ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
8:14 PM

ಪ್ರಶ್ನೆಗಳು

Posted by ekanasu

ಕವನ

ನಾ ನಿನ್ನವನು
ನೀ ಎನ್ನವಳೆಂದು
ನೂರು ಭಾಷೆ
ನೂರು ದೇವರ ಮೇಲಾಣೆ ಆಗಿ ಹೋದ ಮೇಲೂ
ಪಕ್ಕದ ಮನೆಯ ಕಮಲ
ಆಚೆ ಬೀದಿಯ ವಿಮಲ
ಎಲ್ಲೋ ಎಂದೋ ಕಳೆದು ಹೋದ
ಬಾಲ್ಯದ ಗೆಳತಿ ಸುಮನಅಲ್ಲಿ ಇಲ್ಲಿ ಕಂಡು ಮಿಂಚಂತೆ ಸುಳಿದು
ಮರೆಯಾದ ಚೆಂದುಳ್ಳಿ ಚೆಲುವೆಯರ ನಯನ
ಬೇಡ ಬೇಡವೆಂದರೂ ಬಿಡದೆ
ರಾತ್ರಿ ಮುಚ್ಚಿದ ಕಣ್ಣ ಕದ ತೆರೆದು ಬಂದು
ಕನಸಾಗಿ ಕಾಡುವುದೇಕೆ?...
ಎನ್ನ ಕಣ್ಣ ಗೊಂಬೆ ನೀನು.
ನಿನ್ನ ಮರೆಸಿ ಕಣ್ಣ ಹರವಿನಲ್ಲಿ
ಡೇರೆ ಹಾಕಿ ಹೊಳಪಾಗಿ
ಎನ್ನ ಒಳ ಗಣ್ಣು ಮಂಜಾಗುವು ದೇಕೆ ?...
ನೀ ಕಂಡ ನಾನು
ಎನ್ನ ಏಕಾಂತದೊಳು
ಇನ್ನೇನೋ ಆಗುವುದೇಕೆ? ...
ಒಳಗೆ ಕೃಷ್ಣ ನಾನು ರಾವಣನ ಜೊತೆಗೂಡಿ .
ಹೊರಗೆ ರಾಮನಾಗಿ
ನಿನ್ನೊಳು ಕೇವಲ ಸೀತೆಯ ಹುಡುಕುವುದೇಕೆ ?...
ಮತ್ತೆ ಮತ್ತದೇ ನಾನು
ಸೋತು ಕುಳಿತಾಗ
ಸುತ್ತಲ ಜಗತ್ತು ಎನ್ನ ಪಾಲಿಗೆ ಇಲ್ಲವಾದಾಗ
ಮೊದಲು ನೀನೆ ನೆನಪಾಗುವುದೇಕೆ?..
ಧರಣಿಯಂಥ ನಿನ್ನ ಮಡಿಲ
ಹಿರಿದು ಆಸರೆಯು ಬೇಕು ಏಕೆ?...
ಉತ್ತರವಿಲ್ಲದ ಪ್ರಶ್ನೆಗಳಿವು ಎನ್ನೊಳಗೆ .
ಬಹುಶಃ ಬದುಕೇ ಹೀಗೆ .....
ಗೌತಮ್ ಹೆಗಡೆ

0 comments:

Post a Comment