ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ
ಧನ್ಯಕ್ಕೆ ದ್ವಿತೀಯ
ಬೊರ್ಗಾಲು ಗುಡ್ಡೆ ಮಂಜುನಾಥ, ಪ್ರಕಾಶ್ ಕಾಬೆಟ್ಟು ಗೌರವ ಪುರಸ್ಕಾರಕ್ಕೆ ಆಯ್ಕೆ

ಮೂಡಬಿದಿರೆ: ಯುವ ಪ್ರತಿಭಾ ವೇದಿಕೆ ಮತ್ತು ಶ್ರೀ ಕಾಲೇಜು ಮೂಡಬಿದಿರೆ ಸಂಯುಕ್ತಾಶ್ರಯದಲ್ಲಿ ಮೂಡಬಿದಿರೆಯ ನವಮಿ ಚಿತ್ರಮಂದಿರದಲ್ಲಿ ಕಳೆದ 3 ದಿನಗಳ ಕಾಲ ಆಯೋಜಿಸಿದ ಕರ್ನಾಟಕ ರಾಜ್ಯ ಮಿನಿ ಚಲನ ಚಿತ್ರೋತ್ಸವದಲ್ಲಿ ಭಾಗವಹಿಸಿದ ಬಿ.ಸುರೇಶ ಅವರ `ಅರ್ಥ' ಚಿತ್ರ ಅತ್ಯುತ್ತಮ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.

ದ್ವಿತೀಯ ಪ್ರಶಸ್ತಿಗೆ ಪ್ರಕಾಶ್ ಕಾಬೆಟ್ಟು ನಿರ್ದೇಶನದ ಧನ್ಯ ಪಾತ್ರವಾಯಿತು. ನವೋದಿತ ನಿರ್ದೇಶಕ ಗೌರವಕ್ಕೆ ಉಜಿರೆ ಎಸ್.ಡಿ.ಎಂ. ಕಾಲೇಜಿನ ಎಂ.ಸಿ.ಜೆ ವಿದ್ಯಾರ್ಥಿ ಬೊರ್ಗಾಲು ಗುಡ್ಡೆ ಮಂಜುನಾಥ (ಅರಸರನ್ನು ಅರಸುತ್ತಾ ಸಾಕ್ಷ್ಯಚಿತ್ರ)ಆಯ್ಕೆಗೊಂಡಿದ್ದಾರೆ. ಪತ್ರಕರ್ತ , ಪತ್ರಿಕೋದ್ಯಮ ಉಪನ್ಯಾಸಕ ಹರೀಶ್ ಕೆ.ಆದೂರು ನಿರ್ದೇಶನದ `ಬದುಕು' ಸಾಕ್ಷ್ಯಚಿತ್ರ ವಿಶೇಷ ಗೌರವ ಪ್ರಶಸ್ತಿಗೆ ಪಾತ್ರವಾಗಿದೆ ಎಂದು ಸಂಘಟಕ ಶೇಖರ್ ಅಜೆಕಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದ್ವಿತೀಯ ದಿನದಂದು ಅರ್ಥ, ಅರಸರನ್ನು ಅರಸುತ್ತಾ , ಬದುಕು, ಎಳೆಬಿಸಿಲು ಕಿರುಚಿತ್ರಗಳು ಪ್ರದರ್ಶನಗೊಂಡಿದ್ದವು.ಪ್ರಶಸ್ತಿ ಪ್ರದಾನ ಸಮಾರಂಭ ಮಾರ್ಚ್ 11ರಂದು ಬೆಳಗ್ಗೆ 11ಗಂಟೆಗೆ ನವಮಿ ಟಾಕೀಸಿನಲ್ಲಿ ನಡೆಯಲಿದೆ. ಮಂಗಳೂರಿನ ಚಂದ್ರಹಾಸ ಶೆಟ್ಟಿ, ರವೀಂದ್ರ ರೈ ಸೇರಿದಂತೆ ಇತರ ಗಣ್ಯರು ಭಾಗವಹಿಸಲಿದ್ದಾರೆ.

ದ್ವಿತೀಯ ದಿನದ ಚಲನಚಿತ್ರೋತ್ಸವದ ಸಂವಾದ ಕಾರ್ಯಕ್ರಮದಲ್ಲಿ ಅರಸರನ್ನರಸುತ್ತಾ ಸಾಕ್ಷ್ಯಚಿತ್ರ ತಂಡದ ಸದಸ್ಯರಾದ ಸಂಕೇತ್ ಚಿಪಳೂನ್ಕರ್, ಮನೋಹರ್ ಮತ್ತು ಮಂಜುನಾಥ್ ಪಾಲ್ಗೊಂಡಿದ್ದರು. ಮಾ.11ರಂದು ಬೆಳಗ್ಗೆ 9.30ಕ್ಕೆ ಚಲನಚಿತ್ರಗಳು ಪ್ರದರ್ಶನಗೊಳ್ಳಲಿದೆ.

1 comments:

Vivek Nambiar said...

Congratulations for the award winners..May the god bless them with good future..

Good work...

Post a Comment