ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಸಾಹಿತ್ಯ
ನಿನ್ನೆಯ ಸಂಚಿಕೆಯಿಂದ....
ಈ ಪ್ರೀತಿ ಅಮರವಲ್ಲ ಅಂತ ವನ್ ಫೈನ್ ಡೇ ನಾನು ಕನ್ಕ್ಲೂಡ್ ಮಾಡಿದೆ. ಆ ದಿನ ವಿಶೇಷವಾಗಿರಲಿಲ್ಲ. ಒಂದು ಘಟನೆಯನ್ನು ಹೊರತುಪಡಿಸಿದರೆ. ಆ ದಿನ ಬೆಳಗ್ಗೆ ನಾನು ಹಾಸ್ಟೆಲ್ ನಿಂದ ಬಸ್ ಸ್ಟಾಪ್ ಗೆ ಹೋಗಿ ತಲುಪಿದೆ. ನಮ್ಮ ಕಾರ್ತಿಕನೂ ನನ್ನ ಜೊತೆಗೆ ಹಾಸ್ಟೆಲಿನಿಂದ ಹೊರಟ. ಆದರೆ ನನಗಿಂತ ಹತ್ತು ನಿಮಿಷ ತಡವಾಗಿ ಬಸ್ ಸ್ಟಾಪ್ ಗೆ ಬಂದು ತಲುಪಿದ. ಯಾಕೆ ಅಂತ ನಿಮಗೆ ಹೇಳಬೇಕಾಗಿಲ್ಲ. ಕಾರ್ತಿಕ್ ಎಂ.ಬಿ.ಎ.ಡಿಪಾರ್ಟ್ ಮೆಂಟ್ ನ ಒಂದು ಸುತ್ತು ಹೊಡೆದೇ ಬಂದಿದ್ದ. ಕಾರ್ತಿಕ್ ಗಿಂತ ಸ್ವಲ್ಪ ಮುಂಚೆ ಪ್ರಿಯಾಂಕ ಬಸ್ ಸ್ಟಾಪ್ ಬಂದು ತಲುಪಿದ್ದಳು. ಅವಳ ಬೆನ್ನಿಗೆ ಬಂದ ನೋಡಿ ನಮ್ಮ ಹೀರೋ ಮಿ.ಕಾರ್ತಿಕ್ ಕುಮಾರ್. ಸುರಸುಂದರಾಂಗ ಮನ್ಮಥರಾಯ ... ಆಹಾ ಕಡಕ್ ಇಸ್ತ್ರಿ ಹಾಕಿದ ಫುಲ್ ಶರ್ಟ್ ...ಇಸ್ತ್ರಿ ಹಾಕಿದ ಜೀನ್ಸ್ ಪ್ಯಾಂಟು. ಕಪ್ಪು ಕನ್ನಡಕ... ದೇವರೇ ಆ ಸೆಕೆಯಲ್ಲೂ ಹಾಕಿಕೊಂಡಿದ್ದ.ನನಗೆ ಭಾರತೀಯ ವೇಷ ಭೂಷಣಗಳ ಬಗ್ಗೆ ಇವತ್ತಿಗೂ ಸಹ ಎರಡು ಅನುಮಾನಗಳಿವೆ. ಮೊದಲನೆಯದಾಗಿ ಬಹಳ ಜನ ಕತ್ತಲಾದ ಮೇಲೂ ಕಪ್ಪು ಕನ್ನಡಕ ಹಾಕಿಕೊಳ್ಳುತ್ತಾರೆ ಯಾಕೆ? ಅದ್ಯಾಕೋ ಭಾರತೀಯರಿಗೆ ಸೌಂದರ್ಯ ಪ್ರಜ್ಞೆ ಸ್ವಲ್ಪ ಹೆಚ್ಚೇ ಇದೆ ಅಂತ ನನಗೆ ಆಗಾಗ ಅನಿಸುತ್ತದೆ. ಅದಕ್ಕೆ ಅಲ್ವಾ ಸುಡುವಂತಹ ಸೆಕೆ ಇದ್ರೂ ಟೈ ಕೋಟು ಎಲ್ಲಾ ಹಾಕಿ ಕೊಳ್ಳುವರು ನಮ್ಮ ದೇಶದಲ್ಲಿ ಇರೋದು.
ಇಂಗ್ಲೆಂಡಿನ ಚಳಿಗೆ ಅವರಿಗೆ ಟೈ ಕೋಟು ಬೇಕಿತ್ತು. ಅದಕ್ಕೆ ಅವರು ಹಾಕಿ ಕೊಂಡ್ರು. ಆದರೆ ನಮ್ಮ ಜನ ಭಾರೀ ಸೆಕೆಯಲ್ಲಿಯೂ ಟೈ, ಕೋಟು ಎಲ್ಲಾ ತೊಡೋದನ್ನು ನಾನು ಎಷ್ಟೋ ಸಭೆ ಸಮಾರಂಭಗಳಲ್ಲಿ ನೋಡಿದ್ದೇನೆ. ಬಹಳ ಬಿಸಿಕಾರಿ ಸೌಂದರ್ಯಪ್ರಜ್ಞೆ ಮಾರಾಯ್ರೇ ನಮ್ಮದು...

