ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಶೇಷ ವರದಿ

ಅದೇನಾಯಿತೋ ಗೊತ್ತಿಲ್ಲ ... ಇದ್ದಕ್ಕಿದ್ದಂತೆ ಮನಕ್ಕೆ ಮಂಕು ಬಡಿಯಿತು... ಚೆನ್ನಾಗಿ ನಡೆಯುತ್ತಿದ್ದ ವ್ಯವಹಾರ ಒಮ್ಮೆಲೇ ನೆಲಕ್ಕಚ್ಚಿತು... ಒಂದರ ಮೇಲೊಂದರಂತೆ ಕಷ್ಟಗಳ ಸರಮಾಲೆಯೇ ಬರಲಾರಂಭಿಸಿತು...ಸಮಸ್ಯೆಗಳ ಸುಳಿಯಲ್ಲಿ ಒದ್ದಾಡುವ ...ಜೀವನ ಸಾಗಿಸುವ ಸ್ಥಿತಿ... ಅದೇಗೆ ಚೆನ್ನಾಗಿ ಸಾಗುತ್ತಿದ್ದ ಸಂಸಾರಕ್ಕೆ ದಿನನಿತ್ಯದ ತಲೆನೋವು...ಕಾರಣ ಹುಡುಕ ಹೋದರೆ ಅಲ್ಲೊಂದು ಅಚ್ಚರಿ ಕಂಡು ಬಂತು ಅದೇನು ಆ ಅಚ್ಚರಿ...

ಹೌದು... ಏನೇ ದೈವೀಕಾರ್ಯವಾಗಬೇಕಾದರೂ ಅಲ್ಲಿ `ಶಂಖ'ಕ್ಕೆ ಪ್ರಾಧಾನ್ಯತೆ.... ಆದರೆ ಈ ಶಂಖವೇ ಇಷ್ಟೆಲ್ಲಾ ಅಚ್ಚರಿ ಅದ್ಭುತಗಳಿಗೆ ಕಾರಣವಾಗುತ್ತಿದೆಯಾ...
ಹಾಗಾದರೆ ಆ ಶಂಖದಲ್ಲಿರುವ ವೈಶಿಷ್ಟ್ಯಗಳಾದರೂ ಏನು... ಯಾಕಾಗಿ ಆ ಶಂಖ ಇಷ್ಟೊಂದು ಅಚ್ಚರಿಗಳನ್ನು ಸೃಷ್ಠಿಸುತ್ತಿದೆ... ಶಂಖದ ಮಹಿಮೆಗೆ ಕಾರಣವೇನು... ಇದೆಲ್ಲಾ ಸಹಸ್ರ ಸಹಸ್ರ ಮಂದಿಯ ನಡುವೆ ಇಂದು ಉದ್ಭವಿಸಿರುವ ಪ್ರಶ್ನೆ...


ಈ ಘಟನೆ ನಡೆದದ್ದಾರೂ ಎಲ್ಲಿ...ಇಷ್ಟು ದಿನ ಅಜ್ಞಾತವಾಗಿದ್ದ ಶಂಖ ಇದೀಗ ತನ್ನ ಅಸ್ತಿತ್ವವನ್ನು ಪ್ರದರ್ಶಿಸ ಹೊರಟದಕ್ಕೆ ಹಿನ್ನೆಲೆಯೇನು... ಹಾಗಾದರೆ ಈ ಶಂಖ ಇಷ್ಟೂ ಸಮಯ ಸುಮ್ಮನಿದ್ದಿತೇ... ಅಲ್ಲಾ ಶಂಖ ನಾದಮಾಡುವ ಬದಲಾಗಿ ಮಾತನಾಡುತ್ತಿತ್ತೇ... ಅದರಿಂದಾಗಿಯೇ ಈ ವಿನಾಶಗಳು ಕಷ್ಟ ನಷ್ಟಗಳು ಕಂಡುಬಂದವೇ... ಕಾರಣವನ್ನು ಹುಡುಕ ಹೊರಟರೆ ಅಲ್ಲೊಂದು ಅಚ್ಚರಿ ಕಾಯುತ್ತಿತ್ತು...!!!


