ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವೈವಿಧ್ಯ
ನಾನು, ಆಗ್ನೇಯ ಏಷ್ಯಾದ ಪ್ರಮುಖ ಬ್ಯಾಂಕ್‌ನ ಮಾನವ ಸಂಪನ್ಮೂಲ ವಿಭಾಗದ ಅಕಾರಿ.
ನಮ್ಮ ಬ್ಯಾಂಕ್ ಜಾಗತಿಕ ಮಟ್ಟದ ಪ್ರಮುಖ ಬ್ಯಾಂಕ್‌ಗಳಲ್ಲಿ ಒಂದು. ನಿಮ್ಮನ್ನು
ಸಂದರ್ಶಿಸಲು ನಮಗೆ ಸಂತಸವಾಗುತ್ತಿದೆ. ನಿಮಗೆ ವಾರ್ಷಿಕ ೧.೬೦ ಕೋಟಿ ರೂ. ಸಂಬಳ
ನೀಡುತ್ತೇವೆ. ನಮ್ಮ ಕಂಪನಿಗೆ ಸೇರಲು ಬಯಸುತ್ತೀರಾ?"
ಕೆಲಸಕ್ಕಾಗಿ ಪದವಿ ಪತ್ರ ಹಿಡಿದು, ಬೀದಿ ಬೀದಿ ಅಲೆದು, ಕೆಲಸ ಸಿಕ್ಕಿದ್ದೇ ಪುಣ್ಯ
ಎಂದು ಕೊಟ್ಟ ಸಂಬಳಕ್ಕೆ ತೃಪ್ತಿ ಪಟ್ಟುಕೊಳ್ಳುವ ಇಂದಿನ ದಿನಗಳಲ್ಲಿ ಕೊನೆಯ ವರ್ಷದ
ಪದವಿ ತರಗತಿಯಲ್ಲಿ ಓದುತ್ತಿರುವಾಗಲೇ ಜಾಗತಿಕ ಮಟ್ಟದ ಪ್ರತಿಷ್ಠಿತ ಬ್ಯಾಂಕೊಂದು
ವಿದ್ಯಾರ್ಥಿಗೆ ಇಷ್ಟೊಂದು ದೊಡ್ಡ ಮೊತ್ತದ ಸಂಬಳದ ಆಹ್ವಾನ ನೀಡುತ್ತದೆ ಎಂದಾದರೆ
ನಿಮಗೆ ಆಶ್ಚರ್ಯವಾಗಬಹುದಲ್ಲವೇ?.ಆಶ್ಚರ್ಯ ಎನಿಸಿದರೂ ಇದು ಸತ್ಯ ಸಂಗತಿ.
ಈ ವರ್ಷ ಐಐಎಂ-ಸಿ, ಅಂದರೆ ಕೋಲ್ಕತಾದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್
ಮ್ಯಾನೇಜ್‌ಮೆಂಟ್‌ನ ವಿದ್ಯಾರ್ಥಿಗೆ ಆಗ್ನೇಯ ಏಷ್ಯಾದ ಜಾಗತಿಕ ಬ್ಯಾಂಕ್ ನೀಡಿದ
ಆರಂಭಿಕ ವೇತನ ವಾರ್ಷಿಕ ೧.೬೦ ಕೋಟಿ ರೂ. ಇದೇ ಶಿಕ್ಷಣ ಸಂಸ್ಥೆಯ ಇನ್ನಿಬ್ಬರಿಗೆ
ಬಹುರಾಷ್ಟ್ರೀಯ ಕಂಪನಿಗಳಿಂದ ೧ ಕೋಟಿ ರೂ.ಗೆ ಅಕ ವಾರ್ಷಿಕ ವೇತನದ ಆಹ್ವಾನ
ನೀಡಲಾಯಿತು.ಹಾಗೆ ನೋಡಿದರೆ ಐಐಎಂಗಳಲ್ಲಿ ಓದಿದವರಿಗೆ ಅತಿ ಹೆಚ್ಚು ಸಂಬಳ ಸಿಗುವುದರಲ್ಲಿ
ವಿಶೇಷವೇನಿಲ್ಲ. ಅದು ಮಾಮೂಲಿಯೇ. ಈ ಸಲದ ಕ್ಯಾಂಪಸ್ ಸಂದರ್ಶನದಲ್ಲಿ
ಐಐಎಂ-ಅಹಮದಾಬಾದ್‌ನ ವಿದ್ಯಾರ್ಥಿಗೆ ವಾರ್ಷಿಕ ೧.೪೪ ಕೋಟಿ. ರೂ., ಐಐಎಂ-ಬೆಂಗಳೂರಿನ
ವಿದ್ಯಾರ್ಥಿಗೆ ವಾರ್ಷಿಕ ೧.೧೪ ಕೋಟಿ ರೂ.ಗಳ ಆರಂಭಿಕ ವೇತನದ ಆಹ್ವಾನ ಬಂತು.
