಾಗೆ ಆ ದಿನ ನಾನು , ಪ್ರಿಯಾಂಕ , ಮಿ.ಕಾರ್ತಿಕ್ ಕುಮಾರ್ , ಬಸ್ಸಿಗಾಗಿ ಕಾಯುತ್ತಾ ನಿಂತುಕೊಂಡಿದ್ದೆವು. ಪ್ರಿಯಾಂಕಾ ಸ್ವಲ್ಪ ಮುಂದಕ್ಕೆ ನಡೆದು ಒಂದು ಅಂಗಡಿಗೆ ಹೋದಳು. ಯಾವುದೋ ಚ್ಯುಯಿಂಗಮ್ ತೆಗೆದುಕೊಂಡು ಬಂದಳು. ಅವಳ ಹಿಂದೆ ನಮ್ಮ ಹೀರೋ ಕಾರ್ತಿಕ್ ಕುಮಾರ್ ಅಂಗಡಿಗೆ ಹೋದ. ಅಂಗಡಿಯವ ಜೋರಾಗಿ ಏನ್ ಬೇಕು ಅಂತ ಕೇಳಿದ. ಕಾರ್ತಿಕ್ ಗೆ ಏನಾದರೂ ತೆಗೆದುಕೊಳ್ಳಲೇ ಬೇಕಾಯಿತು. ಆದರೆ ಅಂಗಡೀಲಿ ಏನು ತೆಗೆದುಕೊಳ್ಳುಬಹುದು ...ಗುಟ್ಕಾ ನ ಹೊರತು ಪಡಿಸಿ... ಹಾ ... ಅವನೊಂದು ಗುಟ್ಕಾ ಪ್ಯಾಕೆಟ್ ತೆಗೆದುಕೊಂಡ...ಪ್ರಿಯಾಂಕಾ ಅಂಗಡಿಯಿಂದ ದೂರ ಸರಿದಿದ್ದರಿಂದ ಧೈರ್ಯದಿಂದಲೇ ತೆಗೆದುಕೊಂಡ. ಇಬ್ಬರೂ ತಮ್ಮ ಹಳೆ ಜಾಗಕ್ಕೆ ಬಂದು ನಿಂತರು. ಪ್ರಿಯಾಂಕಾಳ ಬಾಯಲ್ಲಿ ಚ್ಯುಯಿಂಗಮ್ ... ಕಾರ್ತಿಕ್ ನ ಬಾಯಲ್ಲಿ ಗುಟ್ಕಾ ಇತ್ತು. ಏನು ಆಶ್ಚರ್ಯ ನೋಡಿ... ಶ್ರೀಮಂತ ವರ್ಗಕ್ಕೆ ಸೇರಿದ ಯುವಕ , ಯುವತಿಯರು ಗುಟ್ಕಾ ತಿನ್ನೋದು ಕಡಿಮೆ. ಅವರೇನಿದ್ದರೂ ಚ್ಯುಯಿಂಗಮ್ . ಒಂದು ವೇಳೆ ಯಾರಾದರೂ ಗುಟ್ಕಾ ತಿನ್ನುತ್ತಿದ್ದರೆ ಈ ನೂಡಲ್ ವರ್ಗದವರು ಅವರನ್ನು ಹಳ್ಳಿಗುಗ್ಗು ಅನ್ನುತ್ತಾರೆ. ಕಾಂಕ್ರೀಟ್ ಕಾಡಿನಲ್ಲಿ ಬೆಳೆದವರಿಗೆ ಉಳಿದವರೆಲ್ಲ ಹಳ್ಳಿಗುಗ್ಗುಗಳಾಗಿಯೇ ಕಾಣುತ್ತಾರೆ. ಒಬ್ಬ ಅರ್ಧಂಬರ್ಧ ಕಲಿತ ರಾಜ್ಯಶಾಸ್ತ್ರದ ವಿದ್ಯಾರ್ಥಿಯು ಚ್ಯುಯಿಂಗಮ್ ಜಗಿಯುವವರನ್ನು ಮತ್ತು ಗುಟ್ಕಾ ಜಗಿಯುವವರನ್ನು ಸಮಾಜದ ಎರಡು ವರ್ಗದ ಉದಾಹರಣೆಗಳಾಗಿ ನೋಡಬಹುದು. ಆಧುನೀಕತೆ ಹುಟ್ಟಿಸಿರುವ ಭ್ರಮೆ ಚ್ಯುಯಿಂಗಮ್ ಜಗಿಯುವವರು ಗುಟ್ಕಾ ಜಗಿಯುವವರನ್ನು ಕೀಳಾಗಿ ನೋಡುವಂತೆ ಮಾಡಿದೆ.
ಪ್ರಿಯಾಂಕ ಚ್ಯುಯಿಂಗಮ್ ಜಗಿಯುತ್ತಲೇ ಇದ್ದಳು. ಅಷ್ಟರಲ್ಲಿ ಬಸ್ ಬಂತು. ಪಣ್ಯಾತ್ಮ ಡ್ರೈವರ್ , ಬಸ್ ನಿಲ್ಲಿಸಿದ. ಒಮ್ಮೆ ನಾನು ಬಸ್ಸಿಗೆ ಕಾಯ್ತಾ ನಿಂತಿದ್ದೆ. ಬಸ್ಸೇನೋ ಬಂತು. ಕಂಡೆಕ್ಟರ್ ಕಿಟಿಕಿಯಿಂದ ಹೊರನೋಡಿದ. `ಎಲ್ಲಾ ಪಾಸ್ ಗಿರಾಕಿ ರೈಟ್ ' ಎಂದ ... ನನಗೆ ಗೊತ್ತು ನನಗೆ ಮತ್ತು ನನ್ನ ಗೆಳೆಯರಿಗೆ ಆ ದಿನ ತೀವ್ರ ಮುಖಭಂಗವಾಗಿತ್ತು.

