ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಚಾರ

ಹವಾಮಾನ ತಜ್ಞರ ಪ್ರಕಾರ ೨೦೧೦ ಅತ್ಯಕ ಉಷ್ಣತಾಮಾನದ ವರ್ಷವಾಗಿ ದಾಖಲಾಗುವ ಸಂಭವವಿದೆ.
ಹೆಚ್ಚುತ್ತಿರುವ ಭೂಮಿಯ ತಾಪಮಾನ ಇದಕ್ಕೆ ಕಾರಣ. ೨೦೦೯ ಹಾಗೂ ೧೯೯೮ ಈವರೆಗಿನ ಅತಿ
ಹೆಚ್ಚು ಉಷ್ಣತಾಮಾನದ ವರ್ಷಗಳಾಗಿದ್ದವು.
ಬ್ರಿಟನ್‌ನ ವಿಜ್ಞಾನಿಗಳು ನಡೆಸಿದ ಅಧ್ಯಯನ ವರದಿಯೊಂದರ ಪ್ರಕಾರ ಪರಿಸ್ಥಿತಿ ಹೀಗೆಯೇ
ಮುಂದುವರಿದರೆ ೨೦೬೦ರ ವೇಳೆಗೆ ಜಾಗತಿಕ ತಾಪಮಾನದಲ್ಲಿ ೪ ಡಿಗ್ರಿ ಸೆಲ್ಸಿಯಸ್‌ನಷ್ಟು
ಏರಿಕೆ ಕಂಡು ಬರಲಿದೆ. ಆರ್ಕಿಟಿಕ್, ಪಶ್ಚಿಮ ಹಾಗೂ ದಕ್ಷಿಣ ಆಫ್ರಿಕಾದ ಕೆಲವು
ಪ್ರದೇಶಗಳಲ್ಲಿ ಏರಿಕೆಯ ಪ್ರಮಾಣ ೧೦ ಡಿಗ್ರಿಯಷ್ಟು ಹೆಚ್ಚಾದರೂ ಅತಿಶಯೋಕ್ತಿ
ಪಡಬೇಕಿಲ್ಲ.ಪರಿಣಾಮ ಘೋರ, ಅಳಿವಿನ ಮೂಲ
ಭೂಮಿಯ ತಾಪಮಾನ ಏರಿಕೆಯ ಪರಿಣಾಮಗಳು ಘೋರ. ಮಾನವ ಸಂತತಿಯ ಅಳಿವಿಗೆ ಮೂಲ. ಜಾಗತಿಕ
ತಾಪಮಾನ ಪರ್ವತ ಪ್ರದೇಶಗಳಲ್ಲಿನ ಹಿಮವನ್ನು ಕರಗಿಸುತ್ತದೆ. ಹೀಗೆ ಕರಗಿದ ಹಿಮ
ಸಮುದ್ರ, ಸಾಗರಗಳನ್ನು ಸೇರುವುದರಿಂದ ಅವುಗಳ ನೀರಿನ ಮಟ್ಟದಲ್ಲಿ ಏರಿಕೆಯಾಗುತ್ತದೆ.
ಕಳೆದ ೧೫೦ ವರ್ಷಗಳ ಅವಯಲ್ಲಿ ಕರಗಿದ ಮಂಜಿನಿಂದಾಗಿ ಬಹುತೇಕ ಪರ್ವತ ಪ್ರದೇಶಗಳ ಗಾತ್ರ
ಕಿರಿದಾಗಿದೆ. ಇದು ಹೀಗೆಯೇ ಮುಂದುವರಿದರೆ ೨೧೦೦ರ ವೇಳೆಗೆ ಬಹುತೇಕ ಹಿಮಪರ್ವತಗಳು
ಕರಗಿ ನೀರಾಗಲಿವೆ. ಮಂಜಿನ ಗಾತ್ರ ಕಿರಿದಾದರೆ ಮುಂದಿನ ದಿನಗಳಲ್ಲಿ ಬೇಸಿಗೆಯ
ಕಾಲದಲ್ಲಿ ನದಿಗಳಿಗೆ ಹರಿದು ಬರುವ ನೀರಿನ ಮೂಲ ಕಿರಿದಾಗುತ್ತದೆ. ಪರಿಣಾಮ ನದಿಗಳಲ್ಲಿ
ನೀರಿನ ಅಭಾವ ಕಂಡು ಬರಲಿದೆ.
