ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಪ್ರಾದೇಶಿಕ ಸುದ್ದಿ
ಮುಲ್ಕಿ : ಬಾಡಿಗೆ ಮನೆಯಲ್ಲಿ ವಾಸವಾಗಿ ಪರಿಸರದ ವಿಶ್ವಾಸಗಳಿಸಿ ಮನೆಯವರು ಇಲ್ಲದ ಸಮಯ ಮಾಡಿನ ಹೆಂಚು ತೆಗೆದು ಒಳನ್ನುಗ್ಗಿ ಚಿನ್ನಾಭರಣ ಕಳವು ನಡೆಸುತ್ತಿದ್ದ ಆರೋಪಿಯನ್ನು ಮೂಲ್ಕಿ ಪೋಲೀಸರು ಬಂಧಿಸಿದ್ದಾರೆ.ಆರೋಪಿಯನ್ನುಮುಂಡ್ಕೂರು ಗ್ರಾಮದ ಸಚ್ಚರಿಪೇಟೆ ನವದುರ್ಗಾ ರೈಸ್ ಮಿಲ್ ಬಳಿಯ ಬೆರ್ನೋಟ್ಟು ಮನೆಯ ದಿ.ರಾಮಚಂದ್ರ ಜೋಗಿಯವರ ಮಗ ಸುಧಾಕರ ಜೋಗಿ ಎಂದು ಗುರುತಿಸಲಾಗಿದೆ.ಮೆನ್ನಬೆಟ್ಟು ಗ್ರಾಮದ ರಾಜರತ್ನಪುರದ ವಾಸಿ ಜಂಯಂತಿ ಶೆಟ್ಟಿ ಕಳೆದ ಫೆಬ್ರವರಿ15ರಂದು ಮನೆಗೆ ಬೀಗಹಾಕಿ ಮುಂಬೈಯಲ್ಲಿದ್ದ ಮಗ ಮತ್ತು ಮಗಳ ಮನೆಗೆ ಹೋಗಿ ಏಪ್ರಿಲ್ ತಿಂಗಳಲ್ಲಿ ವಾಪಾಸು ಬಂದ ಸಮಯ ಮನೆಯ ಅಡುಗೆ ಕೋಣೆಯ ಸಿಮೆಂಟ್ ಶೀಟ್ ಜಾರಿಸಿ ಒಳ ಪ್ರವೇಶಿಸಿ ಮನೆಯ ಕೋಣೆಯ ಕಪಾಟಿನಲ್ಲಿರಿಸಿದ್ದ ಸುಮಾರು 39ಗ್ರಾಂ ಚಿನ್ನಾಬರಣಗಳನ್ನು ಹಾಗೂ ಮೊಬೈಲ್ ಫೋನ್ ಕಳವು ಮಾಡಿರುವ ಬಗ್ಗೆ ಜಂಯಂತಿಯವರು ಮೂಲ್ಕಿ ಠಾಣೆಗೆ ದೂರು ನೀಡಿದ್ದರು.
ಈ ಸಂದರ್ಭ ಮನೆಯ ಬಳಿ ಬಾಡಿಗೆಗೆ ವಾಸವಾಗಿರುವ ಸುಧಾಕರ ಎಂಬ ಕೂಲಿ ಕಾರ್ಮಿಕ ನಾಪತ್ತೆಯಾಗಿರುವುದರಿಂದ ಪೋಲೀಸರು ಆತನ ಬಗ್ಗೆ ಸಂಶಯ ವ್ಯಕ್ತ ಪಡಿಸಿ ತನಿಖೆ ನಡೆಸಿ ಆತನ ಜಾಡು ಹಿಡಿದು ಕಿನ್ನಿಗೋಳಿ ಮೂರು ಕಾವೇರಿ ಬಳಿ ವಶಕ್ಕೆ ಪಡೆದು ವೃತ್ತ ನಿರೀಕ್ಷಕ ಶಿವ ಪ್ರಕಾಶ್ ಆರ್. ನಾಯ್ಕ್ರವರ ಮುಂದೆ ಹಾಜರು ಪಡಿಸಿದ್ದರು. ಆರೋಪಿಯನ್ನು ವಿಚಾರಿಸಿದಾಗ ಆತ ತಪ್ಪು ಒಪ್ಪ್ಪಿಕೊಂಡು ಈತ ಮಾರಾಟ ಮಾಡಿರುವ ಚಿನ್ನಾಭರಣಗಳನ್ನು ಮಂಗಳೂರಿನ ಅಂಗಡಿಯಲ್ಲಿ ಈ ಪ್ರಕರಣದ ಆಭರಣಗಳನ್ನು ಸ್ವಾಧೀನ ಪಡಿಸಿಕೊಂಡಿದ್ದಾರೆ.
ಆರೋಪಿಯು ಪದವೀಧರನಾಗಿದ್ದು ಸುಜ್ಲಾನ್ ಕಂಪೆನಿಯಲ್ಲಿ ಸೂಪರ್ವೈಜರ್ ಆಗಿ ಕೆಲಸ ಮಾಡಿಕೊಂಡಿದ್ದ ಅಲ್ಲಿ ಕೆಲಸ ಬಿಟ್ಟಿ ಕೂಲಿ ವೃತ್ತಿ ನಿರ್ವಹಿಸುತ್ತಿದ್ದ ಎನ್ನಲಾಗಿದ್ದು ಈತನಿಗೆ ವಿವಾಹವಾಗಿ ಒಂದು ಮಗುವಿದೆ. ಈತನ ಪತ್ನಿ ಹಿಂದೆ ಪೂನಾದಲ್ಲಿರುವಾಗ ಸ್ಟೌ ಸಿಡಿದು ಮೃತಪಟ್ಟಿದ್ದಾಳೆ.ಈತ ಈ ಹಿಂದೆ ಹಿರಿಯಡ್ಕ ಠಾಣಾ ವ್ಯಾಪ್ತಿಯಲ್ಲಿ ಸರ ಸುಲಿಗೆ ಪ್ರಕರಣದ ಆರೋಪಿಯಾಗಿದ್ದು ಉಡುಪಿ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ.ಈತನು ನ್ಯಾಯಾಲಯಕ್ಕೆ ಹಾಜರಾಗದೆ ಇದ್ದುದರಿಂದ ನ್ಯಾಯಾಲಯವು ಪ್ರೊಕ್ಲೆಮೇಶನ್ ಹೊರಡಿಸಿದೆ. ಆರೋಪಿಯನ್ನು ಹಿಡಿಯುವ ಕಾರ್ಯಾಚರಣೆಯಲ್ಲಿ ಮೂಲ್ಕಿ ಪಿ.ಎಸ್.ಐ ಮುನಿಸ್ವಾಮಿ ನೀಲಕಂಠನ್, ಸಿಬ್ಬಂದಿಗಳಾದ ಚಂದ್ರಶೇಖರ, ಸುಂದರ, ಬೆನ್ನಿಯಚ್ಚನ್,ಸಂಝೀವ,ಸುಜು,ವರ್ಗೀಸ್, ಮೋಹನ ಭಾಗವಹಿಸಿದ್ದಾರೆ.
ಚಿತ್ರ-ವರದಿ: ಭಾಗ್ಯವಾನ್ ಮುಲ್ಕಿ

0 comments:

Post a Comment