ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಶೇಷ ವರದಿ
ಚಿತ್ರ- ವರದಿ: ನಾಡೋಡಿ

ಹೌದು... ವಿಶ್ವಕ್ಕೆ ಪ್ರಳಯ ಸನ್ನಿಹಿತವಾಯಿತೇ... ನಿಜಕ್ಕೂ ವಿಶ್ವಪ್ರಳಯ ಹೌದೇ... ಇದಕ್ಕೆಲ್ಲಾ ಪುಷ್ಠಿನೀಡುತ್ತಿದೆ. ಈ ಒಂದು ಐತಿಹ್ಯದ ಸಾಕ್ಷಿ. ಹೌದು... ವಿಶ್ವ ಪ್ರಳಯದ ಸುದ್ದಿ ಇಂದು ನಿನ್ನೆಯದಲ್ಲ. ಅಂದೇ ವಿಶ್ವಕ್ಕೆ ಪ್ರಳಯ ಸನ್ನಿಹಿತ ಎಂಬುದನ್ನು ನಮ್ಮ ಹಿರಿಯರು ಘೋಷಿಸಿಬಿಟ್ಟಿದ್ದಾರೆ. ಅನೇಕ ತಾಳೆಗರಿಗಳಲ್ಲಿಯೂ, ಪಂಚಾಂಗಗಳಲ್ಲಿಯೂ ಈ ಬಗ್ಗೆ ದಾಖಲೆ ಕೆತ್ತಿಬಿಟ್ಟಿದ್ದಾರೆ. ಬರೆದುಬಿಟ್ಟಿದ್ದಾರೆ. ಅಂತೂ ಈ ಆದಿಗೊಂದು ಅಂತ್ಯ ನಿಶ್ಚಿತ!!!ಈಗ ಕಳೆದೆರಡು ನಾಲ್ಕು ತಿಂಗಳುಗಳಿಂದ ವಿಶ್ವ ಪ್ರಳಯಕ್ಕೆ ಹೆಚ್ಚಿನ ಪುಷ್ಠಿ ನೀಡಿದೆ. ಇದಕ್ಕೆ ಆಧಾರವೆಂಬಂತೆ ಈ ಕನಸು ತಂಡ ನಡೆಸಿದ ಅನ್ವೇಶಣೆಗಳಿಗೆ ಒಂದು ಆಧಾರವೂ ಇದೀಗ ಲಭ್ಯವಾಗಿದೆ. ಅದೇ `ಹಲ್ಲಿಗಳು...'
ಹಲ್ಲಿಗಳೇ... ಹಲ್ಲಿಗಳಿಗೂ ವಿಶ್ವ ಪ್ರಳಯಕ್ಕೂ ಅದೇನು ಸಂಬಂಧ ? ಅಚ್ಚರಿಯಾಯಿತೇ... ಆದರೂ ನಂಬಲೇ ಬೇಕು. ಅಂತಹ ಸ್ಥಿತಿ ಇದೀಗ ನಿರ್ಮಾಣಗೊಂಡಿದೆ. ಹೌದು ಎನ್ನುತ್ತದೆ ಈ ದಾಖಲೆಗಳು, ಸಾಕ್ಷಿಗಳು. ಇದಕ್ಕೆ ಊರ ಹಿರಿಯರ ಅನೇಕ ಮಾತುಗಳು ಪುಷ್ಠಿನೀಡಿವೆ...
ವಿಶ್ವ ಪ್ರಳಯದ ಸುದ್ದಿಯ ಜಾಡನ್ನು ಹಿಡಿದು ಸಾಗಿದ ಈ ಕನಸು.ಕಾಂ ನ ತಂಡಕ್ಕೆ ಕೊನೆಗೂ ಕಾಣಸಿಕ್ಕಿದ್ದು ಶ್ರೀ ಅಖಿಲಾಂಡೇಶ್ವರೀ ಅಘೋರೇಶ್ವರ ದೇವಸ್ಥಾನ ಇಕ್ಕೇರಿ.ಇದು ಶಿವಮೊಗ್ಗ ಜಿಲ್ಲೆಯಲ್ಲಿದೆ. ಅತ್ಯಂತ ಪುರಾತನವಾದ ದೇಗುಲ. ಶಿಲ್ಪಕಲಾ ವೈವಿಧ್ಯತೆಗಳನ್ನೊಳಗೊಂಡ ಈ ದೇಗುಲ `ವಿಶ್ವ ಪ್ರಳಯ'ದ ಸುದ್ದಿಯನ್ನು ಹೇಳುತ್ತಿದೆ. ದೇಗುಲದ ಬಲಪಾರ್ಶ್ವದಲ್ಲಿ ಇದಕ್ಕೆ ಆಧಾರವೂ ದೊರಕುತ್ತದೆ. ಈ ದೇಗುಲವನ್ನು ಭಾರತ ಸರಕಾರದ 1958ರ ಪ್ರಾಚೀನ ಸ್ಮಾರಕ ಎಂದು ಘೋಷಿಸಿದೆ.


