ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ

ಬೆಂಗಳೂರು:ಅಬ್ಬಾ...! ಹೌದ್ರೀ...ಹಾಲು ಮತ್ತೆ ದುಬಾರಿಯಾಗಿದೆ. ನಂದಿನ ಹಾಲಿನ ದರವನ್ನು ಇದೀಗ ಪುನಃ ಏರಿಸಲಾಗಿದೆ. ಪ್ರತಿ ಲೀಟರ್ ಗೆ ಮೂರು ರುಪಾಯಿಗಳಷ್ಟು ಹೆಚ್ಚಿಸಲಾಗಿದೆ. ಪರಿಷ್ಕೃತ ದರ ನಾಳೆಯಿಂದಲೇ ಜಾರಿಯಾಗಲಿದೆ.
ಈ ವಿಚಾರವನ್ನು ಕೆಎಂಎಫ್ ಅಧ್ಯಕ್ಷ ಸೋಮಶೇಖರ ರೆಡ್ಡಿ ತಿಳಿಸಿದ್ದಾರೆ. ಹಾಲಿನ ಇತರೆ ಉತ್ಪನ್ನಗಳ ಬೆಲೆ ಏರಿಕೆಯ ಬಗ್ಗೆ ತಿಳಿಸಿಲ್ಲ. ಶೀಘ್ರ ಪರಿಷ್ಕೃತ ದರ ಪಟ್ಟಿ ಪ್ರಕಟಿಸುವುದಾಗಿ ಅವರು ಹೇಳಿದ್ದಾರೆ.ಹೈನುಗಾರಿಕಾ ಅಭಿವೃದ್ಧಿಗಾಗಿ ದರ ಏರಿಕೆ
ಹೈನುಗಾರಿಕಾ ಅಭಿವೃದ್ಧಿಯ ದೃಷ್ಠಿಯನ್ನಿಟ್ಟುಕೊಂಡು ದರ ಏರಿಕೆ ಮಾಡಲಾಗಿದೆ ಎಂಬ ಮುಖ್ಯಮಂತ್ರಿಗಳ ಮಾತಿಗೆ ಬೆಂಬಲನೀಡಿದ ರೆಡ್ಡಿ ಅವರು ರೈತರ ಉಪಯೋಗಕ್ಕಾಗಿ ಈ ಕ್ರಮ ಕೈಗೊಂಡಿದ್ದೇವೆಂದರು.

0 comments:

Post a Comment