ಐಐಎಂ-ಕೋಲ್ಕತಾದ ೯೧ ಮಂದಿ, ಐಐಎಂ-ಬೆಂಗಳೂರಿನ ೬೪ ಮಂದಿ, ಐಐಎಂ-ಅಹಮದಾಬಾದ್‌ನ ೫೦
ವಿದ್ಯಾರ್ಥಿಗಳು ಸಂದರ್ಶನದ ದಿನ, ಸ್ಥಳದಲ್ಲೇ ನೌಕರಿ ಪಡೆದರು. ಇವರೆಲ್ಲರಿಗೂ
ಕೈತುಂಬಾ ಸಂಬಳ.
ಇತರೆಡೆ ಕೆಲಸ ಬೇಕೆಂದು ಅಭ್ಯರ್ಥಿಗಳು ಕಂಪನಿಗಳ ಮುಂದೆ ಸಾಲುಗಟ್ಟಿ ನಿಂತರೆ, ಇಲ್ಲಿ
ಉದ್ಯೋಗ ನೀಡಲು ಪ್ರತಿಷ್ಠಿತ ಕಂಪನಿಗಳೇ ವಿದ್ಯಾರ್ಥಿಗಳ ಮುಂದೆ ಸಾಲುಗಟ್ಟಿ
ನಿಲ್ಲುತ್ತವೆ. ಇಲ್ಲಿ ಶಿಕ್ಷಣ ಸಂಸ್ಥೆಯೇ ಕಂಪನಿಗಳಿಗೆ ಆಯ್ಕೆಗೆ ಸಂಬಂಸಿದ ರ್‍ಯಾಂಕ್
ಪ್ರಕಟಿಸುತ್ತದೆ. ಇಲ್ಲಿ ಹೆಚ್ಚು ವಿದ್ಯಾರ್ಥಿಗಳಿಗೆ ಕೆಲಸ ನೀಡುವುದು, ಹೆಚ್ಚು ಸಂಬಳ
ನೀಡುವುದು ಈ ಕಂಪನಿಗಳಿಗೆ ಪ್ರತಿಷ್ಠೆಯ ವಿಷಯ.
