ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಪ್ರಾದೇಶಿಕ ಸುದ್ದಿ

ಮಂಗಳೂರು :ನಗರದ ಸ್ವಚ್ಛತೆ ಬಗ್ಗೆ ಮಹಾನಗರಪಾಲಿಕೆ ಹೆಚ್ಚಿನ ಗಮನಹರಿಸಬೇಕು;ಅಲ್ಲಲ್ಲಿ ಸಂಗ್ರಹವಾಗುತ್ತಿರು ಕಸ, ರಸ್ತೆ ಕಾಮಗಾರಿ ಮುಗಿದ ಬಳಿಕವೂ ಅಲ್ಲೇ ಉಳಿಯುವ ಕಲ್ಲು,ಜಲ್ಲಿ, ಮರಳು ಸಾಮಗ್ರಿಗಳಿಂದ ನಾಗರೀಕರಿಗೆ ತೊಂದರೆಯಾಗುತ್ತಿದ್ದು ಇದನ್ನೆಲ್ಲ ಶೀಘ್ರ ಪರಿಹರಿಸಲು ಶಾಸಕ ಎನ್.ಯೋಗೀಶ್ ಭಟ್ ಅವರು ಮಹಾನಗರಪಾಲಿಕೆಗೆ ಅದರಲ್ಲೂ ಮುಖ್ಯವಾಗಿ ಆರೋಗ್ಯ ಇಲಾಖೆಗೆ ಸೂಚನೆ ನೀಡಿದರು.



ಮಂಗಳೂರು ಪುರಭವನದಲ್ಲಿ ಏರ್ಪಡಿಸಲಾಗಿದ್ದ ಮಂಗಳೂರು ತಾಲೂಕು ಹೋಬಳಿ ಮಟ್ಟದ ಜನಸ್ಪಂದನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಸಾರ್ವಜನಿಕರ ಅಹವಾಲುಗಳನ್ನು ಆಲಿಸಿ ಸೂಕ್ತ ಕ್ರಮಕ್ಕೆ ನಿರ್ದೇಶಿಸಿದ ಅವರು ಫಲಾನುಭವಿಗಳಿಗೆ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿತರಿಸಿದರು. ಮಹಾನಗರಪಾಲಿಕೆಯ ಆರೋಗ್ಯ ಇಲಾಖೆ ಜನರ ನಿರೀಕ್ಷೆಗೆ ಸ್ಪಂದಿಸುತ್ತಿಲ್ಲವೆಂಬ ದೂರುಗಳು ವ್ಯಾಪಕವಾಗಿದ್ದು, ಈ ಬಗ್ಗೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಲಾಗಿದೆ.

ಅಧಿಕಾರಿಗಳು ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿದರೆ ಕಟ್ಟು ನಿಟ್ಟಿನ ಕ್ರಮಕೈಗೊಳ್ಳಲಾಗುವುದು ಎಂದು ಮನಾಪ ಆಯುಕ್ತ ಡಾ.ವಿಜಯಪ್ರಕಾಶ್ ಸಭೆಯಲ್ಲಿ ಹೇಳಿದರು.ಅಳಕೆಯಲ್ಲಿರುವ ನೂತನ ಗ್ಯಾಸ್ ಏಜೆನ್ಸಿ ಸಾರ್ವಜನಿಕರೊಂದಿಗೆ ಅಸಂಬದ್ದವಾಗಿ ವರ್ತಿಸುವ ಬಗ್ಗೆ ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆಗೆ ಸೂಕ್ತ ಕ್ರಮಕೈಗೊಳ್ಳಲು ಶಾಸಕರು ಸೂಚಿಸಿದರು. ಮರಳು ಸಾಗಾಣಿಕೆ,ರಸ್ತೆ ಕಾಂಕ್ರೀಟಿಕರಣದಿಂದಾಗುವ ಸಮಸ್ಯೆ, ವಿಧವಾ ವೇತನ, ಬಿಪಿಎಲ್ ಕಾರ್ಡುಗಳ ಬಗ್ಗೆ, ಮನೆಕಟ್ಟಲು ನಿರಪೇಕ್ಷಣಾ ಪತ್ರ ನೀಡುವ ಬಗ್ಗೆ ಸಾರ್ವಜನಿಕರಿಂದ ಅಹವಾಲುಗಳಿದ್ದವು. ಜನಸ್ಪಂದನಾ ಸಭೆಯಲ್ಲಿ ಮೇಯರ್ ರಜನಿ ದುಗ್ಗಣ್ಣ, ಉಪಮೇಯರ್ ರಾಜೇಂದ್ರ ಕುಮಾರ್, ಮೂಡಾ ಆಯುಕ್ತರಾದ ರಮೇಶ್,ತಹಸೀಲ್ದಾರ್ ರವಿಚಂದ್ರ ನಾಯಕ್, ಇಒ ಕಾಂತರಾಜ್ ಉಪಸ್ಥಿತರಿದ್ದರು.

0 comments:

Post a Comment