ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಪ್ರಾದೇಶಿಕ ಸುದ್ದಿ


ಮೂಲ್ಕಿ: ಸಂಬೃದ್ಧ ಮಾನವ ಸಂಪನ್ಮೂಲ ಹೊಂದಿರುವ ನಮ್ಮ ದೇಶದ ಬಗ್ಗೆ ಯುವ ಪೀಳಿಗೆಯ ದೃಷ್ಠಿಕೋನವು ಧನಾತ್ಮಕವಾಗಿ ಬದಲಾವಣೆಗೋಳ್ಳುವುದು ದೇಶದ ಅಭಿವೃದ್ಧಿಗೆ ಬಹಳ ಅಗತ್ಯ ಎಂದು ಮಂಗಳೂರು ಎನೊಪೋಯಾ ವಿಶ್ವ ವಿದ್ಯಾನಿಲಯದ ಉಪಕುಲಪತಿ ಡಾ.ಸೈಯದ್ ಆಖೀಲ್ ಅಹಮ್ಮದ್ ಹೇಳಿದರು.
ಅವರು ಶನಿವಾರ ಮೂಲ್ಕಿ ವಿಜಯಾ ಕಾಲೇಜು ಸಂಘಗಳ ವಾರ್ಷಿಕೋತ್ಸವದ ಪ್ರಯುಕ್ತ ಮುಖ್ಯ ಅತಿಥಿಯಾಗಿ ಮಾತನಾಡಿದರು.ಶಿಕ್ಷಣ ಎಂದಿಗೂ ಕಟ್ಟಿಟ್ಟ ನೀರಾಗಬಾರದು. ಅದು ಅಭಿವೃದ್ಧಿಯ ಪಥದಲ್ಲಿ ಸಂಶೋಧನಾತ್ಮಕ ನಿಲುವುಗಳೊಂದಿಗೆ ಹರಿಯಬೇಕು ಈ ನಿಟ್ಟಿನಲ್ಲಿ ಕಾಲೇಜುಗಳು ಕೇವಲ ಶಿಕ್ಷಣ ಮಂದಿರವಾಗದೆ ಅದು ಸಂಶೋಧನಾ ಕೇಂದ್ರವಾಗಿ ವಿದ್ಯಾರ್ಥಿಗಳಿಗೆ ನಿರಂತರ ಮೌಲಾಧಾರಿತ ನೂತನ ತಂತ್ರಜ್ಞಾನಾಧಾರಿತ ಶಿಕ್ಷಣ ನೀಡುವಂತಾಗಬೇಕು ಮತ್ತು ಅದ್ಯಾಪಕರು ಸದಾ ಸಂಶೋಧನೆ ಮತ್ತು ನಿರಂತರ ಅಧ್ಯಯನ ನಡೆಸುವ ಮೂಲಕ ಯುವ ಪೀಳಿಗೆಯ ಆಸಕ್ತಿಯನ್ನು ಹೆಚ್ಚಿಸುವ ಕಾರ್ಯಮಾಡಬೇಕು ಎಂದ ಅವರು ವಿಜಯಾ ಕಾಲೇಜು ಮುಂದಿನ ದಿನಗಳಲ್ಲಿ ಸ್ನಾತಕೋತ್ತರ ಸಂಶೋಧನಾ ಕೇಂದ್ರ ಆರಂಭಿಸುವಂತಾಗಲಿ ಎಂದು ಹಾರೈಸಿದ ಅವರು ವಿಜಯಾ ಕಾಲೇಜಿನ ವಿದ್ಯಾರ್ಥಿ ಸಂಘಗಳ ವಿವಿಧ ಕಾರ್ಯ ಚಟುವಟಿಕೆಗಳ ಬಗ್ಗೆ ತಿಳಿದು ಶ್ಲಾಘಿಸಿದರು.