ತಾಪಮಾನ ಏರಿಕೆಯಿಂದಾಗಿ ಕಳೆದ ೧೦೦ ವರ್ಷಗಳ ಅವಯಲ್ಲಿ ವಿಶ್ವದ ವಿವಿಧ ಸಮುದ್ರಗಳಲ್ಲಿನ
ನೀರಿನ ಮಟ್ಟದಲ್ಲಿ ೪-೧೦ ಇಂಚುಗಳಷ್ಟು, ಅಂದರೆ ೧೦-೨೫ ಸೆ. ಮೀ.ಗಳಷ್ಟು ಏರಿಕೆ ಕಂಡು
ಬಂದಿದೆ. ಇದು ಹೀಗೆಯೇ ಮುಂದುವರಿದರೆ ಮುಂದಿನ ೧೦೦ ವರ್ಷಗಳ ಅವಯಲ್ಲಿ ಸಮುದ್ರಗಳ
ನೀರಿನ ಮಟ್ಟದಲ್ಲಿ ೧೫-೯೨ ಸೆ.ಮೀ.ಗಳಷ್ಟು ಏರಿಕೆಯಾಗುವ ಸಾಧ್ಯತೆಯಿದೆ. ಸಮುದ್ರದ
ನೀರಿನ ಮಟ್ಟ ಒಂದು ಇಂಚು ಏರಿದರೆ ಅದರ ದಂಡೆಯ ಮೇಲಿನ ೫೦-೧೦೦ ಅಡಿಗಳಷ್ಟು ಪ್ರದೇಶ
ಮುಳುಗಡೆಯಾಗುವ ಸಂಭವವಿರುತ್ತದೆ.
ತಾಪಮಾನ ಹೆಚ್ಚಿದಂತೆ ಬರಗಾಲ ಬರುವ ಸಂಭವ ಹೆಚ್ಚು. ಅಲ್ಲದೇ, ಬರಗಾಲದ ತೀವ್ರತೆಯೂ
ಹೆಚ್ಚು. ದೀರ್ಘಕಾಲದ ಬರಗಾಲ ಕಾಡಿನ ಬೆಂಕಿಗೂ ಆಹ್ವಾನವೀಯುತ್ತದೆ. ಸಸ್ಯಗಳು,
ಬೆಳೆಗಳು ಕೀಟನಾಶಕಗಳ ಹಾವಳಿಗೆ ತುತ್ತಾಗುವ ಸಾಧ್ಯತೆಯೂ ಅಕ. ತಾಪಮಾನದ ಹೆಚ್ಚಳ
ನಿಧಾನವಾಗಿ ಭೂಮಿಯನ್ನು ಬರಡಾಗಿಸಲೂಬಹುದು.
ಬೆಚ್ಚನೆಯ ಹವೆ ಸೊಳ್ಳೆಗಳಿಗೆ ವರದಾನ. ಬೆಚ್ಚನೆಯ ವಾತಾವರಣ ಮಲೇರಿಯಾ, ಡೆಂಗೆ
ಜ್ವರಗಳನ್ನು ಹರಡುವ ಸೊಳ್ಳೆಗಳ ಕಾರ್‍ಯ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.
ಇದರಿಂದಾಗಿ ಮನುಜನನ್ನು ಕಚ್ಚುವ ಹಾಗೂ ರೋಗ ತರುವ ಅವುಗಳ ಸಾಮರ್ಥ್ಯ ಹೆಚ್ಚುತ್ತದೆ. ಆ
ಮೂಲಕ ಮಾನವನ ಅನಾರೋಗ್ಯಕ್ಕೆ, ಮಾರಣಾಂತಿಕ ಕಾಯಿಲೆಗಳ ಮೂಲಕ್ಕೆ ಕಾರಣವಾಗುತ್ತದೆ.
ವಿಶ್ವದ ಕೆಲವೆಡೆ ಈಗ ಬೇಸಿಗೆ ಕಾಲ ಬಹು ಬೇಗನೆ ಬರುತ್ತಿದೆ. ಹಳೆಯ ಎಲೆಗಳು ಉದುರಿ
ಹೊಸ ಚಿಗುರು ಬಿಡುವ, ಪ್ರಾಣಿಗಳು ಮೊಟ್ಟೆ ಇಡುವ, ಪಕ್ಷಿಗಳು ವಲಸೆ ಹೋಗುವ
ಪ್ರಕ್ರಿಯೆಗಳು ಈ ಬದಲಾವಣೆಯನ್ನು ಸೂಚಿಸುತ್ತಿವೆ. ಆದರೆ, ವಸಂತನ ಪೂರ್ವಾಗಮನ ಹಲವು
ಸಮಸ್ಯೆಗಳಿಗೆ ಕಾರಣವಾಗಬಹುದು. ಪಕ್ಷಿಗಳ ವಲಸೆ ಪದ್ಧತಿಯ ಮೇಲೆ ವ್ಯತಿರಿಕ್ತ ಪರಿಣಾಮ
ಬೀರಬಹುದು.
