ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಸಾಹಿತ್ಯ

ನಿನ್ನೆಯ ಸಂಚಿಕೆಯಿಂದ...


ಇಸ್ತ್ರಿ ಹಾಕಿದ ಬಟ್ಟೆಯ ಜೊತೆ ಆತ ಕನ್ನಡಕ ಬೇರೆ ಹಾಕಿಕೊಂಡಿದ್ದ. ಕೈಯಲ್ಲಿ ಮೊಬೈಲ್ ಬೇರೆ ಇತ್ತು ಅಂತೀನಿ. ಅವರಿಬ್ಬರೂ ಮೊಬೈಲ್ ನಲ್ಲಿ ಮೆಸೇಜ್ ಮಾಡ್ತಾ ಇದ್ರು ಅನಿಸುತ್ತೆ. ಯಾಕೆಂದರೆ ಪ್ರಿಯಾಂಕಾ ಕೈಯಲ್ಲಿ ಮೊಬೈಲ್ ಹಿಡಿದುಕೊಂಡಿದ್ದಳು.ಅವರಿಬ್ಬರೂ ಬಸ್ಸಿನಲ್ಲಿ ಮೀಟ್ ಆಗೋದು ಅಂತ ಮೊದಲೇ ಪ್ಲೇನ್ ಮಾಡಿದ್ದರು ಅನಿಸುತ್ತದೆ. ಮೆಸೇಜ್ ಮಾಡಿ ಬಸ್ಸಿನಲ್ಲಿರೋದನ್ನು ಖಾತ್ರಿ ಮಾಡಿಕೊಳ್ಳುತ್ತಿದ್ದರು. ಪ್ರಿಯಾಂಕಾ ಚ್ಯುಯಿಂಗಮ್ ಜಗಿಯುತ್ತ ಹಿಂದಕ್ಕೆ ಬಂದಳು. ಬಂದದ್ದಲ್ಲದೆ ಒಮ್ಮೆ ಆ ಮೊಬೈಲ್ ಗಂಡಸಿನ ಕೈ ಬೇರೆ ಹಿಡಿದಳು. ಕಾರ್ತಿಕ್ ಕುಮಾರ್ ಭಾರೀ ಅಪ್ಸೆಟ್ ಆಗಿ ಬಿಟ್ಟ. ಅರ್ಧಂಬರ್ಧ ರಾಜಕೀಯ ಶಾಸ್ತ್ರ ಓದಿದ ವಿದ್ಯಾರ್ಥಿಯ ದೃಷ್ಠಿ ಯಲ್ಲಿ ಹೇಳೋದಾದರೆ ಚುನಾವಣೆಯಲ್ಲಿ ಠೇವಣಿ ಕಳೆದುಕೊಂಡ ಅರ್ಭರ್ಥಿಯಂತೆ ಮುಖ ಸಪ್ಪೆ ಮಾಡಿಕೊಂಡ , ಪ್ರಿಯಾಂಕಳ ಎಂ.ಬಿ.ಎ. ದೃಷ್ಠಿಯಲ್ಲಿ ಹೇಳೋದಾದರೆ ಶೇರ್ ಮಾರ್ಕೆಟ್ ನಲ್ಲಿ ಎಲ್ಲವೂ ಕಳೆದುಕೊಂಡವರಂತೆ ಮುಖ ಮಾಡಿಕೊಂಡ.ಐದತ್ತು ನಿಮಿಷಗಳ ನಂತರ ನನ್ನ ಸ್ಟಾಪ್ ಬಂತು. ನಾನು ಬಸ್ಸಿನಿಂದ ಇಳಿದೆ. ಆಶ್ಚರ್ಯವೆಂದರೆ ಕಾರ್ತಿಕ್ ಕುಮಾರ್ ನೂ ಸಪ್ಪೆ ಮುಖಮಾಡಿಕೊಂಡು ಬಸ್ಸಿನಿಂದ ಇಳಿದ. ಅವನ ಕಣ್ಣಿನಲ್ಲಿ ಹನಿಗಳು ತುಂಬಿದ್ದವು. ಇನ್ನೇನು ಕೆನ್ನೆಗೆ ಇಳಿಯಲು ಆರಂಭಿಸುತ್ತದೆ ಅನಿಸುತ್ತಿತ್ತು. ನಾವಿಬ್ಬರೂ ಇಳಿದ ನಂತರ ಕಂಡಕ್ಟರ್ ರೈಟ್... ಎಂದು ಸೀಟಿ ಊದಿದ. ಬಸ್ಸು ಮಾತ್ರ ಹೊರಟಿತು... ಅಷ್ಟರಲ್ಲಿ ಪ್ರಿಯಾಂಕ ಮುಖ ಕಿಟಿಕಿಯ ಹತ್ತಿರ ಬಂತು. ಅವಳ ತುಟಿಗಳು ಮುಂದೆ ಚಾಚಿದವು ಕಿಟಿಕಿಯ ಹೊರಕ್ಕೆ. ಅವಳ ಕಣ್ಣುಗಳು ಅರ್ಧ ಮುಚ್ಚಿದವು. .. ಮುಖವನ್ನು ಸ್ವಲ್ಪ ಗಂಟು ಹಾಕಿಕೊಂಡು ಚ್ಯುಯಿಂಗಮ್ ಉಗುಳಿದಳು...
ಇದು ಯಾರು ಬರೆದ ಕಥೆಯೋ.... ಅಥವಾ ಕೋ ಇನ್ಸಿಡೆಂಟೋ ಗೊತ್ತಿಲ್ಲ... ಆದರೆ ಆ ಚ್ಯುಯಿಂಗಮ್ ಸೀದಾ ಹೋಗಿ ಕಾರ್ತಿಕ್ ಕುಮಾರ್ ನ ಮುಖದ ಮೇಲೆ ಬಿತ್ತು. .. ! ಆ ಸಮಯದಲ್ಲಿ ಗಾಳಿ ಜೋರಾಗಿ ಬೀಸುತ್ತಿತ್ತು. ಅದೂ ಕಾರಣವಾಗಿರಬಹುದು. ಆಗ ಕಾರ್ತಿಕ್ ಕುಮಾರ್ ನ ಮುಖ ನೋಡಬೇಕಾಗಿತ್ತು. ನನಗಿನ್ನೂ ಅವೆಲ್ಲಾ ನಿನ್ನೆ ನಡೆದಂತೆ ನೆನಪಿದೆ.