ಈ ಸಂದರ್ಭ ಮಂಗಳೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರುರವರ ಸಹಯೋಗದೊಂದಿಗೆ ಮಂಗಳೂರು ವಿಶ್ವ ವಿದ್ಯಾನಿಲಯ ಮಟ್ಟದ ವಿದ್ಯಾರ್ಥಿಗಳಿಗಾಗಿ ವಿಜಯಾ ಕಥಾ ಮತ್ತು ಕವನ ಸ್ಪರ್ಧೆ ನಡೆಸಲಾಗಿದ್ದು ವಿವಿಧ ಕಾಲೇಜುಗಳಿಂದ 79ಕವನ ಮತ್ತು 26 ಕಥೆ ಆಗಮಿಸಿದ್ದು ಬಹುಮಾನಗಳನ್ನು ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಸರ್ವೋತ್ತಮ ಅಂಚನ್ ವಿತರಿಸಿದರು. ಈ ಸಂದಭಜ್ಕವನ ಸ್ಪರ್ಧೆಯಲ್ಲಿ ಪ್ರಥಮ ಪ್ರಶಸ್ತಿ ವಿಜೇತ ವಿಜಯಾ ಕಾಲೇಜು ವಿದ್ಯಾರ್ಥಿನಿ ಸೌಜನ್ಯ ಮತ್ತು ಪಶ್ಚಿಮ ಹಿಮಾಲಯ ಚಾರಣ ಗೈದ ವಿಕ್ರಮ್ ಮತ್ತು ಸೂರಜ್ ರವರನ್ನು ಮತ್ತು ಮಂಗಳೂರು ವಿಶ್ವ ವಿದ್ಯಾನಿಲಯ ಪುಟ್ಬಾಲ್ ತಂಡಕ್ಕೆ ಗೋಲ್ ಕೀಪರ್ ಆಗಿ ಸೇರ್ಪಡೆಗೊಂಡ ತೇಜಸ್.ಎನ್.ಕರ್ಕೇರಾ ಹಾಗೂ ಕರ್ನಾಟಕ ಮುಕ್ತ ವಿಶ್ವ ವಿದ್ಯಾನಿಲಯದ ವಿಜಯಾ ಕಾಲೇಜು ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳಾಗಿ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ಸ್ನಾತಕೋತ್ತರ ವಿಭಾಗದಲ್ಲಿ 7ನೇ ರ್ಯಾಂಕ್ ಗಳಿಸಿದ ಹರೀಶ್ ಹೆಜ್ಮಾಡಿ ಹಾಗೂ ಪ್ರಕಾಶ್ ಸುವರ್ಣ,ಭಾಗ್ಯವಾನ್ ಸನಿಲ್, ನರೇಂದ್ರ ಕೆರೆಕಾಡು ರವರನ್ನು ಗಣ್ಯರು ಸನ್ಮಾನಿಸಿದರು. ರಾಜ್ಯ ವಿಪಕ್ಷ ಸಚೇತಕ ಅಭಯಚಂದ್ರ ಜೈನ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ಡಾ.ಎಂ.ಎ.ಆರ್.ಕುಡ್ವಾ, ಪ್ರಾಂಶುಪಾಲ ಪ್ರೊ.ಅರವಿಂದ ಜೋಶಿ, ಪಿ.ಯು ಕಾಲೇಜು ಪ್ರಾಂಶುಪಾಲ ಪ್ರೊ.ತಮ್ಮಯ್ಯ ಶೆಟ್ಟಿ, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ.ನಾರಾಯಣ, ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಪ್ರೊ.ಹಯವದನ ಉಪಾಧ್ಯ, ವಿದ್ಯಾರ್ಥಿ ಸಂಘಗಳ ಸಂಚಾಲಕಿ ಅಕ್ಷತಾ ಸಾಲ್ಯಾನ್ ಮತ್ತು ವಿವಿಧ ಸಂಘಗಳ ಕಾರ್ಯದರ್ಶಿಗಳು ವೇದಿಕೆಯಲ್ಲಿದ್ದರು.

ಅಕ್ಷತಾ ಸಾಲ್ಯಾನ್ ಸ್ವಾಗತಿಸಿದರು. ರ್ಶುತಿಕಾ ಮತ್ತು ಸುಪ್ರಿತಾ ಕಾರ್ಯಕ್ರಮ ನಿರೂಪಿಸಿದರು. ನಿವೇದಿತಾ ವಂದಿಸಿದರು.
ವರದಿ: ಭಾಗ್ಯವಾನ್ ಮುಲ್ಕಿ

0 comments:

Post a Comment