ಕೆಲವು ಪ್ರಾಣಿ, ಪಕ್ಷಿಗಳು ವಾತಾವರಣದ ಉಷ್ಣತೆಗೆ ತಮ್ಮದೇ ಆದ ಸಂವೇದನೆ
ವ್ಯಕ್ತಪಡಿಸುತ್ತವೆ. ಪ್ರಾಣಿಗಳು ಎತ್ತರದ ಪ್ರದೇಶ ಹಾಗೂ ಅಕ್ಷಾಂಶದೆಡೆಗೆ
ಚಲಿಸಲಾರಂಭಿಸುತ್ತವೆ. ಸಸ್ಯಗಳು ಅಕ ಉಷ್ಣತೆಯೆಡೆಗೆ ಹೊರಳುತ್ತವೆ. ಇತ್ತೀಚಿನ
ಅಧ್ಯಯನಗಳು ಹೇಳುವ ಪ್ರಕಾರ ಇವು ಈಗಾಗಲೇ ಅನುಕೂಲಕರ ವಾತಾವರಣ ನೋಡಿಕೊಂಡು ತಮ್ಮ
ಬದುಕಿನ ವ್ಯವಸ್ಥೆಗೆ ಸರಿಹೊಂದುವ ಪ್ರದೇಶಗಳತ್ತ ಹೊರಳುತ್ತಿವೆ. ಇದು ಮುಂದೊಂದು ದಿನ
ಪರಿಸರ ಅಸಮತೋಲನಕ್ಕೆ ಕಾರಣವಾಗಬಹುದು. ಒಂದು ವೇಳೆ ಭೂಮಿಯ ತಾಪಮಾನ ಕ್ಷಿಪ್ರಗತಿಯಲ್ಲಿ
ಏರಿದರೆ ಕೆಲವು ಪ್ರಾಣಿ ಹಾಗೂ ಸಸ್ಯ ಸಂತತಿಗಳು ಬೇಗ ನಾಶವಾಗುವ ಸಂಭವವನ್ನೂ
ಅಲ್ಲಗಳೆಯಲಾಗುತ್ತಿಲ್ಲ. ಅಕ ತಾಪಮಾನದಿಂದಾಗಿ ಅಕಾಲಿಕ ಮಳೆ ಸುರಿಯುವ ಸಾಧ್ಯತೆಗಳೂ
ನಿಚ್ಚಳವಾಗಿವೆ.
ಕಳೆದ ೨೦ ವರ್ಷಗಳ ಅವಯಲ್ಲಿ ಇಂಧನ ಮೂಲಗಳಿಂದ ಹೊರಬಂದ ತ್ಯಾಜ್ಯ, ಅವುಗಳ ಜೊತೆ ಹರಿದು
ಬಂದ ಇಂಗಾಲದ ಡೈ ಆಕ್ಸೈಡ್, ಸಮುದ್ರ, ಸಾಗರ ಹಾಗೂ ಅರಣ್ಯಗಳು ಅದನ್ನು ಹೀರಿಕೊಳ್ಳುವ
ಗತಿಗಳ ಕುರಿತು ವಿಜ್ಞಾನಿಗಳು ನಡೆಸಿದ ಅಧ್ಯಯನ ಹೇಳುವ ಪ್ರಕಾರ ತಾಪಮಾನ
ಏರಿಕೆಯಿಂದಾಗಿ ವಿಶ್ವದ ಕೆಲವೆಡೆ ಭೀಕರ ಕ್ಷಾಮ ಉಂಟಾಗಬಹುದು. ಇದರಿಂದಾಗಿ ಈಗಿರುವ
ಮಳೆಯ ಆವರ್ತನ ಪದ್ಧತಿಯೇ ಬದಲಾಗಬಹುದು.
