ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವೈವಿಧ್ಯ

ಸೀಮೆ ಎಣ್ಣೆ ಬೆರೆಸಿ ಪೆಟ್ರೋಲ್ ಮಾರುವ, ಅಕ್ಕಿ ಜತೆ ಕಲ್ಲು ಬೆರೆಸುವ, ಉಪ್ಪಿನಲ್ಲಿ ಮಣ್ಣು ಸೇರಿಸುವ ಇಂದಿನ ದಿನಗಳಲ್ಲಿ ನಿಮ್ಮ ಕೈಯಲ್ಲಿರುವ ನೋಟೊಂದು ನಕಲಿಯಾಗಿದ್ದರೆ ಅದೇನು ಆಶ್ಚರ್ಯ ಪಡಬೇಕಾದ ಸಂಗತಿಯಲ್ಲ ಬಿಡಿ. ಆದರಿದು ಅಪರಾಧ.ನಿಮ್ಮ ಮುಗ್ಧತೆಗೆ ನೀವು ಬೆಲೆ ತೆರಬೇಕಾದೀತು ಎಂಬುದಷ್ಟೇ ಆಶ್ಚರ್ಯದ ಸಂಗತಿ.
ಸಾಮಾನ್ಯ ಜನರ ಮಾತು ಹಾಗಿರಲಿ. ಮಹಾರಾಷ್ಟ್ರದ ಅಪರಾಧ ಪತ್ತೆ ದಳ ಹಾಗೂ ಭಯೋತ್ಪಾದನಾ
ನಿಗ್ರಹ ದಳದ ಅಕಾರಿಗಳಿಗೇ ಅಸಲಿ ಹಾಗೂ ನಕಲಿ ನೋಟುಗಳ ನಡುವಿನ ವ್ಯತ್ಯಾಸ ಪತ್ತೆ
ಹಚ್ಚಲು ಸಾಧ್ಯವಾಗಲಿಲ್ಲ. ನಕಲಿ ನೋಟಿನಲ್ಲಿಯ ಶೇ. ೯೫ರಷ್ಟು ಭಾಗ ಅಸಲಿ ನೋಟುಗಳನ್ನೇ
ಹೋಲುತ್ತಿತ್ತು. ಆದರೆ,

ಈ ಸಂಗತಿ ನಕಲಿಯಲ್ಲ
* ದೇಶದಲ್ಲಿ ಪ್ರಸ್ತುತ ಚಲಾವಣೆಯಲ್ಲಿರುವ ೧೦ ಲಕ್ಷ ನೋಟುಗಳ ಪೈಕಿ ೪ ನೋಟುಗಳು ನಕಲಿ.
* ನಕಲಿ ನೋಟು ವ್ಯವಹಾರದಲ್ಲಿ ಸಿಕ್ಕಿ ಹಾಕಿಕೊಂಡರೆ ನಿಮ್ಮ ವಿರುದ್ಧ ಕಾನೂನು ಬಾಹೀರ
ಚಟುವಟಿಕೆ ತಡೆ ಕಾಯಿದೆ ಅನ್ವಯವಾಗುತ್ತದೆ.
* ಎಟಿಎಮ್ ಮೂಲಕವೂ ಕೆಲವು ಬಾರಿ ನಕಲಿ ನೋಟುಗಳು ಬಂದ ಉದಾಹರಣೆಗಳಿವೆ.
* ಕಳ್ಳ ನೋಟುಗಳನ್ನು ಪತ್ತೆ ಹಚ್ಚಲೆಂದೇ ತಯಾರಿಸಲಾದ ಚೆಕ್‌ಮೆಟ್ ಯಂತ್ರಗಳ ಕಣ್ಣಿಗೂ
ಈ ನಕಲಿ ನೋಟುಗಳು ಬೀಳದಿರುವಷ್ಟು ‘ಅಸಲಿ’ಯಾಗಿ ಮುದ್ರಿತವಾಗುತ್ತಿವೆ.
* ಉತ್ತರ ಪ್ರದೇಶ, ಗುಜರಾತ್, ಮಹಾರಾಷ್ಟ್ರ, ಆಂಧ್ರಪ್ರದೇಶ ಹಾಗೂ ಕರ್ನಾಟಕಗಳಲ್ಲಿ
ನಕಲಿ ನೋಟಿನ ಹಾವಳಿ ಅಕ.

