ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಶೇಷ ವರದಿ
ಮಿಸೆಸ್ ಇಂಡಿಯಾ ಗ್ಲೋಬ್ 2009 ಮತ್ತು ಮಿಸೆಸ್ ಬ್ಯೂಟಿಫುಲ್ ಫೇಸ್ ಇಂಟರ್ನ್ಯಾಶನಲ್ ಪ್ರಶಸ್ತಿ ವಿಜೇತೆ ಸರಳ ಸಜ್ಜನಿಕೆಯ ಶ್ರೀಮಾರೈಯವರನ್ನು ನೋಡುವಾಗ ಬಣ್ಣದ ಪ್ರಪಂಚದ ಗ್ಲಾಮರಸ್ ವ್ಯಕ್ತಿಗಳು ಇಷ್ಟು ಸರಳವಾಗಿರಲು ಸಾಧ್ಯವೇ? ಎಂಬ ಪ್ರಶ್ನೆ ಮನದಲ್ಲಿ ಮೂಡುವುದು ಸಹಜ.
ಮೂಲತ ತುಳುವರಾಗಿ ಬಂಟ ಮನೆತನದಲ್ಲಿ ಹುಟ್ಟಿ ಅಮೇರಿಕಾ ದಲ್ಲಿ ಬೆಳೆದ ಶ್ರೀಮಾ ರವರಿಗೆ ನಮ್ಮ ದೇಶದ ಸಂಸ್ಕೃತಿ ಸಂಸ್ಕಾರದ ಬಗೆಗೆ ಬಹಳ ಆಸಕ್ತಿ ಕನ್ನಡ ಹೆಚ್ಚು ಬರದಿದ್ದರೂ ಮಾತೃ ಭಾಷೆಯಾದ ತುಳುವಿನಬಗ್ಗೆ ಅತೀವ ಪ್ರೀತಿ ಸರಳ ಸಜ್ಜನಿಕೆಯ ನಯವಿನಯದಿಂದ ತುಂಬಿದ ಶ್ರೀಮಾ ವಿದ್ಯೆ ಮಾತ್ರ ಜೀವನದಲ್ಲಿ ಯಶಸ್ಸು ತಂದುಕೊಡಬಲ್ಲದು ಎಲ್ಲರೂ ಉನ್ನತ ಶಿಕ್ಷಣ ಪಡೆಯಬೇಕು.ಉನ್ನತ ಪದವಿಯನ್ನು ಅಲಂಕರಿಸಬೇಕು.ಹುಡುಗಿಯರು ಯಾರಿಗೂ ಎಂದಿಗೂ ಹೊರೆಯಾಗದಂತೆ ತಮ್ಮನ್ನು ರೂಪಿಸಿಕೊಳ್ಳಬೇಕು.ಸ್ವಾವಲಂಭನೆಯನ್ನು ರೂಪಿಸಿಕೊಳ್ಳುವವರಿಗೆ ಸಮಾಜ ಎಂದಿಗೂ ಗೌರವ ನೀಡುತ್ತದೆ. ಎಲ್ಲರೂ ಉನ್ನತಿಯ ಹಾದಿಯಲ್ಲಿ ಧನಾತ್ಮಕವಾಗಿ ಚಿಂತಿಸುವುದು ಮತ್ತು ದೊಡ್ಡ ಕನಸು ಕಾಣಬೇಕು ಆದರೆ ಕನಸನ್ನು ನನಸುಮಾಡುವ ಏಕಾಗ್ರತೆ ಮತ್ತು ಛಲವನ್ನು ಹೊಂದಿರಬೇಕು ಎನ್ನುತ್ತಾರೆ.ಮುಂಬೈ ಸ್ಟಾಂಡರ್ಡ್ ಚಾರ್ರ್ಟಡ್ ಬ್ಯಾಂಕ್ ನಲ್ಲಿ ಉನ್ನತ ಹುದ್ದೆಯಲ್ಲಿರುವ ಶ್ರೀಮಾ ನಿಟ್ಟೆ ಗುತ್ತು ನೇಮಿರಾಜ ರೈ ಮತ್ತು ವಿಶಾಲಿ ರೈ ಯವರ ಮಗಳು ಮತ್ತು ಖ್ಯಾತ ಅಭಿನೇತ್ರಿ ಐಶ್ವರ್ಯ ರೈ ಯವರ ಅಣ್ಣ ಮೆರಿನ್ ಇಂಜಿನಿಯರ್ ಆಗಿರುವ ಆದಿತ್ಯ ರೈಯವರ ಪತ್ನಿಯಾಗಿದ್ದಾರೆ.
ಭಾಗ್ಯವಾನ್ ಮುಲ್ಕಿ

0 comments:

Post a Comment