ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವೈವಿಧ್ಯ

ಜಗತ್ತಿನಲ್ಲಿ ಭಾರತೀಯ ಸಂಸ್ಕೃತಿಗೆ ಎತ್ತರದ ಸ್ಥಾನ. ಅದಕ್ಕೆ ತನ್ನದೇ ಆದ ಹಿರಿಮೆಯಿದೆ. ಗರಿಮೆಯಿದೆ. ಇಲ್ಲಿನ ನೆಲವೆಲ್ಲಾ ಕ್ಷೇತ್ರಗಳಾಗಿ ಜಲವೆಲ್ಲಾ ತೀರ್ಥಗಳಾದವು. ಪವಿತ್ರ ನೆಲ ಜಲಗಳ ಮಧ್ಯೆ ದುಃಖ ದುಮ್ಮಾನಗಳನ್ನು ತೊರೆಯಲು ಹಬ್ಬಗಳು ಅವಿರ್ಭವಿಸಿದವು. ತ್ಯಾಗ ವೈರಾಗ್ಯಗಳ ತಳಹದಿಯಲ್ಲಿ ನಮ್ಮನ್ನು ತಿದ್ದಿ ತೀಡುತ್ತವೆ ಈ ಹಬ್ಬಗಳು. ಲೌಕಿಕ ಜಗತ್ತನ್ನು ತೊಡೆದು ಹಾಕದೆ ಅಲೌಕಿಕವನ್ನೇ ಎತ್ತಿ ಹಿಡಿದಿದೆ ಈ ಹಬ್ಬಗಳು.
ಹಿಂದೂ ಪಂಚಾಂಗದ ಪ್ರಕಾರ ಯುಗಾದಿ ಪ್ರಪ್ರಥಮ ಹಬ್ಬ. ನಾಡಿನ ಜನತೆಯ ಮಣ್ಣಿನ ಹಬ್ಬ. ಹೊಸ ವರುಷದ ಉತ್ಸಾಹ ಗರಿಗೆದುರುವ ದಿನ. ನವ ವಿನ್ಯಾಸದ ಪೋಷಾಕುಗಳನ್ನು ಧರಿಸಿಕೊಂಡು ಮನಸ್ಸು ಉಲ್ಲಸಿತವಾಗುವ ಸಮಯ. ಇದು ಬರೇ ಹೊಸವರುಷವೊಂದೇ ಅಲ್ಲ. ನವ ವರುಷದ ಆರಂಭದ ದಿನ. ನವ ನಕ್ಷತ್ರ, ರಾಶಿಗಳೆಲ್ಲವೂ ಆರಂಭ ವರ್ಷದ ಆದಿಯಾದರೂ ಯುಗದ ಆದಿಯೆಂದು ರೂಢೀಗತವಾದದ್ದು. ಬೋಳಾಗಿದ್ದ ಮರಗಳು ಚಿಗುರೆಲೆಗಳಿಂದ ಫಲ ಪುಷ್ಪಗಳಿಂದ ತುಂಬಿ ಮದುವಣಗಿತ್ತಿಯಂತೆ ನಿಸರ್ಗದೇವತೆ ವಸಂತನ ಆಗಮನವನ್ನು ಸ್ವಾಗತಿಸುತ್ತಾಳೆ. ನವ ಚೈತನ್ಯ ತುಂಬುವ ಪ್ರಕೃತಿಯ ಪರಿವರ್ತನೆಯ ಕಾಲವಿದು.
ಬೆಲ್ಲದ ಮಧುರತೆ ಕಹಿಯನ್ನು ತಿಳಿಗೊಳಿಸಿ ಮನವನ್ನು ಆಹ್ಲಾದಗೊಳಿಸುವ ಸಂಕೇತ ಈ ಹಬ್ಬದ್ದು. ಏನೇ ಇರಲಿ ಯುಗಾದಿ ನಾಡಿನ ಸಮಸ್ತ ಜನತೆಗೆ ಶುಭ ತರಲಿ...ಬೇವು - ಬೆಲ್ಲದ ಸವಿ ಜೀವನದಲ್ಲಿರಲಿ.
ಮಲ್ಲಿಕಾ ಭಟ್ ಪರಪ್ಪಾಡಿ

0 comments:

Post a Comment