ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಪ್ರಾದೇಶಿಕ ಸುದ್ದಿ

ಲೇಖನಿ ಇದು ಖಡ್ಗ ಅಲ್ಲ... ಹೌದು ಇದು ಖಡ್ಗ ಅಲ್ಲ ...ಬದಲಾಗಿ ಭಿನ್ನ ವಿಭಿನ್ನ ಸುದ್ದಿಗಳನ್ನು ಪೋಣಿಸಿದ ಸುಂದರ ಮುತ್ತು... ಕೈ ಬರಹದ ಪತ್ರಿಕೆ. ಇದನ್ನು ಹೊರತಂದವರು ಆಳ್ವಾಸ್ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿನಿ ನವ್ಯಜ್ಯೋತಿ ನೆಲ್ಲಿಜೆ.

ಅದೊಂದು ಸರಳ ಸಮಾರಂಭ. ಕಾಲೇಜಿನ ಪತ್ರಿಕೋದ್ಯಮ ವಿಭಾಗದ ವತಿಯಿಂದ ಏರ್ಪಡಿಸಲಾದ ಪುಟ್ಟ ಕಾರ್ಯಕ್ರಮ. ಹಿರಿಯ ಪತ್ರಕರ್ತ ಗೋವರ್ಧನ ಹೊಸಮನಿ ಕಾರ್ಯಕ್ರಮದ ಅತಿಥಿ. `` ಕೈ ಬರಹದ ಪತ್ರಿಕೆ ಲೇಖನಿ ಬಿಡುಗಡೆಗೊಳಿಸಿದ ಅವರು ಹೇಳಿದ್ದು : ಈ ಪ್ರಯತ್ನ ಪ್ರಾಥಮಿಕ ಶಾಲೆ, ಪ್ರೌಢ ಶಾಲೆ, ಕಾಲೇಜು ಮಟ್ಟದಲ್ಲಿ ಆಗಲೇ ಬೇಕಾದ ಅನಿವಾರ್ಯತೆ ಇಂದಿದೆ. ಪ್ರತೀ ತರಗತಿಗಳ ಪ್ರತೀ ವಿದ್ಯಾರ್ಥಿಗಳೂ ಈ ಪ್ರಯತ್ನದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು. ಆಗ ಮಾತ್ರ ಪ್ರತಿಭೆಗಳ ಅನಾವರಣ ಆಗಲು ಸಾಧ್ಯ'' .ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ.ಕುರಿಯನ್ : ``ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ಸುಪ್ತ ಪ್ರತಿಭೆಗಳಿವೆ. ಅವುಗಳನ್ನು ಒರೆಗೆ ಹಚ್ಚುವ ಕಾರ್ಯ ಆಗಬೇಕು. ಸ್ವ ಪರಿಶ್ರಮದಿಂದ ವ್ಯಕ್ತಿ ಉತ್ತುಂಗಕ್ಕೇರಲು ಸಾಧ್ಯ '' ಎಂದರು.
ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕಿ ಮೌಲ್ಯ ಜೀವನ್ ಸ್ವಾಗತಿಸಿದರು. ಪತ್ರಿಕೆಯ ಸಂಪಾದಕಿ ನವ್ಯಜ್ಯೋತಿ ನೆಲ್ಲಿಜೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಹರೀಶ್ ಕೆ.ಆದೂರು ಕಾರ್ಯಕ್ರಮ ನಿರ್ವಹಿಸಿದರು. ಹರೀಶ್ ಚಂದ್ರ ವಂದಿಸಿದರು.0 comments:

Post a Comment