ಐಐಎಂಗಳಲ್ಲಿ ಸ್ನಾತಕೋತ್ತರ ಪದವಿ ಪಡೆಯುವುದು ದೇಶದ ಬಹುತೇಕ ಬುದ್ಧಿವಂತ
ವಿದ್ಯಾರ್ಥಿಗಳ ಕನಸು. ದೇಶದಲ್ಲಿ ಬಿಸಿನೆಸ್ ವಿಷಯಗಳಿಗೆ ಸಂಬಂಸಿದಂತೆ ಪದವಿ
ನೀಡುವಲ್ಲಿನ ಮುಂಚೂಣಿ ಶಿಕ್ಷಣ ಸಂಸ್ಥೆಗಳಿವು. ಇಲ್ಲಿನ ಬೋಧನಾ ವಿಧಾನ, ಪ್ರಾಯೋಗಿಕ
ಅವಕಾಶ, ಮೂಲಭೂತ ಸೌಲಭ್ಯ, ಬೋಧನಾ ವರ್ಗ...ಇವೆಲ್ಲಕ್ಕಿಂತ ಹೆಚ್ಚಾಗಿ ಅಪರಿಮಿತ
ಉದ್ಯೋಗದ ಅವಕಾಶ, ಜತೆಗೆ ಆಕರ್ಷಕ ವೇತನಗಳು ಈ ಸಂಸ್ಥೆಗಳನ್ನು ಜಾಗತಿಕ ಮಟ್ಟದ
ಶ್ರೇಷ್ಠ ಶಿಕ್ಷಣ ಸಂಸ್ಥೆಗಳನ್ನಾಗಿಸಿವೆ.
ದೇಶದ ಹಲವು ಪ್ರತಿಷ್ಠಿತ ನಿಯತಕಾಲಿಕಗಳು, ಖ್ಯಾತ ಪತ್ರಿಕೆಗಳು, ನಿಯತಕಾಲಿಕಗಳು
ಪ್ರತಿವರ್ಷವೂ ಬಿಸಿನೆಸ್ ವ್ಯವಹಾರ ವಿಷಯದಲ್ಲಿ ಶಿಕ್ಷಣ ನೀಡುವ ಸಂಸ್ಥೆಗಳ ಕುರಿತು
ಸಮೀಕ್ಷೆ ಪ್ರಕಟಿಸುತ್ತವೆ. ಸಮೀಕ್ಷೆಯ ಆಧಾರದ ಮೇಲೆ ರ್‍ಯಾಂಕಿಂಗ್ ಪಟ್ಟಿ
ಪ್ರಕಟಿಸುತ್ತವೆ. ಮೂಲಭೂತ ಸೌಕರ್ಯ, ಬೋಧನಾ ವಿಧಾನ, ಉದ್ಯೋಗಾವಕಾಶ ಸೇರಿದಂತೆ ಪ್ರಮುಖ
ಅಂಶಗಳನ್ನು ಪ್ರಮಾಣವನ್ನಾಗಿ ಇಟ್ಟುಕೊಳ್ಳುತ್ತವೆ.
೨೦೦೯-೧೦ರ ಶೈಕ್ಷಣಿಕ ವರ್ಷದಲ್ಲಿ ಕ್ಯಾಂಪಸ್ ಸಂದರ್ಶನದಲ್ಲಿ ಅತಿ ಹೆಚ್ಚು ಸಂಬಳಕ್ಕೆ
ಆಹ್ವಾನ ಪಡೆದ ದೇಶದ ಅತ್ಯುನ್ನತ ಬಿಸಿನೆಸ್ ಮ್ಯಾನೇಜ್‌ಮೆಂಟ್ ಕಾಲೇಜುಗಳು.
(ವಿದ್ಯಾರ್ಥಿಗಳಿಗೆ ನೀಡಲಾದ ವಾರ್ಷಿಕ ಸರಾಸರಿ ಸಂಬಳ, ಕೋಟಿ ರೂ.ಗಳಲ್ಲಿ).
