ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಸಾಹಿತ್ಯ
ನಿನ್ನೆಯ ಸಂಚಿಕೆಯಿಂದ...
ಇಷ್ಟರಲ್ಲಾಗಲೇ ಅವನು ಇಸ್ತ್ರಿಮಾಡಿದ್ದ ಶ್ರಮವೆಲ್ಲ ವ್ಯರ್ಥವಾಗಲು ಪ್ರಾರಂಭವಾಗಿತ್ತು. ಬಸ್ಸಿನಲ್ಲಿ ಭಯಂಕರ ಸೆಖೆಯಾಗುತ್ತಿತ್ತು. ಎಲ್ಲರಿಗೂ ಬೆವರಿನಲ್ಲಿ ಸ್ನಾನ ಮಾಡಿದ ಅನುಭವವಾಗುತ್ತಿತ್ತು. ನನ್ನನ್ನೂ ಸೇರಿಸಿ . ಆದರೂ ಶರ್ಟಿನ ಮೇಲಿನೆರಡು ಬಟನ್ ಗಳನ್ನು ಅದರ ಗುಂಡಿಯ ಬಳಿ ತರುತ್ತ ಕಾರ್ತಿಕ್ ವಸ್ತ್ರದ ಶಿಸ್ತನ್ನು ಕಾಪಾಡಲು ಶತಪ್ರಯತ್ನ ಮಾಡುತ್ತಿದ್ದ.

ನಾನು ಎಷ್ಟೆಂದರೂ ಅಶಿಸ್ತಿನ ಮನ್ಯಷ್ಯ ಅಲ್ವಾ... ಯತೇಚ್ಛವಾಗಿ ತುರಿಕೆ ಆದಲ್ಲೆಲ್ಲ ತುರಿಸಿಕೊಳ್ಳುತ್ತಿದ್ದೆ. ನನ್ನ ಬಟ್ಟೆಗಳಿಗೆ ಇಸ್ತ್ರಿಯ ಹಂಗಿರಲಿಲ್ಲ. ಅದೂ ಹಿಂದಿನ ರಾತ್ರಿ ಬಹಳ ಸೊಳ್ಳೆ ಕಚ್ಚಿತ್ತು. ಅದೇನೋ ಒಂದು ಹುಳು ನನ್ನ ಎದೆ ಮೇಲೆ ಹಾದು ಹೋಗಿತ್ತು. ಆ ಸೆಕೆಯಲ್ಲಿ ಎದೆ ತುರಿಸಿಕೊಳ್ಳುತ್ತ ಅಶಿಸ್ತಿನ ಬದುಕಿನಲ್ಲಿ ಸುಖವಾಗಿಯೇ ಇದ್ದೆ. ನಮ್ಮ ಕಾರ್ತಿಕ್ ಮಾತ್ರ ಒಂಟೆ ತರಹ ಕುತ್ತಿಗೆ ಉದ್ದ ಮಾಡಿಕೊಂಡು ಪ್ರಿಯಾಂಕಳನ್ನು ನೋಡುತ್ತಲೇ ಇದ್ದ...

ಅಷ್ಟರಲ್ಲಿ ಊಹಿಸಲು ಅಸಾಧ್ಯವಾಗದ ಸಂಗತಿ ನಡೆಯಿತು. ಬಿಂಕದ ಸಿಂಗಾರಿ ಪ್ರಿಯಾಂಕ ಹಿಂತಿರುಗಿ ನೋಡಿದಳು.ನೋಡಿದ್ದಷ್ಟೇ ಅಲ್ಲ ಮಾರಾಯ್ರೆ ಒಂದು ನಗುವನ್ನೂ ಚೆಲ್ಲಿದಳು. ..ಚ್ಯುಯಿಂಗಮ್ ಜಗಿಯುತ್ತ. ನನಗಿನ್ನೂ ನೆನಪಿದೆ... ಅದು ಸೇಲ್ಸ್ ಮೇನ್ ತನ್ನ ಪ್ರಾಡಕ್ಟ್ ಮಾರಬೇಕಾದರೆ ಕೊಡುವ ನಗು ಏನಿದೆಯಲ್ಲಾ ಅಂತಹುದೇ ನಗುವಾಗಿತ್ತು.