ಇನ್ನೊಂದು ಜೀನ್ಸ್ ಪ್ಯಾಂಟ್ ನ ವಿಚಾರ. ಜೀನ್ಸ್ ಪ್ಯಾಂಟನ್ನು ವಿದೇಶದಲ್ಲಿ ಶ್ರಮ ಜೀವಿಗಳು ತೊಡುತ್ತಿದ್ದರು. ಅವರು ಕೆಲಸ ಮಾಡುವುದರಿಂದ ಅವರ ಜೀನ್ಸು ಮಣ್ಣಾಗುತ್ತಿತ್ತು. ಬಣ್ಣ ಕುಂದುತ್ತಿತ್ತು. ಆದ ಕಾರಣ ಕಲರ್ ಫೇಡ್ ಜೀನ್ಸ್ ಎಂಬ ಹೊಸ ವಿಧದ ಪ್ಯಾಂಟು ಅಸ್ತಿತ್ವಕ್ಕೆ ಬಂತು. ಈಗ ನಮ್ಮ ಯುವಕರು ಹೊಸ ಕಲರ್ ಫೇಡ್ ಜೀನ್ಸೇ ಖರೀದಿಸುತ್ತಾರಲ್ಲ... ಹೊಸ ಬಣ್ಣ ಕುಂದಿದ ಜೀನ್ಸ್ ತೊಡುತ್ತಾರಲ್ಲಾ... ಅನುಕರಣೆಯ ಪರಮಾವಧಿ.ಹಾ...ನಾನು ಏನು ಹೇಳ್ತಿದ್ದೆ ಅಂದ್ರೆ ಆ ದಿನ ಬಸ್ ಸ್ಟಾಪ್ ನಲ್ಲಿ ನಾನು ಬಂದು ನಿಂತ ನಂತರ ಪ್ರಿಯಾಂಕಾ ಬಂದಳು. ನಂತರ ಮಿ.ಕಾರ್ತಿಕ್ ಕುಮಾರ್ ಸಹ ಬಂದ. ಪ್ರಿಯಾಂಕ ಮುಂಬಯಿಯವಳಾಗಿದ್ದಳು. ಅವಳ ಅಪ್ಪ ಆಗರ್ಭ ಶ್ರೀಮಂತನಾಗಿದ್ದ. ಅವಳು ಅಮೇರಿಕಾದವರ ಶೈಲಿಯಲ್ಲಿ ಇಂಗ್ಲಿಷ್ ಶಬ್ಧಗಳನ್ನು ಉಚ್ಛಾರ ಮಾಡುತ್ತಿದ್ದಳು. ಕಾಲುಗಳನ್ನು ಬಿಗಿದಪ್ಪಿದ ಜೀನ್ಸ್ ತೊಡುತ್ತಿದ್ದಳು. ಕಾಲುಗಳೆರಡು ಜೀನ್ಸ್ ನಿಂದ ಹೊರಬರಲಾಗದೆ ಒದ್ದಾಡುತ್ತಿದ್ದವೇನೋ ಅನಿಸುತ್ತಿತ್ತು.


ಶಾರ್ಟ್ ಆಗಿ ಹೇಳಬೇಕಾದರೆ ಅವಳು ಪೋರ್ಕ್ ನಲ್ಲಿ ನೂಡಲ್ಸ್ ತಿನ್ನುವ ವರ್ಗಕ್ಕೆ ಸೇರಿದವಳಾಗಿದ್ದಳು. ನಮ್ಮ ಕಾರ್ತಿಕ್ ಕುಮಾರ್ ಭಟ್ರ ಅಂಗಡಿಯ ಗೋಳಿಬಜೆ ತಿನ್ನುವ ವರ್ಗಕ್ಕೆ ಸೇರಿದವನಾಗಿದ್ದ. ಒಬ್ಬ ಟಿಪಿಕಲ್ ಇಂಡಿಯನ್ ಮಿಡಲ್ ಕ್ಲಾಸ್ ಯುವಕನಾಗಿದ್ದ. ಪ್ರಿಯಾಂಕ ಯಾವ ಕ್ಷಣದಲ್ಲೂ ಶ್ರೀರಾಮ ಸೇನೆಯವರಿಂದ ಪೆಟ್ಟು ತಿನ್ನಬಹುದಾದ ರೀತಿಯ ಹುಡುಗಿಯಾಗಿದ್ದಳು...
ನಾಳಿನ ಸಂಚಿಕೆಗೆ...

0 comments:

Post a Comment