ಮಿ.ಕಾರ್ತಿಕ್ ಕುಮಾರ್ ನನ್ನು ನಾನು ಪುನಃ ಭೇಟಿಯಾಗಿದ್ದು ಎರಡು ತಿಂಗಳ ನಂತರ. ಕಾರ್ತಿಕ್ ಆಗ ಬಹುಶಃ ಪ್ರಿಯಾಂಕಳಾನ್ನು ಸಂಪೂರ್ಣವಾಗಿ ಮರೆತು ಬಿಟ್ಟಿದ್ದ. ಚ್ಯುಯಿಂಗಮ್ ಅನ್ನು ಮುಖದ ಮೇಲೆ ಉಗಿಸಿಕೊಂಡ ನಂತರ ಯಾರೀಗಾದ್ರೂ ಹುಡುಗಿ ಮರೆತುಹೋಗದೆ ಇರಲಾರದು ಬಿಡಿ. ಈ ಇಡೀ ಘಟನೆಯನ್ನು ಅರೆ ಕಮ್ಯುನಿಸ್ಟರ್ಯಾರೂ ನೋಡಿಲ್ಲ ಅನ್ನೋದೇ ಪುಣ್ಯ. ಅಕಸ್ಮಾತ್ ನೋಡಿದ್ದರೆ ಈ ಘಟನೆಯನ್ನು ಮಾರ್ಕಸ್ಸಿಸಂ ಉಳ್ಳವರು ಬಡವರ ಮೇಲೆ ಮಾಡುವ ದಬ್ಬಾಳಿಕೆ ಎನ್ನುತ್ತಿದ್ದರು...!

