ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ

ಮೂಡಬಿದಿರೆ: ಮಂಟಪ ಪ್ರಭಾಕರ ಉಪಾಧ್ಯಾಯ ವೃತ್ತಿಮಾತ್ಸರ್ಯ ಇಲ್ಲದ ಕಲಾವಿದರಾಗಿದ್ದಾರೆ ಎಂದು ಕೈಗಾರಿಕಾ ಆಯುಕ್ತ ಟಿ.ಶ್ಯಾಮ್ ಭಟ್ ಪ್ರಶಂಸಿಸಿದ್ದಾರೆ.


ಯಕ್ಷಗಾನ ರಂಗಭೂಮಿಯ ಹೊಸ ಸಾಧ್ಯತೆಯ ಸಾಧಕ ಮಂಟಪ ಪ್ರಭಾಕರ ಉಪಾಧ್ಯಾಯ ಅವರ ಏಕವ್ಯಕ್ತೀಯ ಯಕ್ಷಗಾನದ `ಸಾವಿರದ ಸಂಭ್ರಮ ' ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ರಾಷ್ಟ್ರೀಯ ಮಟ್ಟದಲ್ಲಿಯಕ್ಷಗಾನ ಕಲೆಯನ್ನು ಇನ್ನೂ ಸಮಗ್ರ ಕಲೆ ಎಂದು ಪರಿಗಣಿಸಲ್ಪಟ್ಟಿಲ್ಲ ಎಂದು ವಿಷಾಧನೀಯ . ಪದ್ಮಭೂಷಣ, ಪದ್ಮವಿಭೂಷಣ ಗೌರವಗಳನ್ನು ನೀಡುತ್ತಿರುವ ಸಂದರ್ಭದಲ್ಲಿ ಯಕ್ಷಗಾನ ಕಲೆಯನ್ನು ಸಮಗ್ರ ಕಲೆ ಎಂದು ಪರಿಗಣಿಸುತ್ತಿಲ್ಲ ಎಂದವರು ಖೇದ ವ್ಯಕ್ತ ಪಡಿಸಿದರು.
ಮಂಗಳೂರು ವಿ.ವಿ.ಇದೀಗ ಯಕ್ಷಗಾನ ಕಲಾವಿದರಿಗೂ ಗೌರವ ಡಾಕ್ಟರೇಟ್ ನೀಡಲಾರಂಭಿಸಿದ್ದು ಕಲೆಗೆ ಒಂದು ಸೂಕ್ತ ಗೌರವ ನೀಡುತ್ತಿದೆ ಎಂದು ಹರ್ಷವ್ಯಕ್ತಪಡಿಸಿದರು.

ಡಾ.ಎಂ.ಪ್ರಭಾಕರ ಜೋಶಿ ಶುಭಾಶಂಸನೆ ಗೈದರು. ಉದ್ಯಮಿ ಎಚ್.ಬಿ.ರಾಜೀವ ಶೆಟ್ಟಿ, ಅಂಬಾತನಯ ಮುದ್ರಾಡಿ ಅತಿಥಿಗಳಾಗಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚಲನಚಿತ್ರ ನಿರ್ದೇಶಕ ಎಸ್. ಶಿವರಾಂ ವಹಿಸಿದ್ದರು.
ವೇದಿಕೆಯಲ್ಲಿ ಆಳ್ವಾಸ್ ಎಜುಕೇಷನ್ ಫೌಂಡೇಷನ್ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಉಪಸ್ಥಿತರಿದ್ದರು. ಬಲಿಪ ನಾರಾಯಣ ಭಾಗವತರಿಂದ ಪ್ರಾರ್ಥನೆ ನಡೆಯಿತು. ಪ್ರೊ. ಎಚ್.ಕೃಷ್ಣ ಭಟ್ ಸ್ವಾಗತಿಸಿದರು. ಎಸ್.ವಿ. ಭಟ್ ವಂದಿಸಿದರು.

0 comments:

Post a Comment