ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಕಾರಿಡಾರ್
ಪರಿವರ್ತನೆ ಜಗದ ನಿಯಮ... ಕಾಲ ಕಾಲಕ್ಕೆ ಜನರು ಬದಲಾಗುತ್ತಾರೆ. ಪರಿಸರ, ಸಮಾಜ, ಮನೋಭಾವ, ಮನೋಧರ್ಮಗಳಲ್ಲೂ ನಿರಂತರ ಬದಲಾವಣೆಗಳು ಕಂಡುಬರುತ್ತವೆ. ಆದರೆ ಇಂದು ಎಲ್ಲ ವರ್ಗಗಳಿಂದಲೂ ಮಿಗಿಲಾಗಿ `ವಿದ್ಯಾರ್ಥಿ ವರ್ಗ' ಕ್ಷಿಪ್ರಗತಿಯ ಬದಲಾವಣೆಗೆ ನಾಂದಿಹಾಡುತ್ತಿದ್ದಾರೆ ಎಂದರೆ ತಪ್ಪಾಗಲಾರದು. `ಬದಲಾವಣೆಯ ಯುಗದಲ್ಲಿ' ಕಾಲೇಜು ವಿದ್ಯಾರ್ಥಿಗಳ ಪಾಲಿಗೆ ಸಾಕಷ್ಟು ಹೋಂ ವರ್ಕ್ ! ಹುಡುಗಿಯರಾದರೆ ಮರುದಿನದ ಮ್ಯಾಚಿಂಗ್ ಮ್ಯಾಚಿಂಗ್ ಡ್ರೆಸ್, ಬಳೆ, ಹೇರ್ ಪಿನ್, ಚಪ್ಪಲ್, ನೈಲ್ ಪಾಲಿಶ್ ಚಿಂತೆಯಲ್ಲಿಯೇ ಮುಳುಗುತ್ತಾ ಕೈಯಲ್ಲಿರುವ ಹ್ಯಾಂಡಿ ಮೊಬೈಲ್ ನ ಗುಂಡಿಗಳನ್ನು ಅದುಮುತ್ತಾ `ಆ...ತನಿಗೆ' ಒಂದಷ್ಟು ತಲೆಕೆರೆದುಕೊಳ್ಳುವಂತಹ ಮೆಸೇಜ್ ಕಳುಹಿಸಿ ಖುಷಿಅನುಭವಿಸುತ್ತಾಳೆ...
ಇತ್ತ ಹುಡುಗರಿಗೋ ಕೈಯಲ್ಲಿ, ಪ್ಯಾಂಟ್ ಕಿಸೆಯಲ್ಲಿ ಇರುವ ಎರಡೆರಡು ಮೊಬೈಲ್ ಗಳಿಗೆ ಬರುವ ಲಲನೆಯ ಸಂದೇಶಗಳನ್ನು ಕಣ್ಣು ಬಾಯಿ ಬಿಟ್ಟು ನೋಡುತ್ತಾ ಸ್ವರ್ಗವನ್ನೇ ಕಂಡಷ್ಟು ಸಂತೋಷದಿಂದ ಕಲ್ಪನಾ ಲೋಕದಲ್ಲಿ ವಿಹರಿಸುತ್ತಾ...ಜೊತೆಗಿರುವ ಹೈ ಸ್ಪೀಡ್ ಬೈಕ್ ನಲ್ಲಿ ಒಂದೆರಡು ರೌಂಡ್ ಹೊಡೆಯುತ್ತಾ ... ಅದ್ಯಾವುದೋ ಡಬ್ಬಾ ಮೂವಿಯ ಡೈಲಾಗ್ ಹೊಡೆಯುತ್ತಾ ...ನಾಳೆ ಯಾವ ಹುಡುಗೀಗೆ ಗಾಳ ಹಾಕ್ಲಿ ಎಂಬ ಪ್ಲ್ಯಾನ್ ಮಾಡ್ತಾ ಇರೋದೇ ದೊಡ್ಡ ಹೋಂ ವರ್ಕ್ ...

ಇಂದಿನ ಪರಿವರ್ತನೆಯ ಯುಗದಲ್ಲಿ ಮಹಿಳೆಯರಿಗೆ ಕೂದಲು ಅಂದ್ರೆನೇ ಬೋರ್... ಅದಕ್ಕೆ ಬಾಬ್ ಕಟ್... ಇನ್ನೂ ಹಲವಾರು ವಿಧಗಳಲ್ಲಿ ಕೂದಲು ಕತ್ತರಿಸಿ ತಲೆ ಕುಲುಕಿಸುತ್ತಾ ವಯ್ಯಾರದಿಂದ ಹೋಗುವ ಇನ್ನೊಂದು ಟ್ರೆಂಡ್... ಆದರೆ ಪುರುಷರು ಇದಕ್ಕೆ ವ್ಯತಿರಿಕ್ತ. ಪುರುಷರು ನೀಳ ಕೂದಲತ್ತ ಆಕರ್ಷಿತರಾಗಿದ್ದಾರೆ. ಇಷ್ಟೇ ಅಲ್ಲ... ಹುಡುಗಿಯರು ಕಿವಿಯೋಲೆ ಧರಿಸದೆ ತಿರುಗಾಡಿದರೆ ಇದೀಗ ಹುಡುಗರು ಅದನ್ನೇ ಫ್ಯಾಶನ್ ಎಂಬಂತೆ ಕಿವಿಯೋಲೆ ಸಿಕ್ಕಿಸಿಕೊಳ್ಳುತ್ತಾ ಹೋಗುತ್ತಿದ್ದಾರೆ...! ವ್ಹಾವ್...ಎಂತಹ ಪರಿವರ್ತನೆ ಅಲ್ಲವೇ...!
- ಕೃಪಾ
ತೃತೀಯ ಬಿ.ಎ. ಪತ್ರಿಕೋದ್ಯಮ ವಿಭಾಗ.
ಆಳ್ವಾಸ್ ಕಾಲೇಜು, ಮೂಡಬಿದಿರೆ.
( ಸೂಚನೆ: ಈ ಲೇಖನಕ್ಕೆ ಬಳಸಲಾದ ಛಾಯಾಚಿತ್ರಗಳು ಅಂತರ್ಜಾಲದಿಂದ ಪಡೆಯಲಾಗಿದೆ. ಲೇಖನಕ್ಕೂ ಬಳಸಲ್ಪಟ್ಟ ಚಿತ್ರಕ್ಕೂ ಯಾವುದೇ ರೀತಿಯ ಸಂಬಂಧವಿರುವುದಿಲ್ಲ. - ಸಂ )

1 comments:

Anonymous said...

nice but....badalavane jagada niyama... adare a badalavane a vyaktige gaurava taruvantadirabeku... badalavane alankarakke seemitavagirali namma sampradayakkalla

Post a Comment