ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ
ಬೆಂಗಳೂರು: ಉಕ್ಕಿನ ಸ್ಥಾವರ ಹಾಗೂ ವಿದ್ಯುತ್ ಘಟಕ ಸ್ಥಾಪನೆ ಉದ್ದೇಶಕ್ಕಾಗಿ ಬಳ್ಳಾರಿ ತಾಲೂಕಿನ ಕುಡುತಿನಿ ಹಾಗೂ ಹರಗಿನದೋಣಿ ಗ್ರಾಮಗಳಲ್ಲಿ ಒಟ್ಟು 4994-69 ಎಕರೆ ಜಮೀನು ಸ್ವಾಧೀನಪಡಿಸಿಕೊಳ್ಳಲು ಕಳೆದ ಫೆಬ್ರವರಿ 5ರಂದು ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಶ್ರೀ ಮುರುಗೇಶ್ ಆರ್ ನಿರಾಣಿ ಅವರು ವಿಧಾನ ಪರಿಷತ್ನಲ್ಲಿ ಬುಧವಾರ ತಿಳಿಸಿದರು.ಆರ್ಸೆಲರ್ ಮಿತ್ತಲ್ ಅವರ 6 ಎಂಟಿಪಿಎ ಉಕ್ಕಿನ ಸ್ಥಾವರ ಹಾಗೂ 750 ಮೆಗಾವ್ಯಾಟ್ ಸಾಮರ್ಥ್ಯದ ವಿದ್ಯುತ್ ಘಟಕ ಸ್ಥಾಪನೆಗಾಗಿ ಭೂಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಲಾಗಿದೆ.ಈ ಪೈಕಿ 4000 ಎಕರೆ ಭೂಮಿಯನ್ನು ಕಂಪನಿಗೆ ಕೊಡಲಾಗುವುದು. ಉಳಿದ ಭೂಮಿಯನ್ನು ಟೌನ್ಶಿಪ್ ಹಾಗೂ ಅಧೀನ ಘಟಕಗಳ ಸ್ಥಾಪನೆಗೆ ಉಪಯೋಗಿಸುವ ಉದ್ದೇಶವಿದೆ ಎಂದು ಹೇಳಿದರು. ಪ್ರಾಥಮಿಕ ಅಧಿಸೂಚನೆಯಂತೆ ಕೆಐಎಡಿ ಕಲಂ 28(2)ರಡಿ ಭೂಮಾಲೀಕರಿಗೆ ವೈಯಕ್ತಿಕ ನೋಟೀಸುಗಳನ್ನು ನೀಡಲಾಗುತ್ತಿದೆ. ನೋಟೀಸಿಗೆ ಕೆಲವು ರೈತರು ಕೆಲವು ತಿದ್ದುಪಡಿ ಮಾಡುವಂತೆ ಆಕ್ಷೇಪಣೆಗಳನ್ನು ಸಲ್ಲಿಸಿದ್ದಾರೆ. ಇವುಗಳನ್ನು ವಿಚಾರಣೆ ವೇಳೆ ಪರಿಗಣಿಸಲಾಗುವುದು ಎಂದು ಸಚಿವರು ತಿಳಿಸಿದರು.

0 comments:

Post a Comment