ನಿಮಗಿದು ತಿಳಿದಿರಲಿ
* ಬಹುತೇಕ ಬ್ಯಾಂಕ್‌ಗಳು ಬಣ್ಣದ ಭೂಪಟ ಇಟ್ಟಿದ್ದು, ನಕಲಿ ನೋಟಿನ ಬಣ್ಣದ ಕುರಿತು
ಪ್ರಾಥಮಿಕ ಮಾಹಿತಿ ಪಡೆಯಬಹುದು.
* ಭಾರತೀಯ ರಿಸರ್ವ್ ಬ್ಯಾಂಕ್‌ನ ವೆಬ್‌ಸೈಟ್‌ನಲ್ಲಿ ಈ ಬಗ್ಗೆ ಸಾಕಷ್ಟು ಮಾಹಿತಿ ಲಭ್ಯ.
* ನಕಲಿ ನೋಟು ಪತ್ತೆ ಹಚ್ಚುವ ಚೆಕ್‌ಮೆಟ್ ಯಂತ್ರಗಳು ಎಲೆಕ್ಟ್ರಾನಿಕ್ಸ್
ಅಂಗಡಿಗಳಲ್ಲಿ ದೊರೆಯುತ್ತವೆ. ಸಾಧಾರಣವಾಗಿ ೧,೫೦೦-೪,೦೦೦ ರೂ.ಗಳ ಬೆಲೆಯಲ್ಲಿ ಇವು
ಲಭ್ಯ.
* ನಕಲಿ ನೋಟುಗಳನ್ನು ಪತ್ತೆ ಹಚ್ಚಲು ಬಳಸಬಹುದಾದ ಲೇಸರ್ ಟಾರ್ಚ್‌ಗಳು ೧೦-೪೦
ರೂ.ಗಳಿಗೆ ದೊರೆಯುತ್ತವೆ.
* ನಕಲಿ ನೋಟುಗಳನ್ನು ಪತ್ತೆ ಹಚ್ಚುವ ತಂತ್ರಜ್ಞಾನ ಕೆಲವು ಮೊಬೈಲ್‌ಗಳಲ್ಲೂ ಲಭ್ಯ.

ನಿಮ್ಮ ಸಹಕಾರ ಬೇಕು
ಕಳ್ಳನೋಟುಗಳು ಸಿಕ್ಕರೆ ಬಹುತೇಕ ಗ್ರಾಹಕರು ದೂರು ನೀಡಲು ಹಿಂಜರಿಯುತ್ತಾರೆ. ಕಾರಣ
ತಾವೆಲ್ಲಿ ಸಿಕ್ಕಿ ಬೀಳುತ್ತೇವೆಯೋ ಎಂಬ ಭಯ. ನಕಲಿ ನೋಟು ಪತ್ತೆಯಾದರೆ ಪೊಲೀಸರಿಗೆ
ದೂರು ನೀಡಿ. ನೋಟು ಎಲ್ಲಿ ಸಿಕ್ಕಿತು ಎಂಬುದರ ಬಗ್ಗೆ ಮಾಹಿತಿ ನೀಡಿ. ಈ ಬಗ್ಗೆ
ಪೊಲೀಸರು ಮುಂದಿನ ವಿಚಾರಣೆ ನಡೆಸುತ್ತಾರೆ. ನಕಲಿ ನೋಟಿನ ಚಲಾವಣೆ ರಿಯಲ್ ಎಸ್ಟೇಟ್
ಉದ್ಯಮ, ಪ್ರವಾಸಿ ತಾಣಗಳಲ್ಲಿ ಹೆಚ್ಚು. ಈ ಬಗ್ಗೆ ಜಾಗರೂಕರಾಗಿರಿ.

ಐಎಸ್‌ಐ ಕೈವಾಡ
ನೋಟು ಮುದ್ರಿಸುವ ಕಾಗದ ಹಾಗೂ ಇಂಕ್‌ನ್ನು ಆರ್‌ಬಿಐಗೆ ಜರ್ಮನ್ ಮೂಲದ ಕಂಪನಿಯೊಂದು
ಸರಬರಾಜು ಮಾಡುತ್ತಿದೆ. ಇದನ್ನು ಕೇವಲ ಯಾವುದಾದರೊಂದು ದೇಶದ ಸರಕಾರವಷ್ಟೇ ಖರೀದಿಸಲು
ಸಾಧ್ಯ. ಆದರೆ, ಪಾಕಿಸ್ತಾನ ಸರಕಾರವೇ ಭೂಗತ ಜಗತ್ತಿನ ನಂಟಿನೊಂದಿಗೆ ಭಾರತದ ಕರೆನ್ಸಿ
ಮಾದರಿಯ ಪೇಪರ್ ಹಾಗೂ ಇಂಕ್‌ನ್ನು ಖರೀದಿಸಿ, ನೋಟುಗಳನ್ನು ನಕಲಿಯಾಗಿ ಮುದ್ರಿಸಿ
ಐಎಸ್‌ಐ ಏಜೆಂಟರ ಮೂಲಕ ದೇಶದೊಳಕ್ಕೆ ನುಗ್ಗಿಸುತ್ತಿದೆ.