ಈ ಶತಮಾನದ ಮಧ್ಯಭಾಗದ ವೇಳೆಗೆ ವಿಶ್ವದಲ್ಲಿ ಇನ್ನೂ ೨.೫ ಕೋಟಿ ಮಕ್ಕಳು ಆಹಾರ ದೊರಕದೆ
ಹಸಿವಿನಿಂದ ಬಳಲುತ್ತಾರೆ. ಹವಾಮಾನ ವೈಪರೀತ್ಯದ ಪರಿಣಾಮವಿದು. ಹವಾಮಾನ ವೈಪರೀತ್ಯ
ವಿಶ್ವದ ಹಲವೆಡೆ ಆಹಾರದ ಕೊರತೆಯನ್ನು ಉಂಟುಮಾಡಬಲ್ಲುದು ಎಂಬುದು ಈ ಕಳವಳಕ್ಕೆ ಕಾರಣ.
ಭಾರತವೂ ಹೊರತಲ್ಲ
ಭೂಮಿಯ ತಾಪಮಾನದಲ್ಲಿನ ಹೆಚ್ಚಳ ಭಾರತದ ಮೇಲೂ ದುಷ್ಪರಿಣಾಮ ಬೀರಬಲ್ಲುದು.
ಉಷ್ಣಹವೆಯಿಂದಾಗಿ ಹಿಮಾಲಯದ ಹಿಮ ಕರಗುವ ಸಾಧ್ಯತೆಯಿದೆ. ಇದು ಬಿಹಾರ, ಪಶ್ಚಿಮ ಬಂಗಾಳ,
ಅಸ್ಸಾಂ ಹಾಗೂ ಬಾಂಗ್ಲಾದೇಶಗಳಲ್ಲಿ ನೆರೆವಾಹಳಿಯನ್ನು ಸೃಷ್ಠಿಸಬಲ್ಲುದು.
ಮಂಜುಪ್ರವಾಹ ಸಕಾಲಕ್ಕೆ ಸಂಭವಿಸದಿದ್ದಲ್ಲಿ ಹವಾಮಾನದ ಮೇಲೆ ವ್ಯತಿರಿಕ್ತ ಪರಿಣಾಮ
ಬೀರುತ್ತದೆ. ಇದರಿಂದಾಗಿ ಏಷ್ಯಾ ವಲಯದಲ್ಲಿನ ಮಳೆಯ ಆವರ್ತನದಲ್ಲಿ ಬದಲಾವಣೆಯಾಗುವ
ಸಾಧ್ಯತೆಯಿದೆ. ಅಂದರೆ, ಭಾರತದಲ್ಲಿ ಅಲ್ಲದಿದ್ದರೂ, ಇತರೆಡೆ ಎಲ್ಲಿಯಾದರೂ ಇನ್ನಷ್ಟು
ಬರಗಾಲ ಉಂಟಾಗುವ ಸಾಧ್ಯತೆಯಿದೆ. ಆ ಮೂಲಕ ಆಹಾರ, ವಿದ್ಯುತ್ ಹಾಗೂ ನೀರಿನ ತೀವ್ರ
ಸಮಸ್ಯೆ ಜನತೆಯನ್ನು ಕಾಡಲಿದೆ.
ನಮ್ಮ ಕರ್ತವ್ಯ
ಈ ದುರಂತ ತಪ್ಪಿಸಲು ಇರುವ ಉತ್ತಮ ಮಾರ್ಗವೆಂದರೆ ಹಸಿರು ಪರಿಣಾಮ ಉಂಟು ಮಾಡುವ ಅನಿಲದ
ಹೊರಸೂಸುವಿಕೆಯನ್ನು ಆದಷ್ಟು ಕಡಿಮೆ ಮಾಡುವುದು.
ಈ ಭೂಮಿಯ ಮೇಲೆ ಅತ್ಯಕ ಪ್ರಮಾಣದಲ್ಲಿ ದೊರಕುವ ಅನಿಲಗಳ ಪೈಕಿ ಇಂಗಾಲವೂ ಒಂದು. ಭೂಮಿಯ
ಎಲ್ಲಾ ಸ್ತರಗಳಲ್ಲಿಯೂ ಹಾಸು ಹೊಕ್ಕಾಗಿರುವ ಇಂಗಾಲ ಜೀವಿಗಳ ಉಳಿವಿಗೆ ಅತ್ಯಗತ್ಯ.