ಸ್ಥಾನ ಕಾಲೇಜು ಸ್ಥಳ ಸರಾಸರಿ ಸಂಬಳ
೧. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್-ಅಹಮದಾಬಾದ್ ೧೧.೨೦
೨. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್-ಬೆಂಗಳೂರು ೧೦.೭೮
೩. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್-ಹೈದರಾಬಾದ್ ೧೦.೫೬
೪. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್-ಕೋಲ್ಕತಾ ೯.೮೫
೫. ಕ್ಸೆವಿಯರ್ ಲೇಬರ್ ರಿಲೆಷನ್ಸ್ ಇನ್‌ಸ್ಟಿಟ್ಯೂಟ್-ಜಮ್‌ಶೆಡ್‌ಪುರ ೯.೪೪
೬. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್-ಲಖನೌ ೯.೧೫
೭. ಮ್ಯಾನೇಜ್‌ಮೆಂಟ್ ಡೆವಲಪ್‌ಮೆಂಟ್ ಇನ್‌ಸ್ಟಿಟ್ಯೂಟ್-ಗಾರ್ಗಿಯಾನ್ ೮.೮೦
೮. ಜಮನ್‌ಲಾಲ್ ಬಜಾಜ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್-ಮುಂಬಯಿ ೮.೩೫
೯. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್-ಕೋಝಿಕೋಡ್ ೮.೨೫
೧೦. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್-ಇಂದೋರ್ ೮.೧೫
೧೧. ಕ್ಸೆವಿಯರ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್-ಭುವನೇಶ್ವರ ೮.೧೦
೧೨. ಎಸ್.ಪಿ. ಜೈನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಆಂಡ್ ರಿಸರ್ಚ್-ಮುಂಬಯಿ ೭.೯೫
೧೩. ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಇಂಡಸ್ಟ್ರೀಯಲ್ ಇಂಜಿನಿಯರಿಂಗ್ -ಮುಂಬಯಿ ೭.೬೮
೧೪. ಪ್ಯಾಕಲ್ಟಿ ಆಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್ -ಹೊಸದಿಲ್ಲಿ ೭.೬೦
೧೫. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಫಾರೆನ್ ಟ್ರೇಡ್ -ಹೊಸದಿಲ್ಲಿ ೬.೯೦
೧೬. ಶೈಲೇಷ್ ಜೆ. ಮೆಹ್ತಾ ಸ್ಕೂಲ್ ಆಫ್ ಮ್ಯಾನೇಜ್‌ಮೆಂಟ್, ಐಐಟಿ ಮುಂಬಯಿ ೬.೮೩
೧೭. ಡಿಪಾರ್ಟ್‌ಮೆಂಟ್ ಆಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್, ಐಐಟಿ ಹೊಸದಿಲ್ಲಿ ೬.೮೦
೧೮. ಡಿಪಾರ್ಟ್‌ಮೆಂಟ್ ಆಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್, ಐಐಟಿ ಮಡ್ರಾಸ್-ಚೆನ್ನೈ ೬.೭೭
೧೯. ಸಿಂಬಿಯಾಸಿಸ್ ಸೆಂಟರ್ ಫಾರ್ ಮ್ಯಾನೇಜ್‌ಮೆಂಟ್ ಆಂಡ್ ಹ್ಯೂಮನ್ ರಿಸೋರ್ಸ್
ಡೆವಲಪ್‌ಮೆಂಟ್ - ಪುಣೆ ೬.೪೫
