ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
6:53 PM

ಮುಗಿಯದ ರೀಲು...

Posted by ekanasu

ಅಂಕಣ
ಕರ್ಮಯೋಗಿ ಗುಂಡಿಬೈಲು

ಸವಿಗರೆವುದು ನೆಲ
ಸಂಸ್ಕರಿಸುತ ನಾವದನುಪಚರಿಸೆ
ಸವಿಗರೆವುದು ಮನ
ಸನ್ಮೌಲ್ಯಗಳಿಂದದನುಪಚರಿಸೆ
ಸವಿಗರೆವುದು ಜಗ
ಸದ್ ಭಾವದಿನಾವದನುಪಚರಿಸೆ.ಗುಂಡಿಬೈಲು ಶ್ರೀನಿವಾಸ್ ಅವರನ್ನು ಬಣ್ಣಿಸಲು ಈ ಕವಿವಾಣಿ ಸಾಕು. ಅಂಡಮಾನದಿಂದ ಅರಬ್ಬಿಸಮುದ್ರ ತಟದ ಮಂಗಳೂರಿಗೆ ಮಡದಿ ಮಕ್ಕಳೊಡನೆ ವಲಸೆ ಬಂದಾಗ ತಮ್ಮವರಂತೆ ನಮ್ಮನ್ನೆಲ್ಲ ಅಪ್ಪಿಕೊಂಡರು. ನಮ್ಮ ಮನೆಯವರಾದರು ಶ್ರೀನಿವಾಸ್. ಕಾಡುಮೇಡುಗಳಲ್ಲಿ ಕಟ್ಟಕಡೆಯ ಜನರನ್ನರಸಿ ಹೊರಟೆವು. ಅದೊಂದು ಅಪೂರ್ವ ಕ್ಷೇತ್ರಪ್ರಚಾರ.
ಸರಳ ಜೀವಿ ಶ್ರೀನಿವಾಸ್ ಅವರನ್ನು ಪ್ರೀತಿಸದೇ ಇರಲು ಸಾಧ್ಯವೇ ಇಲ್ಲ. ಅನ್ಯರ ನಡಾವಳಿ ಅಸಹ್ಯವಾದಾಗಲೂ ಅವರದು ಕೇಡಿಲ್ಲದ, ಕೇಡೆಣಿಸದ ಪ್ರತಿನಡೆ. ಅವರಿಗನುರೂಪದ ಮಡದಿ, ಮಕ್ಕಳಿಬ್ಬರೂ ಮಂಜುನಾಥ, ರಾಘವೇಂದ್ರ.
ಆ ಮೇಲೆ ಕ್ಷೇತ್ರಪ್ರಚಾರ ಪ್ರಾದೇಶಿಕ ಅಧಿಕಾರಿಯಾದಾಗ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯನ್ನು ದೇಶದ ಎರಡನೆಯ ಸಂಪೂರ್ಣ ಸಾಕ್ಷರ ಜಿಲ್ಲೆಯಾಗಿಸುವ `ಅಕ್ಷರ ಯಜ್ಞದಲ್ಲಿ ನಾವಿಬ್ಬರೂ ಕೂಡಿದೆವು. ನಮ್ಮ ಅಳಿಲ ಸೇವೆಗೆ ಕ್ಷೇತ್ರಪ್ರಚಾರ ಮಹಾನಿರ್ದೇಶಕರು ನಮ್ಮಿಬ್ಬರಿಗೂ ಒಂದೇ ಸಲ ಪ್ರಶಂಸಾಪತ್ರ ಕೊಟ್ಟಾಗ ಗುಂಡಿಬೈಲು ಶ್ರೀನಿವಾಸ್ ಅವರ ಕರ್ಮಯೋಗದ ಫಲದಲ್ಲಿ ನನಗೂ ಪಾಲು. ನನ್ನ ಬದುಕಿನ ಹಸಿರು ಹಸಿರಾಗಿ ನನ್ನುಸಿರುರುವ ತನಕ ನನ್ನೊಂದಿಗಿರುವ ಮೆಲುಕು. ಅವರಿಗೆ ಶುಭ ಹರಸುವುದು ನನ್ನ ಸುಯೋಗ.

ಖಾದ್ರಿ ಎಸ್. ಅಚ್ಯುತನ್

0 comments:

Post a Comment