ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಸಾಹಿತ್ಯ
ವಿಶಿಷ್ಟ ಕಾರ್ಯಕ್ರಮ ಸಂಯೋಜನೆ ಹಾಗೂ ವಿವಿಧ ಸಮಾಜೋತ್ಥಾನದ ಯೋಜನೆಗಳನ್ನು ಅನುಷ್ಠಾನಕ್ಕೆ ತರುತ್ತಿರುವ ಶ್ರೀ ಅಖಿಲ ಹವ್ಯಕ ಮಹಾಸಭೆಯ ಸಂಸ್ಥಾಪನಾ ದಿನೋತ್ಸವದಂಗವಾಗಿ ಉತ್ತರಕನ್ನಡದ ಸಿದ್ದಾಪುರದ ವಡ್ಡಿನಗದ್ದೆಯ ರಂಗಸೌಗಂಧ ಕಲಾತಂಡದಿಂದ 'ಇದು ಕಾರಣ' ನಾಟಕ ಪ್ರದರ್ಶನವು ಕಳೆಕಟ್ಟಿತು. ಇದರ ಕಥಾಹಂದರ ಹೀಗಿದೆ...ಹಳ್ಳಿಯ ಶ್ರೀಮಂತ ವ್ಯಕ್ತಿಗೆ ಮಕ್ಕಳಿಲ್ಲದೆ ಆತನು ಕೊನೆಯುಸಿರೆಳೆದಾಗ ದಾಯಾದಿಗಳಲ್ಲಿ ಆತನ ಆಸ್ತಿಯ ಕುರಿತು ಆಸೆಮೂಡಿ ತಾವೇ ದಹನಕ್ರಿಯೆಗೆ ಮುಂದಾಗುವ ಹಂಬಲವು ಉಂಟಾಗುದತ್ತದೆ. ಓರ್ವ ದಾಯಾದಿಯು ಮೃತನ ತಮ್ಮನಾಗಿದ್ದು ಮತ್ತೋರ್ವ ಮೃತನ ಅಣ್ಣನ ಮಗನಾಗಿರುತ್ತಾನೆ. ಶ್ರೀಮಂತ ವ್ಯಕ್ತಿಯು ಮೃತನಾಗಿ ಹಲವು ತಾಸುಗಳ ಅನಂತರ ಅತನ ಮನೆಗೆ ಆಗಮಿಸುವ ಈ ದಾಯಾದಿಗಳು ತಮ್ಮ ತಮ್ಮ ಹಕ್ಕುಗಳನ್ನು ಪ್ರತಿನಿಧಿಸತೊಡಗುತ್ತಾರೆ. ಈ ಮಧ್ಯೆ ಊರಿನ ನಾಗರಿಕರು ಶ್ರೀಮಂತ ವ್ಯಕ್ತಿಯ ದಹನಕ್ರಿಯೆಯ ವ್ಯವಸ್ಥೆಯಲ್ಲಿ ತೊಡಗಿಸಿಕೊಳ್ಳುತ್ತಾರೆ. ದಾಯಾದಿಗಳ ಕಲಹವು ಮುಗಿಲು ಮುಟ್ಟಿ ದಹನ ಕ್ರಿಯೆಗೆ ಯಾರು ಮುಂದಾಗಬೇಕೆಂಬ ತೀರ್ಮಾನವು ದೊರೆಯದೇ ಪರಸ್ಪರರು ಕೈ ಕೈ ಮಿಲಾಯಿಸುವ ಹಂತಕ್ಕೆ ಸಂದರ್ಭವು ಕೂಡಿಬರುತ್ತದೆ. ಊರಿನ ವಿಶಿಷ್ಟ ವ್ಯಕ್ತಿ ಕೆಂಚನು ಈ ಎಲ್ಲ ಘಟನೆಗಳನ್ನು ತನ್ನದೇ ಆದ ರೀತಿಯಲ್ಲಿ ವಿಶ್ಲೇಷಣೆಯನ್ನು ಮಾಡುತ್ತಲೇ ಸ್ವಗತವನ್ನು ತನ್ನ ಭಾಷೆಯಲ್ಲಿ ಆಡುತ್ತಾ ಗಂಭೀರತೆಗೆ ಸತ್ಯದ ಲೇಪವನ್ನು ಕೊಡಲು ತೊಡಗುತ್ತಾನೆ. ಆತನ ವರ್ತನೆಯು ಅರೆ ಹುಚ್ಚನಂತಿದ್ದರೂ ಸತ್ಯದ ಮತ್ತೊಂದು ಮುಖದ ದರ್ಶನವಾಗಿ ತೋರುತ್ತದೆ. ಇಂತಹ ಗಂಭೀರ ಪರಿಸ್ಥಿತಿಯಲ್ಲಿ ಶ್ರೀಮಂತನ ವಕೀಲರು ಬಂದು ಅತನು ಉಯಿಲಿನಲ್ಲಿ ಆಸ್ತಿಯನ್ನು ಅನಾಥಾಶ್ರಮಕ್ಕೆ ಬರೆದ ವಿಚಾರವನ್ನು ತಿಳಿಸುತ್ತಾರೆ. ಮುಂದೇನಾಗುತ್ತದೆ ಎಂದು ರಂಗಮಂಚದಲ್ಲಿ ಅವಲೋಕಿಸಿ. ದಿ.