೨೦. ನರ್ಸಿ ಮೊಂಜಿ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್-ಮುಂಬಯಿ ೫.೯೨
೨೧. ಡಿಪಾರ್ಟ್‌ಮೆಂಟ್ ಆಫ್ ಇಂಡಸ್ಟ್ರೀಯಲ್ ಆಂಡ್ ಮ್ಯಾನೇಜ್‌ಮೆಂಟ್ ಇಂಜಿನಿಯರಿಂಗ್,
ಐಐಟಿ ಕಾನ್ಪುರ ೫.೮೦
೨೨. ಮುದ್ರಾ ಇನ್‌ಸ್ಟಿಟ್ಯೂಟ್ ಆಫ್ ಕಮ್ಯೂನಿಕೇಷನ್ಸ್, ಅಹಮದಾಬಾದ್ ೫.೭೧
೨೩. ಇಂಟರ್‌ನ್ಯಾಷನಲ್ ಮ್ಯಾನೇಜ್‌ಮೆಂಟ್ ಇನ್‌ಸ್ಟಿಟ್ಯೂಟ್, ಹೊಸದಿಲ್ಲಿ ೫.೬೧
೨೪. ಡಿಪಾರ್ಟ್‌ಮೆಂಟ್ ಆಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್, ಐಐಟಿ ರೂರ್‍ಕಿ ೫.೪೦
೨೫. ಕೆ.ಜೆ. ಸೋಮಯ್ಯ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ -ಮುಂಬಯಿ ೫.೩೫
೨೬. ಇನ್‌ಸ್ಟಿಟ್ಯೂಟ್ ಫಾರ್ ಫೈನಾನ್ಸಿಯಲ್ ಮ್ಯಾನೇಜ್‌ಮೆಂಟ್ ಆಂಡ್ ರೀಸರ್ಚ್, ಚೆನ್ನೈ ೫.೨೦
೨೭. ಐಸಿಎಫ್‌ಎಐ ಬ್ಯುಸಿನೆಸ್ ಸ್ಕೂಲ್, ಹೈದರಾಬಾದ್ ೫.೧೮
೨೮. ನ್ಯಾಷನಲ್ ಇನ್‌ಸ್ಟಿಟ್ಯೂಟ್ ಫಾರ್ ಟೆಕ್ನಾಲಜಿ, ತಿರುಚನಾಪಳ್ಳಿ ೫.೧೫
೨೯. ಲೊಯೊಲಾ ಇನ್‌ಸ್ಟಿಟ್ಯೂಟ್ ಆಫ್ ಬಿಸಿನೆಸ್ ಅಡ್ಮಿನಿಸ್ಟ್ರೇಷನ್, ಚೆನ್ನೈ ೪.೮೮
೩೦. ನಿರ್ಮಾ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್, ಅಹಮದಾಬಾದ್ ೪.೮೬
೩೧. ಟಿ.ಎ. ಪೈ ಮ್ಯಾನೇಜ್‌ಮೆಂಟ್ ಇನ್‌ಸ್ಟಿಟ್ಯೂಟ್, ಮಣಿಪಾಲ ೪.೮೦
೩೨. ಇನ್‌ಸ್ಟಿಟ್ಯೂಟ್ ಆಫ್ ರೂರಲ್ ಮ್ಯಾನೇಜ್‌ಮೆಂಟ್, ಆನಂದ ೪.೭೮
೩೩. ಭಾರತಿದಸನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್, ತಿರುಚನಾಪಳ್ಳಿ ೪.೫೪
೩೪. ವೆಲಿಂಗ್‌ಕಾರ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್, ಮುಂಬಯಿ ೪.೫೦
೩೫. ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಆಂಡ್ ಟೆಕ್ನಾಲಜಿ, ಘಾಜಿಯಾಬಾದ್ ೪.೪೪
೩೬. ಲಾಲ್ ಬಹಾದ್ದೂರ್ ಶಾಸ್ತ್ರಿ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್, ಹೊಸದಿಲ್ಲಿ ೪.೩೨
೩೭. ಗ್ರೇಟ್ ಲೇಕ್ಸ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್, ಚೆನ್ನೈ ೪.೨೨
೩೮. ಅಲಿಯನ್ಸ್ ಬ್ಯುಸಿನೆಸ್ ಅಕಾಡೆಮಿ, ಬೆಂಗಳೂರು ೪.೨೦
೩೯. ಇಂಟರ್‌ನ್ಯಾಷನಲ್ ಸ್ಕೂಲ್ ಆಫ್ ಮ್ಯಾನೇಜ್‌ಮೆಂಟ್ ಎಕ್ಸಲೆನ್ಸ್, ಬೆಂಗಳೂರು ೪.೧೮
೪೦. ಇಂಟರ್‌ನ್ಯಾಷನಲ್ ಸ್ಕೂಲ್ ಆಫ್ ಬ್ಯುಸಿನೆಸ್ ಮೀಡಿಯಾ ೪.೧೫

- ಮಹಾಬಲೇಶ್ವರ ಹೊನ್ನೆಮಡಿಕೆ

0 comments:

Post a Comment