ಅಸಲಿ ನೋಟಿನಲ್ಲಿ ಇವುಗಳನ್ನು ಗಮನಿಸಿ
* ಮಹಾತ್ಮಾಗಾಂ ಭಾವಚಿತ್ರವಿರುವ ಸರಣಿಯ ನೋಟುಗಳು ಗಾಂಯ ವಾಟರ್ ಮಾರ್ಕ್ (ನೋಟಿನ
ಅಸಲಿತನ ಸೂಚಿಸುವ ಕಪ್ಪುಗೆರೆ) ಹೊಂದಿದ್ದು, ಬೆಳಕು ಹಾಗೂ ನೆರಳಿನ ಛಾಯೆ
ತೋರಿಸುತ್ತವೆ. ಅಲ್ಲದೆ, ಬಹುಮಾರ್ಗೀಸೂಚಕ ಗೆರೆಗಳನ್ನು ಹೊಂದಿರುತ್ತವೆ.
* ಪ್ರತಿ ನೋಟಿನಲ್ಲಿಯೂ ಮೂರು ಮಿಲಿ ಮೀಟರ್ ಅಗಲದ ಲಂಬವಾದ ಭದ್ರತಾ ಎಳೆ ಅಥವಾ ಕಡ್ಡಿ
ಇರುತ್ತದೆ. ಇದು ಸಿಲ್ವರ್ ಬ್ರೊಮೈಡ್ ಕಡ್ಡಿ. ಗಾಂ ಭಾವಚಿತ್ರದ ಎಡಭಾಗದಲ್ಲಿರುತ್ತದೆ.
ಒಂದಾದ ನಂತರ ಒಂದರಂತೆ ಹಿಂದಿಯಲ್ಲಿ ಭಾರತ, ಸಂಬಂತ ನೋಟಿನ ಮೌಲ್ಯದ ಅಂಕೆಗಳು (ಉದಾ:
೧೦೦೦, ೫೦೦, ೧೦೦) ಹಾಗೂ ಆರ್‌ಬಿಐ ಎಂಬ ಬರಹಗಳಿರುತ್ತವೆ. ಒಂದು ವೇಳೆ ೧೦೦೦, ೫೦೦
ಹಾಗೂ ೧೦೦ರ ನೋಟುಗಳನ್ನು ಒಟ್ಟಿಗೆ ಬೆಳಕಿಗೆ ಎದುರಾಗಿ ಹಿಡಿದರೆ, ಒಂದೇ ಕಡ್ಡಿಯಾಗಿ
ಕಂಡು ಬರುತ್ತದೆ.
* ೨೦ ರೂ.ಗಿಂತ ಅಕ ಮೌಲ್ಯದ ನೋಟುಗಳಲ್ಲಿ ಗಾಂ ಭಾವಚಿತ್ರದ ಬಲಭಾಗದಲ್ಲಿ ಲಂಬವಾದ
ಪಟ್ಟಿ ಇರುತ್ತದೆ. ಲೇಟೆಂಟ್ ಇಮೇಜ್‌ನಲ್ಲಿ ಸಂಬಂತ ಮೌಲ್ಯದ ಅಂಕೆಗಳನ್ನು
ಹೊಂದಿರುತ್ತವೆ. ನೋಟನ್ನು ಅಂಗಾತ ಹಿಡಿದಾಗ ಮಾತ್ರ ಈ ಲೇಟೆಂಟ್ ಇಮೇಜ್‌ನ್ನು
ಕಾಣಬಹುದು.
* ೫ ಹಾಗೂ ೧೦ರ ನೋಟುಗಳಲ್ಲಿ ಆರ್‌ಬಿಐ ಪದವಿರುತ್ತದೆ. ೨೦ರೂ.ಗಿಂತ ಹೆಚ್ಚಿನ ಮೌಲ್ಯದ
ನೋಟುಗಳಲ್ಲಿ ಇದರ ಜತೆ ಸಂಬಂತ ಮೌಲ್ಯದ ಅಂಕೆಗಳೂ ಇರುತ್ತವೆ. ಮಸೂರಗಳನ್ನು ಬಳಸಿ
ಇವುಗಳನ್ನು ಪರಿಶೀಲಿಸಬಹುದು.
* ೨೦ರೂ ಗಿಂತ ಅಕ ಮೌಲ್ಯದ ನೋಟುಗಳಲ್ಲಿ ಎಡಭಾಗದಲ್ಲಿರುವ ಗಾಂ ಭಾವಚಿತ್ರ, ರಿಸರ್ವ್
ಬ್ಯಾಂಕ್ ಮುದ್ರೆ, ಗ್ಯಾರಂಟಿ ಪ್ರಮಾಣ, ಅಶೋಕ ಸ್ಥಂಭ, ಲಾಂಛನ ಹಾಗೂ ಆರ್‌ಬಿಐ
