ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ
ಬೆಂಗಳೂರು: ಹದಿನೆಂಟನೇ ಶತಮಾನದ ಅವಧಿಯಲ್ಲಿ ಭಾರತ ಹೇಗಿತ್ತು? ಎಂಬುದನ್ನು ಕಣ್ತುಂಬಿಕೊಳ್ಳಲು ಬೆಂಗಳೂರಿಗರಿಗೆ ಉತ್ತಮ ಅವಕಾಶ.
ನಗರದ ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್ ನಲ್ಲಿ ಲಂಡನ್ನ ವಿಕ್ಟೋರಿಯ ಮತ್ತು ಆಲ್ಬರ್ಟ್ ಸಂಗ್ರಹಾಲಯದ ಸಹಯೋಗದಲ್ಲಿ ಪಾಶ್ಚಾತ್ಯ ಕಲಾವಿದರು ಚಿತ್ರಿಸಿದ ಭಾರತೀಯ ಜನಜೀವನ ಮತ್ತು ಪ್ರಕೃತಿ ಸಂಗ್ರಹದ ರೇಖಾಚಿತ್ರಗಳು ಮತ್ತು ಚಿತ್ರಕಲೆ 1790-1927 ಎಂಬ ಪ್ರದರ್ಶನ ಈ ಅವಕಾಶ ಒದಗಿಸಿದೆ. ಈ ಪ್ರದರ್ಶನದ ಉದ್ಘಾಟನಾ ಸಮಾರಂಭದಲ್ಲಿ ಭಾರತ ಸರಕಾರದ ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿ ಜವಾಹರ್ ಸರ್ಕಾರ್ ಅವರೇ ಹೇಳಿದಂತೆ ಇಂತಹ ದೃಶ್ಯಾವಳಿಗಳ ದಾಖಲೆ ಫೋಟೋಗ್ರಫಿ ಸಂಶೋಧನೆಗೂ ಹಳೆಯ ಅವಧಿಗೆ ಲಭ್ಯವಿರುವ ಕೆಲವೇ ಅದೃಷ್ಟವಂತ ದೇಶಗಳಲ್ಲಿ ಭಾರತವೂ ಒಂದು. ಪೆನ್ಸಿಲ್ ರೇಖಾಚಿತ್ರಗಳು ಮತ್ತು ಜಲವರ್ಣ ಚಿತ್ರಗಳನ್ನೇ ಬಹುತೇಕ ಹೊಂದಿರುವ ಈ ಕಲಾಕೃತಿಗಳ ಸಂಗ್ರಹ ಆಸಕ್ತಿ ಮೂಡಿಸುವಂತಿದೆ.ಕರ್ನಾಟಕ ಸರಕಾರದ ಮುಖ್ಯ ಕಾರ್ಯದರ್ಶಿ ಎಸ್.ವಿ. ರಂಗನಾಥ್ ಅವರು ಈ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬೆಂಗಳೂರು ಪ್ರದರ್ಶನ ಕಲೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತ ಬಂದಿದೆ. ಇತ್ತೀಚೆಗೆ ಚಿತ್ರಕಲೆಯತ್ತಲೂ ಆಸಕ್ತಿ ಹೆಚ್ಚಾಗುತ್ತಿದೆ. ನಗರದಲ್ಲಿ ಸ್ಥಾಪಿಸಲಾಗಿರುವ ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್ ಗೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಅವರು ತಿಳಿಸಿದರು.
ಲಂಡನ್ನ ವಿಕ್ಟೋರಿಯಾ ಅಂಡ್ ಆಲ್ಬರ್ಟ್ ಮ್ಯೂಸಿಯಂನ ನಿರ್ದೇಶಕ ಸರ್ ಮಾರ್ಕ್ ಜೋನ್ಸ್ ಅವರು ಮಾತನಾಡಿ, ಭಾರತ ಸರಕಾರ ಹಾಗೂ ವಿವಿಧ ಸಂಸ್ಥೆಗಳ ಸಹಕಾರದೊಂದಿಗೆ ಏರ್ಪಡಿಸಲಾಗಿರುವ ಪ್ರದರ್ಶನಗಳ ಸರಣಿಯಲ್ಲಿ ಇದು ಕೊನೆಯದಾಗಿದೆ. ಈ ಹಿಂದೆ ದೆಹಲಿ, ಕೋಲ್ಕತ್ತಾ ಹಾಗೂ ಹೈದರಾಬಾದ್ ಗಳಲ್ಲಿಯೂ ಈ ಪ್ರದರ್ಶನ ಏರ್ಪಡಿಸಲಾಗಿದ್ದು, 50 ಲಕ್ಷ ಜನರು ಈ ಪ್ರದರ್ಶನವನ್ನು ವೀಕ್ಷಿಸಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಬ್ರಿಟಿಷ್ ಕೌನ್ಸಿಲ್ನ ಪ್ರಾದೇಶಿಕ ನಿರ್ದೇಶಕಿ ರುತ್ ಜೀ ಅವರು ಬ್ರಿಟಿಷ್ ಕೌನ್ಸಿಲ್ ನಗರದೊಂದಿಗಿನ ಸಾಂಸ್ಕೃತಿಕ ಬಾಂಧವ್ಯ ವೃದ್ಧಿಗೆ ಪ್ರಾಶಸ್ತ್ಯ ನೀಡಿದೆ ಎಂದು ತಿಳಿಸಿದರು.
ಕಲೆಯ ಬಗ್ಗೆ ಬ್ರಿಟಿಷ್ ಕೌನ್ಸಿಲ್ ವತಿಯಿಂದ ಹಲವಾರು ಕಾರ್ಯಕ್ರಮಗಳನ್ನೂ ಈ ಸಂದರ್ಭದಲ್ಲಿ ಏರ್ಪಡಿಸಲಾಗಿದೆ. ಈ ಪ್ರದರ್ಶನವು ಏಪ್ರಿಲ್ 9ರಿಂದ ಮೇ 23, 2010ರ ವರೆಗೆ ನಡೆಯಲಿದೆ. ಪ್ರವೇಶ ದರ, ವಿದ್ಯಾರ್ಥಿಗಳಿಗೆ ರೂ. 1. 18 ವರ್ಷ ಮೇಲ್ಪಟ್ಟ ಭಾರತೀಯರಿಗೆ ರೂ. 10 ಹಾಗೂ ವಿದೇಶೀಯರಿಗೆ ರೂ. 150/- ನಿಗದಿಪಡಿಸಲಾಗಿದೆ.
ಪ್ರದರ್ಶನವು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯ ವರೆಗೆ ತೆರೆದಿರುತ್ತದೆ. ಸೋಮವಾರ ರಜಾದಿನ. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 2234 2338ನ್ನು ಸಂಪರ್ಕಿಸಬಹುದು.

0 comments:

Post a Comment