ಹೊಟೇಲ್ ಮೇನೇಜ್ ಮೆಂಟ್ ಓದಿದವರು ಕೆಲಸಕ್ಕೆ ಸೇರಿದ ನಂತರ ಗಿರಾಕಿಗಳಿಗೆ ಕೊಡ್ತಾರಲ್ಲಾ ಅಂತಹುದೇ ನಗುವಾಗಿತ್ತು. ಅದೇನೂ ಹೃದಯದಿಂದ ಬಂದ ನಗುವಾಗಿರಲಿಲ್ಲ. ಆದರೆ ನಮ್ಮ ಕಾರ್ತಿಕ್ ಗೆ ಆ ನಗುವೇ ಸಾಕಾಗಿತ್ತು. ಮೊದಲೆರಡು ಸೆಕೆಂಡು ಶಾಕ್ ತಾಗಿದವರ ಹಾಗೆ ಮಾಡಿದ ಕಾರ್ತಿಕ್. ಅದಾದ ನಂತರ ತಗೋಳಿ ತನ್ನ ಜೀವನವೇ ಸಾರ್ಥಕವಾಯಿತು ಎಂಬಂತೆ ಧನ್ಯತೆಯ ಭಾವ ಬಂತು ಆತನ ಮುಖದಲ್ಲಿ . ಬಹುಶಃ ಏಳೇಳು ಜನ್ಮವೂ ಪಾವನವಾದ ಅನುಭವವಾಗಿರಬೇಕು ಅವನಿಗೆ. ಒಬ್ಬ ಅರ್ಧಂಬರ್ಧ ರಾಜಕೀಯ ಶಾಸ್ತ್ರ ಓದಿದವನ ದೃಷ್ಟಿಯಲ್ಲಿ ಇದು ಚುನಾವಣೆಯಲ್ಲಿ ಗೆದ್ದೇ ಗೆಲ್ಲುವ ಅಭ್ಯರ್ಥಿಗೆ ಓಟು ಹಾಕಿದಂತೆ. ವ್ಯಾಪಾರಿ ದೃಷ್ಟಿಯಿಂದ ನೋಡಿದರೆ ಇಸ್ತ್ರಿ ಹಾಕಲು ಪಟ್ಟ ಶ್ರಮ ರಿಸಲ್ಟ್ ಕೊಡ್ತಾ ಇತ್ತು. ಪ್ರಿಯಾಂಕಾಳ ಎಂ.ಬಿ.ಎ. ದೃಷ್ಟಿಯಿಂದ ಹೇಳೋದಾದರೆ ಕಾರ್ತಿಕ್ ಗೆ ಈಗ ಲಾಭ ಸಿಗುತ್ತಿತ್ತು.

ಆದರೆ ಅವನ ನಗುವೆಲ್ಲ ಒಮ್ಮೆಲೇ ಬಾಡಿ ಹೋಯಿತು. ಕನಸುಗಳೆಲ್ಲ ಶೇರ್ ಮಾರ್ಕೆಟ್ ತರಹದಲ್ಲಿ ಬಿದ್ದು ಹೋಯಿತು.ಯಾಕೆಂದರೆ ಆ ನಗು ಅವನಿಗೆ ಕೊಟ್ಟಿದ್ದಲ್ಲ... ಕಾರ್ತಿಕ್ ಗಿಂತ ಹೆಚ್ಚು ಕಡಕ್ ಇಸ್ತ್ರಿಯ ಬಟ್ಟೆ ಹಾಕಿಕೊಂಡಿದ್ದ ಇನ್ನೊಬ್ಬ ಯುವಕನಿಗಾಗಿತ್ತು...

ನಾಳಿನ ಸಂಚಿಕೆಗೆ...

0 comments:

Post a Comment