ಗವರ್ನರ್ ಅವರ ಸಹಿಗಳು ಬರಿಗೈಯಿಂದ ಮುಟ್ಟಿ ಅನುಭವ ಪಡೆಯುವಷ್ಟರ ಮಟ್ಟಿಗೆ
(ಇಂಟಾಗ್ಲಿಯೊ) ಸ್ಪಷ್ಟವಾಗಿ ಮುದ್ರಿತವಾಗಿರುತ್ತವೆ.
* ಈ ಕೆತ್ತನೆ ವಿನ್ಯಾಸ ಬೇರೆ ಬೇರೆ ಮೌಲ್ಯದ ನೋಟುಗಳಿಗೆ ಬೇರೆ ಬೇರೆ
ಮಾದರಿಯಲ್ಲಿರುತ್ತದೆ. ೨೦ರೂ. ನೋಟಿನ ಮೇಲೆ ಲಂಬ ಚತುಷ್ಕೋಣ, ೫೦ರೂ ನೋಟಿಗೆ ಚಚ್ಚೌಕ,
೧೦೦ರೂ. ನೋಟಿಗೆ ತ್ರಿಕೋಣಾಕೃತಿ, ೫೦೦ರೂ.ಗೆ ವೃತ್ತಾಕಾರ, ೧೦೦೦ರೂ. ನೋಟಿನಲ್ಲಿ
ಡೈಮಂಡ್ ಆಕೃತಿಯಲ್ಲಿರುತ್ತದೆ. ಅಂಧರೂ ಸಹ ಕೈಯಿಂದ ಮುಟ್ಟಿ ನೋಟಿನ ಮೌಲ್ಯ ಗುರುತಿಸಲು
ಇದು ಸಹಕಾರಿ.
* ಅಂಕೆಗಳ ಸರಣಿಯನ್ನು ವಿಶೇಷವಾದ ಶಾಹಿಯಲ್ಲಿ ಮುದ್ರಿಸಲಾಗಿರುತ್ತದೆ. ಇದರ ಮೇಲೆ
ಕ್ಷ-ಕಿರಣ ಅಥವಾ ಅತಿ ನೇರಳೆ ಕಿರಣಗಳು ಬಿದ್ದರೆ ಬಣ್ಣದ ಹೊಳಪಿನ ಕಾಂತಿ ಗಮನಿಸಬಹುದು.
ಅಲ್ಲದೆ, ನೋಟುಗಳಲ್ಲಿ ಆಪ್ಟಿಕಲ್ ನಾರು ಅಥವಾ ಎಳೆ ಇರುತ್ತದೆ. ಅತಿ ನೇರಳೆ
ಕಿರಣಗಳಿಗೆ ಒಡ್ಡಿದಾಗ ಇವೆರಡನ್ನೂ ಕಾಣಬಹುದು. ಜತೆಗೆ ೧೦೦೦ ಹಾಗೂ ೫೦೦ರ ನೋಟುಗಳ
ಮೇಲ್ಮುಖ ಭಾಗದಲ್ಲಿ ಬೆಳಕಿಗೆ ಒಡ್ಡಿದಾಗ ಬದಲಾವಣೆ ಕಾಣುವ ಶಾಹಿ ಬಳಸಲಾಗಿದೆ.
* ೧೦೦೦ ರೂ. ನೋಟನ್ನು ಅಂಗಾತ ಹಿಡಿದಾಗ ಹಸಿರು ಬಣ್ಣದ ಹಾಗೂ ಕೋನಾಕೃತಿಯಲ್ಲಿ
ಹಿಡಿದಾಗ ನೀಲಿ ಬಣ್ಣದ ಛಾಯೆ ಗೋಚರವಾಗುತ್ತದೆ. ನೋಟಿನ ಎರಡೂ ಕಡೆ ವಾಟರ್‌ಮಾರ್ಕ್
ಹಾಗೂ ಲಂಬಪಟ್ಟಿಯ ಮಧ್ಯದಲ್ಲಿ ಸಣ್ಣದಾಗಿ ಪ್ಲೊರಾಲ್ (ಹೂವಿನ ಮಾದರಿಯ) ವಿನ್ಯಾಸ
ಇರುತ್ತದೆ. ಬೆಳಕಿಗೆ ಎದುರಾಗಿ ಹಿಡಿದಾಗ ಎರಡೂ ಕಡೆಯ ವಿನ್ಯಾಸ ಪರಸ್ಪರ ಮಿಳಿತವಾಗಿ
ಒಂದೇ ವಿನ್ಯಾಸದ ತರಹ ಕಂಡು ಬರುತ್ತದೆ.

