ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ

ಅಲ್ಲಿ ಮಕ್ಕಳ ನಗುವಿದೆ...ಮುಗ್ಧವಾದಂತಹ ನಿಷ್ಕಲ್ಮಶ ಭಾವನೆಗಳಿವೆ... ಆಟಗಳಿವೆ...ಚಿತ್ರಗಳಿವೆ...ಮುಖವಾಡವಿದೆ...ಮಕ್ಕಳ ಕೈಯಿಂದ ಚಿತ್ರಿಸಲ್ಪಟ್ಟ ಸುಂದರ ಚಿತ್ರಗಳಿವೆ. ಉಬ್ಬು ಶಿಲ್ಪಗಳಿವೆ... ಮುಖವಾಡಗಳಿವೆ...ಗೊಂಬೆ ಗಳಿವೆ... ಪುಟ್ಟ ಪುಟ್ಟ ಸುಂದರ ಶುಭಾಶಯ ಪತ್ರಗಳಿವೆ...ನೂರಾರು ಮುಖವಾಡಗಳು ಗೋಡೆಗಳಲ್ಲಿ ತೂಗುಹಾಕಿವೆ.... ಹಾಡು ಕುಣಿತ..ರಂಗಗೀತೆ ಹೀಗೆ ನಿರಂತರ ಚಟುವಟಿಕೆ...ಎಲ್ಲವೂ ಸುಂದರ ಅಚ್ಚುಕಟ್ಟು...


ಆಳ್ವಾಸ್ ಎಂದ ಮೇಲೆ ಕೇಳಬೇಕೇ... ಎಲ್ಲವೂ ಸಮಯಕ್ಕೆ ಸರಿಯಾಗಿ ಶಿಸ್ತುಬದ್ಧವಾಗಿ ನಡೆದೇ ನಡೆಯುತ್ತದೆ. ಈ ಶಿಬಿರವೂ ಹಾಗೆಯೇ... ಮಕ್ಕಳ ಮಾನಸಿಕ ಮತ್ತು ಬೌದ್ಧಿಕ ಬೆಳವಣಿಗೆಗೆ ಪೂರಕವಾದ ಹತ್ತು ಹಲವು ವಿಚಾರಗಳು ಅಷ್ಟೇ ಶಿಸ್ತುಬದ್ಧವಾಗಿ `ಆಳ್ವಾಸ್ ಚಿಣ್ಣರ ಮೇಳ 2010'ರಲ್ಲಿ ಕಂಡುಬರುತ್ತವೆ.
ಮೂಡಬಿದಿರೆಯ ಸ್ವರಾಜ್ಯ ಮೈದಾನದ ಬಳಿಯಿರುವ ಆಳ್ವಾಸ್ ಸ್ಪೆಷಲ್ ಸ್ಕೂಲ್ ನಲ್ಲಿ ನೂರೈವತ್ತು ಮಂದಿ ಚಿಣ್ಣರು ಏಪ್ರಿಲ್ 25ರಿಂದ ಒಟ್ಟಾಗುತ್ತಿದ್ದಾರೆ. ಬೆಳಗ್ಗಿನಿಂದ ಸಂಜೆಯ ತನಕ ನಿರಂತರ ಚಟುವಟಿಕೆಯಲ್ಲಿ ಕೂಡಿರುತ್ತಾರೆ. ಕಸದಿಂದ ರಸ ತೆಗೆಯುತ್ತಾರೆ... ಪವಾಡಗಳೆಲ್ಲವೂ ಇಷ್ಟೇ ಎಂಬಂತೆ ಅದರ ರಹಸ್ಯಗಳನ್ನು ಬಯಲುಗೊಳಿಸುತ್ತಾರೆ. ರಂಗ ಚಟುವಟಿಕೆಗಳಲ್ಲೂ ತೊಡಗುತ್ತಾರೆ. ಹೀಗೆ ಹತ್ತು ಹಲವು ಚಟುವಟಿಕೆಗಳನ್ನು ಮಾಡುತ್ತಾ ಜನಮನ ಗೆಲ್ಲುತ್ತಿದ್ದಾರೆ.

ರಜೆಯನ್ನು ಸುಮ್ಮನೆ ಕಳೆಯದೆ ಒಂದಷ್ಟು ಸದುಪಯೋಗ ಪಡಿಸುವ ಉದ್ದೇಶದಿಂದ ಈ ಮೇಳಕ್ಕೆ ಬಂದ ಚಿಣ್ಣರಿಗೆ ರಂಗ ನಿರ್ದೇಶಕ ಜೀವನ್ ರಾಂ ಸುಳ್ಯ ಸೂಕ್ತ ಮಾರ್ಗದರ್ಶನದ ಪಾಠ ಕಲಿಸುತ್ತಿದ್ದಾರೆ. ಜೊತೆಗೆ ಹರೀಶ್ ಆಚಾರ್ಯ, ಮುರಹರಿ ಕಾಸರಗೋಡು, ವಿಕ್ರಂ ಶೆಟ್ಟಿ, ತಾರಾನಾಥ ಕೈರಂಗಳ, ಮೈಮ್ ರಾಮದಾಸ್, ವಿಸ್ಮಯ ವಿನಾಯಕ, ಭಾಸ್ಕರ ನೆಲ್ಯಾಡಿ, ಭಗೀರಥ ಕುಮಟ, ರಕ್ಷಿತಾ ಕೋಟ್ಯಾನ್ ಬಾಲಕೃಷ್ಣ ಶೆಟ್ಟಿ, ಮೌಲ್ಯ ಜೀವನ್, ನವೀನ್ ಪೀಲಾರ್, ಶಾರದಾ ಎಸ್ ರಾವ್, ರಮೇಶ್ ಉಳಯ , ಸ್ಮಿತಾ ಹುಬ್ಬಳ್ಳಿ, ಹರೀಶ್ ಟಿ.ಜಿ ವಿವಿಧ ವಿಚಾರಗಳ ಕುರಿತಾದ ಮಾಹಿತಿಗಳನ್ನು ನೀಡುತ್ತಿದ್ದಾರೆ.

0 comments:

Post a Comment