ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವೈವಿಧ್ಯ

ಚಿಂವ್...ಚಿಂವ್ವೆನ್ನುವ ಕಪ್ಪುಹಳದಿ ಮಿಶ್ರ ಬಣ್ಣ ಹೊಂದಿರುವ ಕೋಳಿಮರಿಗಳು. ಸುತ್ತ ರಟ್ಟೆಯೆಂಬ ಜೈಲಿನಲ್ಲಿ ಬಂಧಿಯಾಗಿವೆ. ಈಗ ಈ ಕೋಳಿ ಮರಿಗಳು ಕಾಂಕ್ರಿಟೆಂಬ ನಾಡಿಗೆ ಮಾರಟದ ವಸ್ತುವಾಗಿ ದೂರದ ಚಿತ್ತೂರಿನಿಂದ ಬಂದಿವೆ. ಜಗತ್ತಂದರೆನೆಂದು ನೋಡುವುದೂರಳಗಾಗಿ ತನ್ನ ಮಾಲಿಕನನನೊಂದಿಗೆ ಊರೂರು ಅಲಿಯುತ್ತ, ಮಾಲಿಕನ ಹೊಟ್ಟೆಯನ್ನು ತುಂಬಿಸುತ್ತಿದೆ. ದಾರಿಹೊಕರ ಗಮನ ಸೆಳೆದು ಒಂದು ಕ್ಷಣ ನಿಂತು ನೋಡುವಂತೆ ಮಾಡುತ್ತವೆ. ಅಂದಹಾಗೆ ಈ ಕೊಳಿಮರಿಗಳಿಗೆ ಗಿರಿರಾಜವೆಂದು ಕರೆಯುತಾರೆ.


ಇದರ ವ್ಯಾಪಾರಿ ರಾಮಣ್ಣನವರ ಪ್ರಕಾರ ಈ ಕೋಳಿ ಮರಿಗಳನ್ನು ದೂರದ ಚಿತ್ತೂರಿನಿಂದ ತಂದಿದ್ದೆವೆ ಅಲ್ಲಿಯ ಬಲಾಜಿಯೆಂಬ ಕಂಪೆನಿ ಇದನ್ನು ಮಾರುತ್ತಿದೆ ನಾವು ಆ ಕಂಪೆನಿಯ ಎಜೆಂಟ್ಗಳು, ಕೋಳಿ ಮರಿಗಳನ್ನು ಮಾರುವ ಸಂಖ್ಯೇ ಮೇಲೆ ನಮಗೆ ಕಮಿಷನ್ ಸಿಗುತ್ತದೆ. ಹತ್ತು ರೂಪಾಯಿಗೆ ಒಂದರಂತೆ ನೂರು ರೂಪಾಯಿಗೆ ಹನ್ನೆರಡು ಕೋಳಿಮರಿಗಳನ್ನು ಮಾರಲಾಗುತ್ತಿದೆಂದರು
ಗಿರಕಿಗಳಲ್ಲಿ ಕೆಲವರು ಅಂದಚೆಂದಕ್ಕಾಗಿ ತೆಗೆದುಕೊಂಡರೆ, ಇನ್ನು ಹಲವರು ರೂಚಿಗಾಗಿ ಮತ್ತು ವ್ಯಪಾರಕ್ಕಾಗಿ ಬಳಸುತ್ತಾರೆ. ರಾಮಣ್ಣನವರ ಪ್ರಕಾರ ಈ ಕೋಳಿಮರಿಗಳು ತನ್ನ ಬಣ್ಣದ ಮೂಲಕ ವಿಶಿಷ್ಟ ರೀತಿಯ ಆಕರ್ಷಣೆ ಇದ್ದು ಮೂರು ತಿಂಗಳ ನಂತರ ದೂಡ್ಡದಾಗಿ ಒಂದಲ್ಲ ಒಂದು ರೀತಿಯಲ್ಲಿ ಉಪಯೊಗಕ್ಕೆ ಬರುತ್ತವೆಂದು ಹೇಳಿದರು. ಒಟ್ಟಾರೆ ಯಾರದೋ ಲಾಭಕ್ಕಾಗಿ ನೂರಾರು ಕೋಳಿ ಮರಿಗಳು ಮಾರಟದ ಸರಕ್ಕಾಗಿದ್ದಾವೆ. ತನ್ನ ಯಾಜಮಾನನಿಗೆ ಪ್ರಾಮಾಣಿಕ ಸೇವೆಸಲ್ಲಿಸುತ್ತಿದ್ದ್ದಾವೆ.....!

ಚೇತನ್

0 comments:

Post a Comment