ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಅನಿವಾಸಿ ಕನ್ನಡಿಗ ಕುಂಟಿಕಾನ ಮಠ ಕುಮಾರ್ ರವರಿಗೆ ಆರ್ಯಭಟ ಪ್ರಶಸ್ತಿ

ಈ ವರುಷದ ಪ್ರತಿಷ್ಟಿತ ಆರ್ಯಭಟ ಪ್ರಶಸ್ತಿ ಯನ್ನು ಶ್ರೀ ಕುಂಟಿಕಾನ ಮಠ ಕುಮಾರ್ ರವರು ಪಡೆದು ಕೊಂಡಿದ್ದಾರೆ.ಭಾರತೀಯ ಸಂಸ್ಕೃತಿಯನ್ನು ಯುರೋಪಿನಾದ್ಯಂತ ಪ್ರಚಾರ ಮಾಡುತ್ತಿರುವ ಅವರ ಸಾಧನೆಯನ್ನು ಪರಿಗಣಿಸಿ ಬೆಂಗಳೂರಿನ ಆರ್ಯಭಟ ಸಾಂಸ್ಕೃತಿಕ ಸಂಸ್ಥೆ ಈ ಪ್ರಶಸ್ತಿಯನ್ನು ಘೋಷಿಸಿದೆ.ಏಪ್ರಿಲ್ ೯ ರಂದು ರವಿಂದ್ರ ಕಲಾಕ್ಷೇತ್ರದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿಯನ್ನು ಕೊಡಲಾಗುವುದು.
ಕಳೆದ ಹಲವಾರು ವರುಷಗಳಿಂದ ನಮ್ಮ ಯಕ್ಷಗಾನ ವನ್ನು ಲಂಡನ್ ಪರೇಡ್ ,ಪ್ಯಾರಿಸ್ ಪರೇಡ್ ನಲ್ಲಿ ಪ್ರದರ್ಶಿಸಿದ್ದಾರೆ.ಬ್ರಿಟನ್ ಗಾಟ್ ಟಾಲೆಂಟ್ ಎಂಬ ಬಹುದೊಡ್ಡ ಪ್ರತಿಭಾನ್ವೇಷಣೆ ಯಲ್ಲಿ ಎರಡನೆ ಸುತ್ತಿನ ವರೆಗೆ ಯಕ್ಷಗಾನವನ್ನು ತೆಗೆದು ಕೊಂಡು ಹೋಗಿದ್ದಾರೆ. ಭಾರತದ ಆಯುರ್ವೇದ ,ಯೋಗ ವನ್ನು ಯುರೋಪಿನಾದ್ಯಂತ ಬೆಳೆಸಲು ಹತ್ತು ಹಲವಾರು ಸಂಘ ಸಂಸ್ಥೆ ಗಳೊಂದಿಗೆ ಕೈ ಜೋಡಿಸಿ ಕೊಂಡಿದ್ದಾರೆ. ಕುಟುಂಬದ ದೇವಸ್ಥಾನವಾದ ಕುಂಟಿಕಾನ ಮಠ ಶಂಕರ ನಾರಾಯಣ ದೇವಸ್ಥಾನದಲ್ಲಿ ಸಾಂಸ್ಕೃತಿಕ,ವೈದಿಕ ,ಸಾಹಿತ್ಯಕ ಮತ್ತು ದೇವಸ್ಥಾನದ ಅಭಿವೃದ್ದಿಗಾಗಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಆರ್ಯಭಟ ಪ್ರಶಸ್ತಿಯನ್ನು ಪಡೆಯುವ ದೊಡ್ಡ ಸಾಧನೆಯೇನು ತಾನು ಮಾಡಿಲ್ಲ ಎನ್ನುವ ಕುಮಾರ್ ರವರು ತಮ್ಮ ತಂದೆ, ಮತ್ತು ಕುಟುಂಬದ ಹಿರಿಯರು ಮಾಡಿದ ಸಾಂಸ್ಕೃತಿಕ ,ದೈವಿಕ ಕೆಲಸದಿಂದ ಪ್ರೇರೇಪಿತ ನಾಗಿ ಕೆಲವಷ್ಟು ಕೆಲಸ ಮಾಡಿದ್ದೇನೆ ಎನ್ನುತ್ತಾರೆ.ಕುಟುಂಬದ ಎಲ್ಲ ಸದಸ್ಯರ ಪರವಾಗಿ ಈ ಪ್ರಶಸ್ತಿಯನ್ನು ಸ್ವೀಕರಿಸುವುದಾಗಿ ತಿಳಿಸಿದ್ದಾರೆ.

ಕನ್ನಡ ಸಾಹಿತ್ಯ ,ವೇದ ಮೊದಲಾದ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಅಗಾಧವಾದ ಪ್ರೇಮ ವಿರುವ ಕುಂಟಿಕಾನ ಮಠ ಕುಮಾರ್ ರವರು ಇಂದು ಅಧುನಿಕ ಜಗತ್ತಿನಲ್ಲಿ ,ಪಾಶ್ಚಾತ್ಯ ಸಂಸ್ಕೃತಿ ನಮ್ಮ ದೇಶದಲ್ಲಿ ಬೀಡು ಬಿಡುತ್ತಿರುವ ಹಿನ್ನೆಲೆಯಲ್ಲಿ ಪಾಶ್ಚಾತ್ಯರ ನಾಡಿನಲ್ಲಿ ಭಾರತೀಯ ಸಂಸ್ಕೃತಿಯನ್ನು ಪ್ರಚಾರ ಮಾಡುತ್ತಿರುವುದು ನಿಜವಾಗಿಯೂ ಶ್ಲಾಘನೀಯ.

1 comments:

Padyana Ramachandra said...

ಪ್ರತಿಷ್ಠಿತ ಆರ್ಯಭಟ ಪ್ರಶಸ್ತಿ ಪಡೆದ ಅನಿವಾಸಿ ಕನ್ನಡಿಗ ಕುಂಟಿಕಾನ ಮಠ ಕುಮಾರ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.

-ಪ.ರಾಮಚಂದ್ರ,
ರಾಸ್ ಲಫ್ಫಾನ್, ಕತಾರ್

Post a Comment