ದೇಗುಲದ ಹೊರಭಾಗದಲ್ಲಿ ಗೋಡೆಯ ಪಾಶ್ವದಲ್ಲೊಂದು ಶಿಲಾ ಬರಹವಿದೆ. ಅಲ್ಲೇ ಸನಿಹದಲ್ಲಿ ಎರಡು ಹಲ್ಲಿಗಳು ಪರಸ್ಪರ ಮುಖಮಾಡಿನಿಂತಂತೆ ಕೆತ್ತಲಾಗಿದೆ. ಸನಿಹದಲ್ಲಿಯೇ ಚೇಳಿನ ಆಕೃತಿಯೊಂದಿದೆ. ಕಳೆದ ಹಲವಾರು ವರುಷಗಳಿಂದ ಈ ಶಿಲ್ಪಗಳನ್ನು ಜನ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಈ ಹಲ್ಲಿಗಳು ಪರಸ್ಪರ ಹತ್ತಿರವಾಗುತ್ತಿವೆ. ಈ ಎರಡು ಹಲ್ಲಿಗಳ ಮುಖ ಸೇರುವ ದಿನ ಪ್ರಳಯ ನಿಶ್ಚಿತವಂತೆ. ಹಾಗಂತ ಮಾತ್ರಕ್ಕೆ ಇದು ಊಹಾಪೋಹ ಕಟ್ಟು ಕತೆ ಎಂದು ಹೀಗಳೆಯಬೇಡಿ. ಈ ಹಲ್ಲಿಗಳು ಪರಸ್ಪರ ಸನಿಹವಾಗುತ್ತಿವೆ ಎಂಬುದಕ್ಕೆ ಮೊದಲಿನಿಂದಲೂ ಇದನ್ನು ಗಮನಿಸುತ್ತಿದ್ದ ಅನೇಕ ಮಂದಿಯೇ ಸಾಕ್ಷಿಯಾಗಿದ್ದಾರೆ.
ಆದರೆ ಹಲ್ಲಿ ಯಾವಾಗ ಪರಸ್ಪರ ಸನಿಹವಾಗುತ್ತವೆ. ಅಂದು ವಿಶ್ವಕ್ಕೆ ಅಂತ್ಯ ಹೌದೇ...ಇದೆಲ್ಲವೂ ಇಂದು ನಮ್ಮೆದುರು ಮೂಡುವ ಪ್ರಶ್ನೆಯಾಗಿದೆ. ಅಂತೂ ಅನೇಕ ಮಂದಿ ಈ ವಿಚಾರವನ್ನು ನಂಬಿದ್ದಾರೆ. ಒಂದು ವೇಳೆ ಅದು ಸುಳ್ಳಾಗಿದ್ದರೆ ಅಲ್ಲಿ ಹಲ್ಲಿಗಳನ್ನೇಕೆ ಕೆತ್ತಬೇಕಿತ್ತು. ಎಂಬ ಪ್ರಶ್ನೆಯನ್ನೂ ಅವರು ಎತ್ತುತ್ತಿದ್ದಾರೆ...!!!

0 comments:

Post a Comment