ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಪ್ರಾದೇಶಿಕ ಸುದ್ದಿಗಳು
ಬಜಪೆ: ಗುರುಪುರ ಬಂಟರ ಸಂಘದ ವತಿಯಿಂದ ನಡೆದ ಬಂಟರ ಸಾಂಸ್ಕೃತಿಕ ಸ್ಪರ್ಧಾ ವೈಭವ `ಬಂಟ ಕಲೋತ್ಸವ'ದಲ್ಲಿ ಸುರತ್ಕಲ್ ಬಂಟರ ಸಂಘ ಪ್ರಥಮ ಸ್ಥಾನ ಪಡೆದಿದೆ.ಮೂಲ್ಕಿ ಬಂಟರ ಸಂಘ ದ್ವಿತೀಯ ಹಾಗೂ ಜಪ್ಪಿನಮೊಗರು ಬಂಟರ ಸಂಘ ತೃತೀಯ ಸ್ಥಾನ ಗೆದ್ದುಕೊಂಡಿವೆ. ಬೆಳ್ತಂಗಡಿ ಮತ್ತು ಬೆಳ್ಮಣ್ಣು ಬಂಟರ ಸಂಘಗಳು ಪೋಬಹುಮಾನವನ್ನು ಗಳಿಸಿವೆ. ಕಲೋತ್ಸವದ ಸಮಾರೋಪದಲ್ಲಿ ವಿಶ್ವ ಬಂಟಸಂಘಗಳ ಒಕ್ಕೂಟದ ಅಧ್ಯಕ್ಷ ಕೆ. ಅಜಿತ್ ಕುಮಾರ್ ರೈ ಮಾಲಾಡಿ, ಶ್ರೀದೇವಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎ.ಸದಾನಂದ ಶೆಟ್ಟಿ , ಜಿ.ಸದಾನಂದ ಮಲ್ಲಿ, ರಾಜೇಶ್ ನಾಯಿಕ್ ಉಳಿಪಾಡಿ, ಸುಂದರ ಶೆಟ್ಟಿ ಅವರು ಅತಿಥಿಗಳಾಗಿದ್ದರು.ರಘುಚಂದ್ರ ಭಂಡಾರಿ, ಶಿವಣ್ಣ ಶೆಟ್ಟಿ, ಬಾಲಕೃಷ್ಣ ಶೆಟ್ಟಿ, ಮಂಜುನಾಥ ಭಂಡಾರಿ, ವರ್ಧಮಾನ ದುರ್ಗಾ ಪ್ರಸಾದ್ ಶೆಟ್ಟಿ ಶಶಿಧರ ಶೆಟ್ಟಿ ಉಪಸ್ಥಿತ ರಿದ್ದರು. ಗುರುಪುರ ಬಂಟರ ಸಂಘದ ಅಧ್ಯಕ್ಷ ಸುದರ್ಶನ ಶೆಟ್ಟಿ ಪೆರ್ಮಂಕಿ ಸ್ವಾಗತಿಸಿದರು. ಕಾರ್ಯದರ್ಶಿ ಪುರುಷೋತ್ತಮ ಮಲ್ಲಿ ವರದಿ ಮಂಡಿಸಿದರು. ಸಂಚಾಲಕ ರಾದ ಜಿ.ಕೆ.ಕಿಟ್ಟಣ್ಣ ರೈ ಮತ್ತು ಮಲ್ಲಿಕಾ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಸ್ಮರಣ ಸಂಚಿಕೆ ಸಮಿತಿಯ ಸಂಪಾದಕ ಜಿ.ಲಕ್ಷ್ಮಣ ಶೆಟ್ಟಿ ವಂದಿಸಿದರು.

ಸುರತ್ಕಲ್ ಬಂಟರ ಸಂಘದ ಕಾರ್ಯದರ್ಶಿ ಉಲ್ಲಾಸ್ ಶೆಟ್ಟಿ ಪೆರ್ಮುದೆ, ಸಾಂಸ್ಕೃತಿಕ ಕಾರ್ಯದರ್ಶಿ ಪ್ರಹ್ಲಾದ್ ಶೆಟ್ಟಿ , ಸುಧಾಕರ ಪೂಂಜ ಹೊಸಬೆಟ್ಟು ಪ್ರಥಮ ಪ್ರಶಸ್ತಿಯನ್ನು ಸ್ವೀಕರಿಸಿದರು.

0 comments:

Post a Comment