ಇಂಧನದ ದಹನ ಹಾಗೂ ಇನ್ನಿತರ ಚಟುವಟಿಕೆಗಳ ವೇಳೆ ಇಂಗಾಲದ ಡೈ ಆಕ್ಸೈಡ್ ವಾತಾವರಣಕ್ಕೆ
ಬಿಡುಗಡೆಯಾಗುತ್ತದೆ. ಇದು ಸಾಗರದ ನೀರಿನಲ್ಲಿ ಕರಗುತ್ತದೆ. ಸಸ್ಯಗಳು
ಹೀರಿಕೊಳ್ಳುತ್ತವೆ. ಪ್ರಾಣಿಗಳಿಂದ ಸಸ್ಯಗಳಿಗೆ, ಸಸ್ಯಗಳಿಂದ ಪ್ರಾಣಿಗಳಿಗೆ, ಪ್ರಾಣಿ,
ಪಕ್ಷಿ, ಸಸ್ಯಗಳಿಂದ ವಾತಾವರಣಕ್ಕೆ, ವಾತಾವರಣದಿಂದ ಪ್ರಾಣಿ, ಪಕ್ಷಿ, ಸಸ್ಯಗಳಿಗೆ,
ಜೀವಿಗಳಿಂದ ಸಾಗರಕ್ಕೆ, ಸಾಗರದಿಂದ ಜೀವಿಗಳಿಗೆ...ಹೀಗೆ ನಿರಂತರ ಇಂಗಾಲದ
ಆವರ್ತನೆಯಾಗುತ್ತಿರುತ್ತದೆ.
ಈ ಇಂಗಾಲದ ಚಕ್ರ ಸಮನಾಗಿ ತಿರುಗುತ್ತಿದ್ದರೆ ತೊಂದರೆ ಇಲ್ಲ. ವಾತಾವರಣದಲ್ಲಿನ ಇಂಗಾಲದ
ಪ್ರಮಾಣದಲ್ಲಿ ಹೆಚ್ಚು, ಕಡಿಮೆಯಾದರೆ ತೊಂದರೆ ನಿಶ್ಚಿತ. ಕಾರಣ ಇಂಗಾಲಕ್ಕೆ ವಾತಾವರಣದ
ಉಷ್ಣತೆಯನ್ನು ಹೀರಿಕೊಳ್ಳುವ ಗುಣವಿದೆ. ಸೂರ್ಯನಿಂದ ಬರುವ ಕಿರಣಗಳು ಭೂಮಿಯನ್ನು
ತಲುಪಿ, ಪ್ರತಿಫಲನಗೊಂಡು ತಿರುಗಿ ಆಕಾಶದತ್ತ ಸಾಗುತ್ತವೆ. ಆದರೆ, ವಾತಾವರಣದಲ್ಲಿ
ಇಂಗಾಲ ಜಾಸ್ತಿಯಾದರೆ ಅದು ಈ ಉಷ್ಣತೆಯನ್ನು ಹೀರಿಕೊಳ್ಳುತ್ತದೆ. ಆ ಮೂಲಕ ವಾತಾವರಣದ
ಉಷ್ಣತೆ ಹೆಚ್ಚುತ್ತದೆ.
ಭೂಮಿಯ ತಾಪಮಾನ ಏರಿಕೆಗೆ ಕಾರಣವಾಗುವ ಇಂಗಾಲದ ಡೈ ಆಕ್ಸೈಡ್, ಮಿಥೇನ್, ನೈಟ್ರಸ್
ಆಕ್ಸೈಡ್, ಪ್ಲ್ಯೂರೋಕಾರ್ಬನ್ಸ್‌ಗಳನ್ನು ಹಸಿರು ಪರಿಣಾಮ ಉಂಟು ಮಾಡುವ ಅನಿಲಗಳು ಎಂದು
ಕರೆಯಲಾಗುತ್ತದೆ.
ಆಕಸ್ಮಿಕವಾಗಿ, ಕೆಲವು ಸಲ ದುರುದ್ದೇಶಗಳಿಂದಾಗಿ ಬೀಳುವ ಬೆಂಕಿ ಕಾಡಿನ ಅಮೂಲ್ಯ
ಸಂಪತ್ತನ್ನು ನಾಶ ಮಾಡಿ ಬಿಡುತ್ತದೆ. ನೋಡ, ನೋಡುತ್ತಿದ್ದಂತೆಯೇ ಅಪಾರ ಪ್ರಮಾಣದ ಸಸ್ಯ
ಸಂಪತ್ತು ಉರಿದು ಬೂದಿಯಾಗುತ್ತದೆ. ಸಸ್ಯ ಸಂಪತ್ತು ಉರಿದು ಬೀಳುವಾಗ ಅಪಾರ ಪ್ರಮಾಣದ
ಇಂಗಾಲದ ಡೈ ಆಕ್ಸೈಡ್ ವಾತಾವರಣಕ್ಕೆ ಬಿಡುಗಡೆಯಾಗುತ್ತದೆ. ಇದರ ಜೊತೆ ವಿಷಕಾರಕ
ಅನಿಲಗಳೂ ಸೇರಿರುತ್ತವೆ. ಇದು ಸುತ್ತಲ ವಾತಾವರಣದಲ್ಲಿ ತಾಪಮಾನ ಏರಿಕೆಗೆ
ಕಾರಣವಾಗುತ್ತದೆ.