ಮೂಲ್ಕಿ ಒಂಭತ್ತು ಮಾಗಣೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾಗಿರುವ ಬಪ್ಪನಾಡು ಶ್ರೀ ದುರ್ಗಾರಮೇಶ್ವರೀ ದೇವಸ್ಥಾನದ ವಾರ್ಷಿಕ ಉತ್ಸವದ ಸಂದರ್ಭ ಭಕ್ತರೊಬ್ಬರು ಪುರಾತನ ಬೃಹತ್ ಗಾತ್ರದ ಶಂಖವನ್ನು ನೀಡಿದ್ದಾರೆ. ಈ ವಿಶೇಷ ಶಂಖದ ಹೆಚ್ಚಿನ ಭಾಗ ಬೆಳ್ಳಿ ಹೊದಿಸಲಾಗಿದ್ದು ಕೆಂಪು ಮತ್ತು ಹಸಿರು ಹರಳುಗಳಂತಹ ವಸ್ತುಗಳನ್ನು ಜೋಡಿಸಿರುವ ಜೊತೆಗೆ ಹಿಂಬದಿಯನ್ನು ಕೊಂಬಿನಾಕೃತಿಯಲ್ಲಿ ಬೆಳ್ಳಿಯ ತಗಡಿನಿಂದ ಕಲಾತ್ಮಕವಾಗಿ ರಚಿಸಿರುವ ಬೃಹತ್ ಗಾತ್ರದ ಶಂಖವಾಗಿದೆ. ಇದರ ವಿಶೇಷವೆಂದರೆ ಇದು ಬಲಮುರಿ ಶಂಖ ಇದರ ಬಲಬಾಗದಲ್ಲಿ ಕೀರ್ತಿಮುಖ ದಂತಹ ಬಹಳ ಕ್ರೂರ ಮುಖರ್ಣಿಕೆಯ ಕೆತ್ತನೆಯನ್ನು ಮಾಡಲಾಗಿದೆ. ಈ ಶಂಖದ ಬಗ್ಗೆ ಕ್ಷೇತ್ರದ ಆಡಳಿತಾಧಿಕಾರಿ ಸುಧಾಕರ್ರವರಲ್ಲಿ ಪತ್ರಿಕೆ ವಿಚಾರಿಸಿದಾಗ ಈ ಶಂಖ ಬಹಳ ಕಲಾತ್ಮಕವಾಗಿದ್ದು ಜನರು ನೋಡಲಿಕ್ಕಾಗಿ ದೇವಳದ ತೀರ್ಥ ಮಂಟಪದಲ್ಲಿ ಇರಿಸಲಾಗಿದೆ.ಅದನ್ನು ನೀಡಿದ ದಾನಿಯವರು ತಿಳಿಸಿದ ಪ್ರಕಾರ ಅದು ಬಹಳ ಪವಿತ್ರ ಶಂಖ ಎಂದು ತಿಳಿದುಬಂದಿದೆ. ಮುಂದೆ ಕ್ಷೇತ್ರದ ತಂತ್ರಿಯವರಲ್ಲಿ ಸಮಾಲೋಚಿಸಿ ಪ್ರಶ್ನಾ ಮಾರ್ಗದ ಮುಖೇನ ಅದರ ಹಿಂದಿನ ಅಸ್ಥಿತ್ವದ ಬಗ್ಗೆ ತಿಳಿದುಕೊಂಡು ಮುಂದೆ ಅದನ್ನು ಯಾವ ರೀತಿಯಲ್ಲಿ ಇರಿಸಬಹುದು ಎಂಬ ಬಗ್ಗೆ ತಿಳಿಯುವುದು ಮಾತ್ರವಲ್ಲದೆ ಸೂಕ್ತ ವ್ಯಕ್ತಿಗಳಿಂದ ಮೌಲ್ಯಮಾಪನಗೊಳಿಸಿ ಅದನ್ನು ಕ್ಷೇತ್ರದ ಸುಪರ್ದಿಗೆ ತೆಗೆದುಕೊಳ್ಳಲಾಗುವುದು ಎಂದರು.


ಬಲಮುರಿ ಶಂಖಗಳ ಬಗ್ಗೆ ಕ್ಷೇತ್ರದ ಅರ್ಚಕ ವೇದಮೂರ್ತಿ ಶ್ರೀಪತಿ ಉಪಾದ್ಯಾಯರನ್ನು ಮಾತನಾಡಿಸಿದಾಗ ಸಾಮಾನ್ಯವಾಗಿ ಶಂಖಗಳು ಪ್ರಾಕೃತಿಕವಾಗಿ ಸಮುದ್ರದಲ್ಲಿ ಲಭ್ಯವಾಗುತ್ತಿದ್ದು ಅವುಗಳಲ್ಲಿ ಎಡಮುರಿ (ಎಡಕ್ಕೆ ತಿರುಗಿರುವ) ಶಂಖಗಳು ದೊಡ್ಡದಾಗಿದ್ದಲ್ಲಿ ಊದಲು(ಶಂಖನಾದಕ್ಕೆ) ಉಪಯೋಗವಾದರೆ ಸಣ್ಣವುಗಳನ್ನು ಶ್ರೀ ದೇವರುಗಳ ಮತ್ತು ಸಾಲಿಗ್ರಾಮದ ಅಭಿಶೇಕಕ್ಕೆ ಉಪಯೋಗಿಸುತ್ತಾರೆ. ಬಲಮುರಿ ಶಂಖಗಳು ಲಕ್ಷ್ಮೀ ಸಾನಿಧ್ಯವನ್ನು ಹೊಂದಿರುವುದರಿಂದ ಅವುಗಳನ್ನು ಅಖಂಡ ಸೌಭಾಗ್ಯ ಮತ್ತು ಸಂಪತ್ತು ಗಳಿಕೆಗಾಗಿ ಪೂಜಿಸುತ್ತಾರೆ. ಈಶಂಖದ ಬಗ್ಗೆ ಹಿನ್ನಲೆ ತಿಳಿದಿಲ್ಲವಾದರೂ ಬಲಮುರಿ ಶಂಖವಾಗಿರುವುದರಿಂದ ಲಕ್ಷ್ಮೀಸಾನಿಧ್ಯದ ಶಂಖ ಎಂದು ತಿಳಿಯಲಾಗಿದೆ ಎಂದರು.
ಶಂಖ ಮಾತನಾಡುವ ಊಹಾಪೋಹದ ಬಗ್ಗೆ ಕೇಳಿದಾಗ ಶಂಖ ಶಬ್ದಮಾಡುತ್ತದೆಯೇ ವಿನಹ ಮಾತನಾಡದು ಆದರೆ ಅವರವರ ಭಾವ ಭಕ್ತಿ ಮತ್ತು ಅನುಭವದಿಂದ ಮಾತನಾಡಿದಂತಾಗಿರಬಹುದು ಎಂದು ಮಾತಿಗೆ ತೆರೆ ಎಳೆದರು.