ಪ್ರಿಯಾಂಕ ಶ್ರೀಮಂತ ಹಿನ್ನೆಲೆಯಿಂದ ಬಂದವಳಲ್ಲವೇ... ನಮ್ಮ ಕಾರ್ತಿಕ್ ಮಧ್ಯಮ ವರ್ಗದಿಂದ ಬಂದವನಲ್ಲವೇ. ನಿರುದ್ಯೋಗಿ ಮಾರ್ಕಿಸ್ಟ್ ಗಳಿಗೆ ಹೇಳಿ ಮಾಡಿಸಿದ ಇಶ್ಯೂ ಆಗುತ್ತಿತ್ತು. ಹ್ಹಾ... ನಾನು ಏನ್ ಹೇಳ್ತಾ ಇದ್ದೆ ಆದ್ರೆ ಈ ಘಟನೆಯ ನಂತರ ನಾನು ಕಾರ್ತಿಕ್ ನನ್ನು ಪುನಃ ಭೇಟಿಯಾದದ್ದು ಎರಡು ತಿಂಗಳ ನಂತರ. ಅವನು ಆಗ ಪ್ರಿಯಾಂಕಾಳನ್ನು ಸಂಪೂರ್ಣವಾಗಿ ಮರೆತಿದ್ದ. ಆದರೆ ಪ್ರೀತಿ ಶಾಶ್ವತ ಅಂತೆಲ್ಲಾ ಸಿನೆಮಾದಲ್ಲಿ ಹೇಳ್ತಾರಲ್ಲಾ ಮಾರಾಯ್ರೇ... ನಾನು ಆ ದಿನ ಒಂದು ಕನ್ಕ್ಲೂಷನ್ ಗೆ ಬಂದೆ.

ಸಿನೆಮಾಗಳು ಅರ್ಥೈಸಿರುವ ಯುವಜನತೆ ತಿಳಿದುಕೊಂಡಿರುವ ಪ್ರೀತಿ ಶಾಶ್ವತವಲ್ಲ. ಅಮರವಲ್ಲ. ಆದರೆ ನಮ್ಮ ಕಾರ್ತಿಕ್ ಕುಮಾರ್ ಎರಡು ತಿಂಗಳ ನಂತರ ನಾನು ನೋಡಿದಾಗಲೂ ಕಡಕ್ ಇಸ್ತ್ರಿ ಹಾಕಿದ ಪ್ಯಾಂಟು , ಶರ್ಟಿನಲ್ಲೇ ಇದ್ದ. ಅಷ್ಟೇ ಅಲ್ಲ ಕೈಯಲ್ಲಿ ಮೊಬೈಲ್ ಬೇರೆ ಹಿಡಿದುಕೊಂಡಿದ್ದ. ಭಾರೀ ಸ್ಟೈಲಿಶ್ ಆಗಿ ನಿಂತು ಕೊಂಡು ಫೋಸ್ ಕೊಡ್ತಾ ಇದ್ದ. ಅಷ್ಟರಲ್ಲಿ ಎಂ.ಸಿ.ಎ ಡಿಪಾರ್ಟ್ ಮೆಂಟ್ ನ ಪ್ರತೀಕ್ಷಾ ಅವನ ಬಳಿ ಬಂದಳು. ಕಾರ್ತಿಕ್ ಅವನ ಮೊಬೈಲ್ ಅನ್ನು ಕಿಸೆಗೆ ಹಾಕಿಕೊಂಡ. ಹ್ಹಾ... ಅಂದ ಹಾಗೆ ಎಂ.ಸಿ.ಎ ಡಿಪಾರ್ಟ್ ಮೆಂಟ್ ಕಾರ್ತಿಕ್ ನ ಹಾಸ್ಟೆಲ್ ಮತ್ತು ಅವನ ಕೆಮೆಸ್ಟ್ರಿ ಡಿಪಾರ್ಟ್ ಮೆಂಟ್ ನ ಹತ್ತಿರದಲ್ಲೇ ಇದೆ...!

ಮುಗಿಯಿತು.

0 comments:

Post a Comment