ನಾನೇನಾದ್ರೂ ಆ ಸಂದರ್ಭದಲ್ಲಿ ಮುಖ್ಯಮಂತ್ರಿಯಾಗಿದಿದ್ರೆ ರಾಜೀನಾಮೆ ಕೊಟ್ಟು ಬಿಡುತ್ತಿದ್ದೆ. ರಿಟೇರ್ಡ್ ಆಗಿ ಮನೇಲಿ ಜಪ ಮಾಡ್ತಾ ಕುಳಿತಿರೋ ಒಬ್ಬ ಕಾಲೇಜು ಉಪನ್ಯಾಸಕ ಏನಾದ್ರೂ ಈ ಘಟನೆ ಬಗ್ಗೆ ಕೇಳಿದ್ರೆ ಖಂಡಿತ ಕಾಲ ಕೆಟ್ಟೋಯ್ತು ಅನ್ನುತ್ತಿತ್ತು. ಆದರೆ ಪ್ರಿಯಾಂಕಾಳ ಲಕ್ ಚೆನ್ನಾಗಿತ್ತು. ಆ ದಿನ ಬಸ್ಸು ನಿಂತಿತ್ತು. ಪ್ರಿಯಾಂಕಾ ಎದುರುಗಡೆ ಬಾಗಿಲಿನಿಂದ ಬಸ್ ಏರಿದಳು. ನಾನು ಮತ್ತು ಕಾರ್ತಿಕ್ ಕುಮಾರ್ ಹಿಂದಿನ ಬಾಗಿಲಿನಿಂದ ಬಸ್ ಏರಿದೆವು. ಬಸ್ ಸಿಕ್ಕಾಪಟ್ಟೆ ರಶ್ ನೋಡಿ ಆ ದಿನ. ನಮಗ್ಯಾರಿಗೂ ಸೀಟು ಸಿಗಲಿಲ್ಲ. ಪ್ರಿಯಾಂಕ ಎದುರುಗಡೆ ನಿಂತುಕೊಂಡಳು. ನಾನು ಕಾರ್ತಿಕ್ ಹಿಂದುಗಡೆ ನಿಂತೆವು. ಆ ರಶ್ ನಲ್ಲೂ ತನ್ನ ಇನ್ ಸರ್ಟ್ ಕಾಪಾಡೋದು ಒಂದು ರೀತಿಯಲ್ಲಿ ಇಂಪಾಸಿಬಲ್ ಆಗಿತ್ತು... ಆದರೂ ಛಲ ಬಿಡದ ತ್ರಿವಿಕ್ರಮನಂತೆ ತೀವ್ರವಾಗಿ ಹೋರಾಡಿ ಜನರನ್ನೆಲ್ಲ ದೂರ ದೂರ ಸರಿಸುತ್ತ ಇನ್ ಸರ್ಟ್ ಕಾಪಾಡಿಕೊಳ್ಳಲು ಪ್ರಯತ್ನಿಸುತ್ತಿದ್ದ ಕಾರ್ತಿಕ್ ಕುಮಾರ್. ಸ್ವಲ್ಪ ಬಗ್ಗಿದ, ಸ್ವಲ್ಪ ಬಲಕ್ಕೆ ತಿರುಗಿದ... ನಂತರ ಎಡಕ್ಕೆ ತಿರುಗಿದ... ಎಡಗಾಲನ್ನು ಬಗ್ಗಿಸಿ ನಿಂತ... ಪ್ಯಾಂಟು ಶರ್ಟಿನ ಇಸ್ತ್ರಿ ಕಾಪಾಡಿಕೊಳ್ಳಲು ರಾಯರ ಹೋರಾಟವೋ ಹೋರಾಟ... ಅವನ ಈ ಪ್ರಯತ್ನಗಳನ್ನು ನೋಡಿದರೆ ಇವನು ಕೂಡ ನನ್ನ ರೂಮ್ ಮೇಟ್ ನ ಹಾಗೆಯೇ ಬೆಳಗ್ಗೆ ಬೇಗ ಎದ್ದು ಮೈಯನ್ನು ಅರ್ಧ ಬಗ್ಗಿಸಿ ಇಸ್ತ್ರಿ ಹಾಕಿರಬೇಕು ಎಂದು ನನಗೆ ಅನಿಸಿತು. ಬಸ್ಸಿನಲ್ಲಿ ಏನೇನೋ ಕಸರತ್ತು ಮಾಡಿ ಕಾರ್ತಿಕ್ ಕುಮಾರ್ ಕುತ್ತಿಗೆಯನ್ನು ಉದ್ದ ಮಾಡಿ ಪ್ರಿಯಾಂಕಾಳನ್ನು ನೋಡುತ್ತಿದ್ದ. ಒಂದು ರೀತಿಯಲ್ಲಿ ಅವನು ಒಂಟೆಯಂತೆ ಕಾಣುತ್ತಿದ್ದ...

ನಾಳಿನ ಸಂಚಿಕೆಗೆ...

0 comments:

Post a Comment