ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
9:22 PM

ಕಣ್ಮರೆ

Posted by ekanasu

ವಿಶೇಷ ವರದಿ


ಚಂದ್ರಮಾವಿನಕೊಪ್ಪಲಿನ ರಾಜಶೇಖರ ಮೂರ್ತಿಗಳ ಮನೆ ಒಂದು... ಗಿಳಲಗುಂಡಿಯ ಶಂಕರಪ್ಪನನವರ ಮನೆ ಇನ್ನೊಂದು. ನಾನು ಇಬ್ಬರ ಮನಗೂ ಹೋಗಿ ಕೊನೆಗೆ ರಾಜಶೇಖರ ಮೂರ್ತಿಗಳ ಮನೆಯನ್ನು ಆರಿಸಿಕೊಂಡೆ... ಯಾಕೆಂದರೆ ಆ ಮನೆಯಲ್ಲಿ ರಾಜಶೇಖರ ಮೂರ್ತಿಗಳಾಗಲೀ ಅವರ ಕುಟುಂಬದವರಾಗಲೀ ವಾಸಮಾಡುತ್ತಿರಲಿಲ್ಲ. ಅವರ ಮಗ ಬೆಂಗಳೂರಿನಲ್ಲಿ ಓದುತ್ತಿದ್ದ . ಮೂರ್ತಿಗಳೂ ರಾಜಕೀಯದಲ್ಲಿ ಸಣ್ಣಮಟ್ಟಿಗೆ ಹೆಸರು ಮಾಡಿ ಬೆಂಗಳೂರು - ಧಾರಾವಾಡ ಅಂತ ಓಡಾಡಿಕೊಂಡಿದ್ದರು. ಹೀಗಾಗಿ ಆ ಮನೆಯ ಏಕಾಂತ ನನಗೆ ತುಂಬಾ ಹಿಡಿಸಿತ್ತು...!!!

2008ರಲ್ಲಿ ಎಚ್.ಗಿರೀಶ್ ರಾವ್ ಅವರ `ರಾಯಭಾಗದ ರಹಸ್ಯ ರಾತ್ರಿ'(ಜೋಗಿ ಕಥೆಗಳು) ಪುಸ್ತಕ ಪ್ರಥಮ ಮುದ್ರಣವಾದಾಗ ತಂಗಿ ಧೀಷ್ಮಾ ಕೈಗಿತ್ತು ಓದು ಚೆನ್ನಾಗಿದೆ ಅಂದಿದ್ದಳು. ಆ ಇಡೀ ಪುಸ್ತಕದ ಪೈಕಿ ನನಗೆ ಬಹಳ ಕಾಡಿದ್ದು `ಕಣ್ಮರೆ' ಯಾಕೋ ಏನೋ... ಆ ಕಥೆಯಲ್ಲಿ ಬರುವ `ಚಂದ್ರಮಾವಿನ ಕೊಪ್ಪಲು' ಎಂಬ ಸಣ್ಣ ಹಳ್ಳಿ... ಮಿಲಿಟರಿ ನಿವೃತ್ತ ಅಧಿಕಾರಿ, ರಾಜಶೇಖರ ಮೂರ್ತಿ, ಸಾಗರ, ಸರೋಜಿನಿ...ಸಂಜೆಯ ಭೀಕರ ಮಳೆ... ಸಾವು..ಕೊಲೆ... ಅಮೂರ್ತವಾಗಿರುವ ದೆವ್ವ, ಭೂತಗಳ ಚಿತ್ರಣ...ಇದೆಲ್ಲ ನನ್ನ ಮನದಲ್ಲಿ ಮತ್ತೆ ಮತ್ತೆ ಕಾಡುತ್ತಿತ್ತು... ಕಥೆಯ ಕೊನೆಯಲ್ಲಿರುವ ಸಾಲುಗಳಂತೆ...`` ಆದರೆ ಮಗು ಸಿಗೋಲ್ಲ... ಅನ್ನುವುದು ನನಗೆ ಗೊತ್ತಿತ್ತು. ಅದನ್ನು ಅವರಿಗೆ ವಿವರಿಸಿ ಹೇಳುವ ಹಾದಿ ಗೊತ್ತಿರಲಿಲ್ಲ... ಮಗು ಸಿಗೋಲ್ಲ... ಯಾಕೆಂದರೆ .... ವಿವರಿಸುವ ಶಕ್ತಿ ನನಗಿಲ್ಲ...'' ಎಂಬಂತೆ...!!!


ಜೈನಕಾಶಿ ಮೂಡಬಿದಿರೆಯ ಫಿರ್ಕಾಕ್ಕೆ ಬರುವ ಹೊಸಂಗಡಿ - ಮಾರೂರು ಒಂದು ಪುಟ್ಟ ಹಳ್ಳಿ. ಅಲ್ಲೊಂದು ಮನೆಯಿದೆ. ಹೌದು ಒಂದೊಮ್ಮೆ `ಅರಮನೆ'ಯಾಗಿ ಮೆರೆದಿತ್ತು. ಈಗ ಆ ರಾಜವಂಶಸ್ಥರು ಅಲ್ಲಿದ್ದಾರೆ. ಅರಮನೆಯೂ ಇದೆ...ಆ ಬೃಹದಾಕಾರದ ಹಳೆಯ ಅರಮನೆಯೇ ಈ `ಕಣ್ಮರೆ' ಕಥೆಗೊಂದು `ಲೊಕೇಷನ್'...

`ಜೋಗಿ' ಎಂದೇ ಖ್ಯಾತರಾದ ಎಚ್.ಗಿರೀಶ್ ರಾವ್ ಇದೀಗ `ಕಣ್ಮರೆ'ಯನ್ನು ಕಿರುತೆರೆಗೆ ತರಲಿದ್ದಾರೆ. ಅದಕ್ಕಾಗಿ ಚಿತ್ರೀಕರಣ ಕಳೆದೆರಡು ದಿನಗಳಿಂದ ಸಾಗುತ್ತಿದೆ. ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳು ಈ ಚಿತ್ರೀಕರಣದಲ್ಲಿ ಪಾಲುಪಡೆದುಕೊಂಡಿದ್ದಾರೆ. ಪ್ರತೀ ಹಂತವನ್ನೂ ಅತ್ಯಂತ ಕಾಳಜಿ, ಸೂಕ್ಷ್ಮವಾಗಿ ಚಿತ್ರೀಕರಿಸುತ್ತಿದ್ದಾರೆ ಸತ್ಯಬೋಧ ಜೋಶಿ. ಜೋಗಿ , ಅನಿಲ್ ಭಾರಧ್ವಾಜ್ ನಿರ್ದೇಶನದಲ್ಲಿದ್ದಾರೆ.

ಅಂದಹಾಗೆ `ಸುವರ್ಣ 24x7 ' ವಾಹಿನಿಯಲ್ಲಿ ಇದು ಮೂಡಿಬರಲಿದೆ. ನೆರಳು ಬೆಳಕುಗಳ ಸಂಯೋಜನೆ ಚಿತ್ರೀಕರಣದ ಸಂದರ್ಭದಲ್ಲೇ ಸ್ವಷ್ಟವಾಗಿ ಕಾಣುತ್ತಿದೆ.
- ನಾಡೋಡಿ.

1 comments:

Anonymous said...

nice....

Post a Comment