ಚಿ. ಶ್ರೀನಿವಾಸರಾಜು ಬೆಂಗಳೂರು ಇವರ ಮೂಲನಾಟಕವನ್ನು ಖ್ಯಾತ ನಿರ್ದೇಶಕ ನಾಟಕಕಾರ ದಿ. ಹುಲಿಮನೆ ಸೀತಾರಾಮ ಶಾಸ್ತ್ರಿಯವರ ಮೊಮ್ಮಗನಾದ ನಿರ್ದೇಶಕ ಗಣಪತಿ ಹೆಗಡೆ ಹುಲಿಮನೆ ಇವರು ಹವ್ಯಕ ಭಾಷೆಯಲ್ಲಿ ರೂಪಾಂತರಗೊಳಿ ನಿರ್ದೇಶಿಸಿದ್ದಾರೆ. ಒಂದೂವರೆ ಶತಮಾನಗಳ ಹಿಂದೆ ಹವಿಗನ್ನಡ ಭಾಷೆಯಲ್ಲಿ ರಚಿತವಾದ ಇಗ್ಗಪ್ಪ ಹೆಗಡೆ ವಿವಾಹ ಪ್ರಹಸನವು ಕನ್ನಡದ ಪ್ರಥಮ ನಾಟಕ ಎಂಬ ಖ್ಯಾತಿಯನ್ನು ಪಡೆದಿದೆ. ಈ ತನಕ ಅದು ಹಲವಾರು ಯಶಸ್ವೀ ಪ್ರದರ್ಶನವನ್ನು ಕಂಡಿದೆ. ಈ ಇದು ಕಾರಣ ನಾಟಕವೂ ಹವಿಗನ್ನಡ ಭಾಷೆಯಲ್ಲಿಯೇ ಇದ್ದು ಈ ಶತಮಾನದ ಅಂತಹ ಮೊದಲನೆಯ ಪ್ರಯತ್ನವೇ ಇದು ಕಾರಣ. ತುಂಬಿಸ ಸಭಾಂಗಣದಲ್ಲಿ ಮಲೆನಾಡ ಪರಿಸರದ ನಾಟಕರಂಗಸ್ಥಳವನ್ನು ರಚಿಸಿಕೊಂಡು, ಅಲ್ಲಿಂದಲೇ ಸಾಂದರ್ಭಿಕ ಪರಿಕರಗಳನ್ನೂ ತಂದು ನೈಜತೆಗೆ ದೃಷ್ಟಾಂವಾದರು. ಎಲ್ಲ ಪಾತ್ರಗಳೂ ಹವಿಗನ್ನಡವನ್ನೇ ಬಳಸುತ್ತಿದ್ದರೂ ಕೆಂಚನೆಂಬ ಮನೆಯಾಳು ಉತ್ತರಕರ್ನಾಟಕದ ಭಾಷೆಯಾಡುತ್ತಿದ್ದ. ಮಧ್ಯ ಮಧ್ಯೆ ಆತನಿಡುತ್ತಿದ್ದ ವಗ್ಗರಣೆ ವಾಸ್ತವಕ್ಕೆ ಹಿಡಿದ ಕನ್ನಡಿಯಂತಿತ್ತು. ಊರೆಲ್ಲ ನೆಂಟರು ಹಣದ ಗಂಟೆದ್ದರೆ ಎಂಬ ಗಾದೆಯನ್ನು ಬೋಧಿಸುವ ಗಂಭೀರ ನಾಟಕವಾದರೂ ಅದನ್ನು ಹಾಸ್ಯಲೇಪನದೊಂದಿಗೆ ಹೆಣೆದಿದ್ದು ನಿರ್ದೇಶಕರ ಜಾಣ್ಮೆ. ಸದಭಿರುಚಿಯ ಪ್ರೇಕ್ಷಕರನ್ನು ಕೊನೆತನಕ ಹಿಡಿದಿಡುವಲ್ಲಿ ನಾಟಕೀಯ ತಂತ್ರ ಸಫಲವಾಯಿತು. ಈ ವಿಡಂಬನಾತ್ಮಕ ಪ್ರಹಸನದಲ್ಲಿ .... ರಾಜ್ಯನಾಟಕ ಅಕಾಡೆಮಿ ಪ್ರಶಸ್ತಿಭಾಜನರಾದ ಶ್ರೀಧರ ಹೆಗಡೆ ಹುಲಿಮನೆ, ಪ್ರಭಾಕರ ಹೆಗಡೆ ಕನ್ನಳ್ಳಿ,ಕೃಷ್ಣಮೂರ್ತಿ ಹೆಗಡೆ ಮಗದೂರು, ರಾಜಾರಾಮ ಭಟ್ಟ ಹೆಗ್ಗಾರಳ್ಳಿ, ಗಣಪತಿ ಹೆಗಡೆ ಗುಂಜಗೋಡು, ಎಮ್.ಕೆ.ಹೆಗಡೆ ಹಳದೋಟ, ಮಾಲಿನಿ ಹೆಗಡೆ ವಾಜಗೋಡು, ಜಯಶ್ರೀ ಹೆಗಡೆ ವಡ್ಡಿನಗದ್ದೆ, ಬಾಲನಟರಾದ ಆಶ್ರಿತಾ, ಪಲ್ಲವಿ, ಅಜಿತ್, ಮನೋಜ, ಭಾರ್ಗವ, ಮುಂತಾದವರು ಮನೋಜ್ಞವಾಗಿ ಪಾತ್ರಪೋಷಣೆ ಮಾಡಿದರು.

- ಶ್ರೀಕಾಂತ ಹೆಗಡೆ ಕೈಗಳ್ಮನೆ.

0 comments:

Post a Comment