ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಪ್ರಾದೇಶಿಕ ಸುದ್ದಿ

ಉಚಿತ ಕೋಚಿಂಗ್ ಕ್ಲಾಸ್ ಗೆ ಚಾಲನೆ ನೀಡುತ್ತಿರುವ ಡಾ.ಎಂ.ಮೋಹನ ಆಳ್ವಮುಲ್ಕಿ: ಪಟ್ಟಣ ಪ್ರದೇಶದ ಶ್ರೀಮಂತ ವಿದ್ಯಾರ್ಥಿಗಳನ್ನು ಗುರಿಯಾಗಿರಿಸಿ ಕೋಚಿಂಗ್ ಕ್ಲಾಸ್ ನಡೆಸುವ ಮೂಲಕ ಅತ್ಯಧಿಕವಾಗಿ ಹಣ ಬಾಚುತ್ತಿರುವ ಸಂಸ್ಥೆಗಳಿರುವ ಈ ದಿನಗಳಲ್ಲಿ ಮೂಲ್ಕಿ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ಚಾರಿಟೇಬಲ್ ಟ್ರಸ್ಟ್ ಮೂಲಕ ಮೂಲ್ಕಿ 9ಮಾಗಣೆ(32ಗ್ರಾಮ)ವ್ಯಾಪ್ತಿಯಲ್ಲಿ ಬರುವ ಅರ್ಹ ಬಡ ವಿದ್ಯಾರ್ಥಿಗಳಿಗೆ ಉಚಿತವಾಗಿ ಸಿಇಟಿ ಕೋಚಿಂಗ್ ನೀಡುವ ಕಾರ್ಯ ಶ್ಲಾಘನೀಯ ಎಂದು ಆಳ್ವಾಸ್ ಸಮೂಹ ವಿದ್ಯಾ ಸಂಸ್ಥೆಗಳ ಅಧ್ಯಕ್ಷ ಡಾ.ಎಂ.ಮೋಹನ ಆಳ್ವಾ ಹೇಳಿದರು.

ಅವರು ರವಿವಾರ ಮೂಲ್ಕಿ ಬಪ್ಪನಾಡು ಜ್ಞಾನ ಮಂದಿರದಲ್ಲಿ ಶ್ರೀ ದುರ್ಗಾಪರಮೇಶ್ವರಿ ಚಾರಿಟೇಬಲ್ ಟ್ರಸ್ಟ್ ಆಶ್ರಯದಲ್ಲಿ 2010-11 ಸಾಲಿನ ಸಿಇಟಿ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ನೀಡಲಾಗುವ ಕೋಚಿಂಗ್ ಕ್ಲಾಸ್ ಉದ್ಘಾಟಿಸಿದ ಬಳಿಕ ಮಾತನಾಡಿದರು.

ಜೀವನ ನಿರ್ಧರಿಸುವ ಪದವಿಪೂರ್ವ ಶಿಕ್ಷಣದ ಜತೆಗೆ ಸಿಇಟಿ ಪರೀಕ್ಷೆ ಎದುರಿಸಲು ಪೂರ್ವಭಾವಿ ಸಿದ್ದತೆಗಳು ಅಧಿಕವಾಗಿದೆ ಎಂದ ಆಳ್ವಾ ವಿದ್ಯಾರ್ಥಿಗಳು ಮುಂಜಾನೆ4:45ಕ್ಕೆ ಎದ್ದು ಪಠ್ಯಗಳನ್ನು ಮನನ ಮಾಡಿಕೊಳ್ಳುವುದು ಮಾತ್ರವಲ್ಲದೆ ತಮ್ಮ 2ವರ್ಷದ ಶಿಕ್ಷಣ ಅವಧಿಗೆ ಸಮಯ ಪ್ರಜ್ಞೆಯಿಂದ ಕಾರ್ಯ ನಿರ್ವಹಿಸಬೇಕು ಮಾತ್ರವಲ್ಲ ಮುಂದಿನ 2ವರ್ಷ ಟಿ.ವಿ ಮತ್ತು ಮೊಬೈಲ್ ನಿಂದ ದೂರವಿರಬೇಕು ಎಂದು ಕಿವಿಮಾತು ಹೇಳಿದರು.

ರಾಜ್ಯದಲ್ಲಿ ಐಎಎಸ್,ಐಪಿಎಸ್,ಕೆ.ಎ.ಎಸ್ ಮುಂತಾದ ಹಲವು ಪರೀಕ್ಷೆಗಳು ನಡೆಯುತ್ತಿದ್ದು ಪೋಶಕರು ಈಬಗ್ಗೆಯೂ ಗಮನ ಹರಿಸಬೇಕು ಎಂದ ಅವರು ಪರಿಶಿಷ್ಟ ಪಂಗಡದ ಕೊರಗರು ಮತ್ತು ಮನ್ಸ ಜನಾಂಗದಿಂದ ಇಂದಿನ ವರೆಗೂ ಯಾರೊಬ್ಬರೂ ಇಂಜಿನಿಯರಿಂಗ್ ಮತ್ತು ವೈದ್ಯಕೀಯ ಪರೀಕ್ಷೆಗೆ ಹಾಜರಾಗದಿರುವುದರಿಂದ ಅವರಿಗೆ ಈ ಬಗ್ಗೆ ಸರಿಯಾದ ಮಾಹಿತಿ ನೀಡುವುದು ಬಹಳ ಅಗತ್ಯ ಎಂದರು.

ಕಾರ್ಯಕ್ರಮದ ಅತಿಥಿಯಾಗಿ ವಿಜಯಾ ಕಾಲೇಜು ಪ್ರಾಂಶುಪಾಲ ಪ್ರೊ.ಅರವಿಂದ ಜೋಶಿ, ದೇವಳದ ಕಾರ್ಯ ನಿರ್ವಹಣಾಧಿಕಾರಿ ಸುಧಾಕರ, ಟ್ರಸ್ಟಿಗಳಾದ ಬಿ.ಪಿ.ಕಿಶೋರ್,ಪ್ರಭಾ ಶಂಕರ್ ರೈ, ಮುರಳೀಧರ ಭಂಡಾರಿ,ಕರುಣಾಕರ ಶೆಟ್ಟಿ,ಡಾ.ಎಂ.ಎ.ಆರ್ ಕುಡ್ವಾ, ಸಂಯೋಜಕ ಪ್ರೊ.ವೆಂಕಟೇಶ ಭಟ್ ಉಪಸ್ಥಿತರಿದ್ದರು.

ಬಿ.ಪಿ.ಕಿಶೋರ್ ಸ್ವಾಗತಿಸಿದರು. ಎಡ್ಮೆಮಾರ್ ನವೀನ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.ಪ್ರಭಾ ಶಂಕರ ರೈ ವಂದಿಸಿದರು. ಮೂರನೇ ವರ್ಷದ ಉಚಿತ ಸಿಇಟಿ ತರಬೇತಿಗಾಗಿ ಪ್ರವೇಶ ಪರೀಕ್ಷೆಯಲ್ಲಿ ತೇರ್ಗಡೆಹೊಂದಿದ ಅರ್ಹ ಮದ್ಯಮ ಮತ್ತು ಬಡ ವರ್ಗದ 75 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿದೆ.
ಚಿತ್ರ-ವರದಿ: ಭಾಗ್ಯವಾನ್ ಮುಲ್ಕಿ

0 comments:

Post a Comment