ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ

ಬೆಂಗಳೂರು: ಸಾಂಗತ್ಯ ಸಿನಿಮಾಸಕ್ತರ ಬಳಗ. ಒಂದಷ್ಟು ಮಂದಿ ಹೀಗೇ ಕೂಡಿಕೊಂಡು ಕಟ್ಟಿಕೊಂಡದ್ದು. ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದಲ್ಲಿ ಇದರ ಕಚೇರಿ. ವರ್ಷಕ್ಕೆರಡು ಚಿತ್ರ ಶಿಬಿರ, ಕಾರ್ಯಾಗಾರಗಳನ್ನು ಎರಡು ವರ್ಷದಿಂದ ಹಮ್ಮಿಕೊಳ್ಳುತ್ತಿದೆ. ಈಗ ಸಾಂಗತ್ಯ ಮ್ಯಾಗಜೈನ್ ಶುರು ಮಾಡಿದೆ.
ಸಾಂಗತ್ಯ ಮ್ಯಾಗಜೈನ್ ಸಿನಿಮಾ ಬಗ್ಗೆ ಆಪ್ತ ಸಂವಾದ ಕಲ್ಪಿಸುವಂಥದ್ದು. ಸಿನಿಮಾದ ಭಾಷೆ, ವ್ಯಾಕರಣದಂಥ ತಾಂತ್ರಿಕ ವಿಷಯಗಳಿಂದ ಹಿಡಿದು, ವಿಶ್ಲೇಷಣೆ, ಸಂವಾದ, ಚರ್ಚೆ ಎಲ್ಲವನ್ನೂ ಈ ಪತ್ರಿಕೆ ಒಳಗೊಳ್ಳಲಿದೆ. ಒಂದು ನೆಲೆಯಲ್ಲಿ ಹೇಳುವುದಾದರೆ ಸಾಹಿತ್ಯ ಕ್ಷೇತ್ರದಲ್ಲಿ ಇರುವ ಗಂಭೀರ ಸಂವಾದದ ಪತ್ರಿಕೆಗಳಂತೆ (ಸಂಚಯ, ದೇಶಕಾಲ ಇತ್ಯಾದಿ).ಕನ್ನಡದಲ್ಲಿ ಮೊದಲ ಬಾರಿಗೆ ಇಂಥ ಪ್ರಯತ್ನ ನಡೆಯುತ್ತಿರುವುದು. ಈ ಹಿಂದೆ ೯೦ ರ ದಶಕದಲ್ಲಿ ಡಾ. ವಿಜಯಾ ಅವರ ಸಂಪಾದಕತ್ವದಲ್ಲಿ "ಸಂಕುಲ" ಎಂಬ ಮ್ಯಾಗಜೈನ್ ಆರಂಭವಾಗಿತ್ತು. ಅದು ಸೃಜನಶೀಲ ಕಲೆಗಳ ಕುರಿತು ಇಂಥದೊಂದು ಪ್ರಯತ್ನ ನಡೆಸಿತ್ತು. ಸಾಂಗತ್ಯ ಸಿನಿಮಾಕ್ಕೇ ಮೀಸಲಾದದ್ದು. ಈ ಮೂಲಕ ಆಸಕ್ತರಿಗೆ ಸಿನಿಮಾ ಮಾಧ್ಯಮ ಮತ್ತು ಅದರ ಭಾಷೆ ಕುರಿತು ಒಂದಿಷ್ಟು ಮಾಹಿತಿ ನೀಡುವುದು ಸಾಂಗತ್ಯ ಬಳಗದ ಆಶಯ.


ಮೊದಲ ಸಂಚಿಕೆಯಲ್ಲಿ ಏನೇನಿದೆ ?
ನಮ್ಮ ಪ್ರಥಮ ಸಂಚಿಕೆಯಲ್ಲಿ ಬಹಳ ವಿಶಿಷ್ಟವಾದ ೨೦ ಕ್ಕೂ ಹೆಚ್ಚು ಲೇಖನಗಳಿವೆ. ಒಟ್ಟು ಪುಟಗಳು ೧೧೨, ಖ್ಯಾತನಾಮರಿಂದ ಹಿಡಿದು ಹೊಸಬರೂ ಇದರಲ್ಲಿ ಲೇಖನಗಳನ್ನು ಬರೆದಿದ್ದಾರೆ. ಇಡೀ ಸಿನಿಮಾ ಅಲೆಯ ಕುರಿತಾದ ವಿಶ್ಲೇಷಣೆಯಿಂದ ಹಿಡಿದು, ಬಾಲಿವುಡ್ ನ ಪ್ರಯೋಗಗಳ ಕುರಿತೂ ಚರ್ಚೆ ನಡೆದಿದೆ.


"ಸಿನಿಮಾ ಸಂಸ್ಕಾರ", "ರನ್ ಲೋಲಾ ರನ್" ಕುರಿತ ಲೇಖನ, ಅಕಿರಾ ಕುರಸೋವಾನ ನೆನಪು, ಮುಖ್ಯವಾಹಿನಿ ಚಿತ್ರಗಳಲ್ಲಿನ ಸೌಂದರ್ಯ ಮೀಮಾಂಸೆಯ ಕುರಿತ ನೋಟ, ಚಿತ್ರ ಅನಿಸಿಕೆ, ನಾಯಕಿಯೊಬ್ಬಳು ಬರೆದ ಪದ್ಯಗಳು, ಸಿನಿಮಾದೊಳಗಿನ ಭಾವತೀರಯಾನ...ಇನ್ನೂ ಹತ್ತು ಹಲವು ಲೇಖನಗಳು.


ಬಿಡುಗಡೆ ಎಂದು ?
ಏಪ್ರಿಲ್ ೨೪ ರಂದು ಸಂಜೆ ೫ ಕ್ಕೆ ಬಾದಾಮಿ ಹೌಸ್ (ಬೆಂಗಳೂರು ಮಹಾನಗರ ಪಾಲಿಕೆ ಎದುರು) ಬಿಡುಗಡೆಗೊಳ್ಳಲಿದೆ. ಗಿರೀಶ್ ಕಾಸರವಳ್ಳಿಯವರು ಬಿಡುಗಡೆಗೊಳಿಸುವರು. ಚಿತ್ರ ನಿರ್ದೇಶಕ ಗುರುಪ್ರಸಾದ್, ಟಿ.ಎಸ್. ನಾಗಾಭರಣ, ಡಾ. ವಿಜಯಾ ಪಾಲ್ಗೊಳ್ಳುವರು.

0 comments:

Post a Comment