ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
9:22 PM

ಅವರವರ ಭಾವಕ್ಕೆ...

Posted by ekanasu

ವೈವಿಧ್ಯ

ಸ್ನೇಹಿತರ ಹತ್ತಿರ ಲೊಟ್ಟೆ-ಲೋಸ್ಕು ಪುರಾಣ ಮಾತಾಡ್ತಾ ಇರ್ಬೇಕಾದ್ರೆ ಮನುಷ್ಯರೆಲ್ಲಾ ಅಮೀಬಾಗಳಂತೆ Reproduction ಮಾಡೋಹಾಗಿದ್ದಿದ್ರೆ ಹೇಗ್ ಇರ್ತಿತ್ತು ಅನ್ನೂ ವಿಷಯ ಪ್ರಸ್ತಾಪ ಆಗಿತ್ತು , ಒಂದು ವೇಳೆ ಮನುಷ್ಯರೆಲ್ಲಾ ಅಮೀಬಾ ತರ ಆಗೊಗಿದ್ರೆ ಕವಿತೆಗಳು, ಚಿತ್ರಗಳು, ಬಣ್ಣಗಳು ಯಾವುದು ಹುಟ್ಟುತ್ತಿರಲಿಲ್ಲವೇನೋ, ಪ್ರಣಯಕ್ಕೂ ಮತ್ತು ಪ್ರಳಯಕ್ಕೂ ಅಂತಹ ವ್ಯತ್ಯಾಸ ಗೊತ್ತಾಗ್ತಾ ಇರ್ಲಿಲ್ಲ ! . ಆದ್ರೆ ನೆನಪುಗಳನ್ನು ಅಮೀಬಾಕ್ಕೆ ಹೋಲಿಸಬಹುದು, ಒಂದರ ಹಿಂದೆ ಒಂದು ಬಿಚ್ಚಿಕೊಳ್ತಾ ಹೋಗುತ್ತೆ , ಕೆಲವೊಂದು ಬೇಡವಾದ ನೆನಪುಗಳ ಮೇಲೆAttempt to Murder ಕೇಸ್ ಹಾಕಿ ಗಲ್ಲಿಗೆ ಹಾಕೋಣ ಅಂದ್ರೆ ಹೇಗೋ ಜಾಮೀನಿನ ಮೇಲೆ ಹೊರೆಗೆ ಬಂದು ಮತ್ತೆ ಕಾಡ್ತಾವೆ !
ಬೇಡ ಕಣ್ಲಾ ಇಷ್ಟೊಂದು complex ಆಗ್ ಬೇಡ ಅಂತ ಸ್ನೇಹಿತನ ಕಾಳಜಿ ಕೆಲವೊಂದು ಸಲ ಸರಿ ಅನ್ನಿಸಿದ್ರೂ , ಶಾಪ್ಪಿಂಗ್ ಮಾಲ್ ಗಳಲ್ಲಿ ಕಳೆದು ಹೋಗೋಕೆ ಇಷ್ಟ ಇಲ್ಲ , ಅಜ್ಞಾತದ ಕಡೆಗೆ ಒಂದು ನೆಗೆತ ಬೇಕು ಅನ್ಸುತ್ತೆ, a perfect unfamiliar. ಒಂದು ಚೂರು ಪರಿಚಯವಿಲ್ಲದ್ದನ್ನು ಕಾಣದ ಊರಿಗೆ ಹೋಗಿ ಗೊತ್ತಿಲ್ಲದನ್ನು ಹುಡುಕುವ ಆಸೆ ಮರೀಚಿಕೆ ಆಗೋ ಭಯ ಕಾಡಿದಾಗೆಲ್ಲ ಕವಿತೆ, ಹಾಡು, ಡಾರ್ಕ್ ರಮ್ ಯಾವುದು ರುಚಿಸೋಲ್ಲ. ಪ್ರತೀ ನಿಮಿಷವೂ ಗಂಟೆಗಳಷ್ಟು ಕೆಳೆದ ಅನುಭವ (ಥೇಟ್ ಗಾಂಜಾ ಹೊಡೆದಂತೆ). ಬಹುಶಃ ಇದು ಮನಸ್ಸಿನ ಒಂದು ಭಾವದ ಉತ್ಕಟತೆ ಆಗಿರಲಿಕ್ಕೆ ಮಾತ್ರ ಸಾಧ್ಯವೇನೋ .

ಕೊನೆಗೆ ನಮ್ಮೆಲ್ಲಾ ತೀವ್ರ ತರಹದ ಭಾವನೆಗಳನ್ನು ಕಲ್ಪಿಸಿಕೊಳ್ಳುವಂತಹ intensity ಮನಸ್ಸಿಗಿದ್ದರೂ ಎಲ್ಲವೋ ನಮ್ಮ ಅಭಿವ್ಯತಿತ್ವಕ್ಕೆ ಮತ್ತು ಮಾನಸಿಕ ಪರಾತಂತ್ರ್ಯಕ್ಕೆ ಬಿಟ್ಟಿದ್ದು. ಪರಾತಂತ್ರ್ಯ ಭಾವವಿರುವುದು ಮನಸಿನ್ನಲ್ಲೇ ಹೊರತು ದೇಹದಲಲ್ಲವಲ್ಲ. ಕಾಮಾಟಿಪುರದ ಬೀದಿಗಳಲ್ಲಿ ನಿರೋದ್ ಪ್ಯಾಕೆಟ್ ಮಾರುವ ಪುಟ್ಟ ಬಾಲಕನನ್ನು ಕಂಡಾಗ ಫೆಮಿನಿಸಂನ ತತ್ವಗಳು ಊದಿ ಹಾರಲು ಬಿಟ್ಟ ಬಲೂನ್ , ಬಹುಶಃ ಅದು ಪರಾತಂತ್ರ್ಯದ ಇನ್ನೊಂದು phase ಇರಬಹುದೇನೋ. ಲೊಟ್ಟೆ-ಲೋಸ್ಕು ಪುರಾಣಗಳು, ಫೆಮಿನಿಸಂ ತತ್ವಗಳು, ದೊಡ್ಡ ದೊಡ್ಡ ಆಚಾರ್ಯರ ಸಿದ್ದಾಂತಗಳು, ವೈಜ್ಞಾನಿಕ ಥಿಯರಿಗಳು, ರಾತ್ರಿ ದಂಧೆಗಳ ಮೇಲೆ ನಿಂತ ಪಟ್ಟಣಗಳ ಹಗಲುಗಳು ನಮ್ಮ ನಮ್ಮ ಮನೆಯ ಉಪ್ಪಿನ ಋಣದಿಂದ ಮುಕ್ತವಾಗಿರಲಿಕ್ಕೆ ಸಾದ್ಯನೇ ಇಲ್ಲವೇನೋ.

ಸಂತೋಶ್ ಸಿ.ರಾವ್

0 comments:

Post a Comment