ಇದು ನಕಲಿ ನೋಟು
* ಅಸಲಿ ನೋಟುಗಳಿಗೆ ಹೋಲಿಸಿದರೆ ನಕಲಿ ನೋಟುಗಳಲ್ಲಿನ ಉಪಸರ್ಗ ಸರಣಿ, ಅಂಕೆಗಳು
ಗಾತ್ರದಲ್ಲಿ ಸಣ್ಣದಿರುತ್ತವೆ.
* ಸರಣಿ ಹಾಗೂ ಅಂಕೆಗಳು ಒಂದೇ ಗೆರೆಯ ಮೇಲೆ ಇರುವುದಿಲ್ಲ.
* ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, ಗ್ಯಾರಂಟಿ ಹಾಗೂ ಭರವಸೆಯ ವಾಕ್ಯಾಂಗಗಳಿಗೆ
ದಪ್ಪಕ್ಷರ ಬಳಸಿರುತ್ತಾರೆ.
* ಭದ್ರತಾ ಎಳೆ ಅಥವಾ ಕಡ್ಡಿ ಸರಿಯಾಗಿ ಲಂಬಾಕಾರದಲ್ಲಿರುವುದಿಲ್ಲ.
* ಸಿಲ್ವರ್ ಬ್ರೊಮೈಡ್ ಬದಲಾಗಿ ಬೆಳ್ಳಿಯ ಬಣ್ಣದಿಂದ ಕೂಡಿದ ಸಣ್ಣ ಪಟ್ಟಿ ಇರುತ್ತದೆ.
* ವಾಟರ್ ಮಾರ್ಕ್ ಎಡಗಡೆಯ ಗಾಂ ಭಾವಚಿತ್ರ, ರಿಸರ್ವ್ ಬ್ಯಾಂಕ್ ಮುದ್ರೆ, ಗ್ಯಾರಂಟಿ
ಪ್ರಮಾಣ, ಅಶೋಕ ಸ್ಥಂಭ
ಲಾಂಛನಗಳು ಸಮರ್ಪಕವಾಗಿರುವುದಿಲ್ಲ.
* ಗಾಂಯ ಭಾವಚಿತ್ರ ದಪ್ಪ ಗಾತ್ರದ್ದಿರುತ್ತದೆ.
* ಇಂಟಾಗ್ಲಿಯೊ ಮುದ್ರಣ ಇರುವುದಿಲ್ಲ. ಅತಿ ನೇರಳೆ ಕಿರಣಗಳಿಗೆ ಹಿಡಿದಾಗ ಆಪ್ಟಿಕಲ್
ಎಳೆಗಳು ಗೋಚರಿಸಿದರೂ, ಅವುಗಳ ಸಂಖ್ಯೆ ಕಡಿಮೆ ಇರುವುದು ಗಮನಕ್ಕೆ ಬರುತ್ತದೆ.
* ಅತಿ ನೇರಳೆ ಕಿರಣಗಳಿಗೆ ಭದ್ರತಾ ಎಳೆ ಹೊಳೆಯುವುದಿಲ್ಲ.
* ನೋಟಿಗೆ ಬಳಸಲಾದ ಪೇಪರ್, ಮರದ ತಿರುಳಿ(ಪಲ್ಪ್)ನಿಂದ ಮಾಡಿದ್ದಾಗಿರುತ್ತದೆ.

- ಮಹಾಬಲೇಶ್ವರ

1 comments:

Padyana Ramachandra said...

ಉಪಯುಕ್ತ ಮಾಹಿತಿಗಳನ್ನು ತಿಳಿಸಿದಕ್ಕೆ ವಂದನೆಗಳು.

-ಪ.ರಾಮಚಂದ್ರ,
ರಾಸ್ ಲಫ್ಫಾನ್, ಕತಾರ್

Post a Comment