ಲಭ್ಯ ಮಾಹಿತಿಯಂತೆ ಈ ಶಂಖವನ್ನು ಪಡುಬಿದ್ರಿಯ ವ್ಯಕ್ತಿಯೊಬ್ಬರು ನೀಡಿದ್ದು ಅವರಿಗೆ ಹೇಗೆ ಬಂತು ಎಂದು ತಿಳಿದಿಲ್ಲವಾದರೂ ಅವರು ಈ ಶಂಖವನ್ನು ಮನೆಗೆ ನಂತರ ತಮ್ಮ ವ್ಯವಹಾರದಲ್ಲಿ ಸಾಕಷ್ಟು ಕಷ್ಟ ನಷ್ಟವನ್ನು ಅನುಭವಿಸಿದ್ದರಿಂದ ಅವರು ಪುರೋಹಿತರಲ್ಲಿ ಈ ಬಗ್ಗೆ ಪ್ರಶ್ನೆಯನ್ನು ಕೇಳಿದಾಗ ಅವರಿಗೆ ನಷ್ಟವಾಗಲು ಈ ಶಂಖ ಕಾರಣ ಅದರ ಪರಿಹಾರಕ್ಕಾಗಿ ಅದನ್ನು ದೇವರ ಸಾನ್ನಿಧ್ಯಕ್ಕೆ ನೀಡಿದಲ್ಲಿ ಪರಿಹಾರವಾಗಬಹುದು ಎಂದು ತಿಳಿಸಿದ್ದರಿಂದ ಬಪ್ಪನಾಡು ದೇವಸ್ಥಾನಕ್ಕೆ ಸಮರ್ಪಿಸಿದ್ದಾರೆ ಎಂದು ತಿಳಿದು ಬಂದಿದೆ.
ಅಂತೂ ಜಾತ್ರೆಯ ಸಮಯವಾಗಿರುವುದರಿಂದ ಈ ಅಪರೂಪದ ಶಂಖವನ್ನು ನೋಡುವ ಭಾಗ್ಯ ಆಸ್ತಿಕ ಭಕ್ತರದ್ದಾಗಿದೆ.
ಆದರೆ ಲಕ್ಷ್ಮೀ ಸಾನಿಧ್ಯ ಹೊಂದಿರುವ ಶಂಖ ದಿಂದ ಇಷ್ಟೆಲ್ಲಾ ಕಷ್ಟ ನಷ್ಟಗಳು ಉಂಟಾಗಲು ಕಾರಣವೇನು... ಆ ಶಂಖಕ್ಕೆ ಅಪವಿತ್ರವಾಗಿತ್ತೇ... ಸಾನಿಧ್ಯಕ್ಕೆ ಸರಿಯಾಗಿ ಸಮರ್ಪಿಸಬೇಕಾಗಿದ್ದ ಅಂಶಗಳು ಶಂಖಕ್ಕೆ ತಲುಪುತ್ತಿರಲಿಲ್ಲವೇ... ಇಪ್ಪತ್ತೊಂದನೆಯ ಶತಮಾನದಲ್ಲೂ ಇಂತಹ ಕೌತುಕಗಳು ಸಮಾಜದಲ್ಲಿ ನಡೆಯುತ್ತಿದೆ ಎಂದರೆ ಅಚ್ಚರಿಯಲ್ಲವೇ...ಏನೇ ಹೇಳಿ ಇದೀಗ ಎಲ್ಲರ ಮನಸ್ಸಿನಲ್ಲೂ ಪ್ರಶ್ನೆಗಳ ಸರಮಾಲೆಯನ್ನೇ ಸೃಷ್ಠಿಸುತ್ತಿದೆ ಈ ಶಂಖ!!!

ಪೂರಕ ಮಾಹಿತಿ - ಚಿತ್ರ: ಭಾಗ್ಯವಾನ್ ಸನಿಲ್, ಮುಲ್ಕಿ.
ನಿರೂಪಣೆ-ವಿನ್ಯಾಸ: ಹರೀಶ್ ಆದೂರು.

0 comments:

Post a Comment