ಅರಣ್ಯಗಳು ವಾತಾವರಣದಲ್ಲಿನ ಇಂಗಾಲದ ಡೈ ಆಕ್ಸೈಡ್‌ನ್ನು ಹೀರಿಕೊಂಡು ಪರಿಸರ ಸಮತೋಲನ
ಉಂಟು ಮಾಡಬಲ್ಲವು. ಮಾತ್ರವಲ್ಲ, ಇತರ ಅಪಾಯಕಾರಿ ಅನಿಲಗಳನ್ನೂ ನಾಶಮಾಡುವ ಸಾಮರ್ಥ್ಯ
ಪಡೆದಿವೆ. ಓಝೋನ್ ಪದರದ ನಾಶಕ್ಕೆ ಮೂಲವಾಗುವ, ಆ ಮೂಲಕ ಜಾಗತಿಕ ತಾಪಮಾನ ಹೆಚ್ಚಳಕ್ಕೆ
ಕಾರಣವಾಗುವ, ಮಾನವನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಇಂಗಾಲದ ಮಾನಾಕ್ಸೈಡ್
ಪ್ರಮಾಣವನ್ನು ವಾತಾವರಣದಲ್ಲಿ ಕಡಿಮೆ ಮಾಡಲು ಅರಣ್ಯಗಳು ಸಹಕಾರಿ.
ನಾಡ ತಂಪಾಗಿಸೋಣ
ಭೂಮಿಯ ತಾಪಮಾನ ಏರಿಕೆಗೆ ನಮ್ಮೆಲ್ಲರ ಕಾಣಿಕೆಯೂ ಸಾಕಷ್ಟಿದೆ. ನಮ್ಮ ದೈನಂದಿನ
ಚಟುವಟಿಕೆಗಳು, ಅದರಿಂದ ಹೊರಸೂಸುವ ತ್ಯಾಜ್ಯ ತಾಪಮಾನ ಏರಿಕೆಗೆ ಒಂದು ಕಾರಣ. ಹನಿ,
ಹನಿ ನೀರು ಸೇರಿ ದೊಡ್ಡ ಸಮುದ್ರವಾಗುವಂತೆ, ನಾವು ಮತ್ತೊಬ್ಬರ ಮೇಲೆ ತೋರುವ ತುಸು
ಪ್ರೀತಿ ಈ ಭೂಮಿಯನ್ನೇ ಸ್ವರ್ಗವಾಗಿಸುವಂತೆ ನಮ್ಮೆಲ್ಲರ ತುಸು ಪ್ರಯತ್ನ ಈ ಭೂಮಿಯನ್ನು
ತಂಪಾಗಿಸಿ, ನಮ್ಮೆಲ್ಲರ ಬದುಕನ್ನು ಆನಂದಮಯವಾಗಿಸಬಹುದು. ದೊಡ್ಡದೊಂದು ಸಂಕಷ್ಟದಿಂದ
ಪಾರು ಮಾಡಬಹುದು.
ನಾವು ಮನಸ್ಸು ಮಾಡಿದರೆ ತಾಪಮಾನ ಏರಿಕೆಗೆ ಕಾರಣವಾಗುತ್ತಿರುವ ಅನಿಲಗಳ
ಹೊರಸೂಸುವಿಕೆಯನ್ನು ತಡೆಯಲು ಕ್ರಮ ಕೈಗೊಳ್ಳಬಹುದು. ಈ ನಿಟ್ಟಿನಲ್ಲಿ ನಮ್ಮ
ಜೀವನಕ್ರಮವನ್ನು ಬದಲಾಯಿಸಿಕೊಳ್ಳಬಹುದು.
* ಬಳಸಿ ಬೀಸಾಡುವ ಅದೆಷ್ಟೋ ಪದಾರ್ಥಗಳನ್ನು ಮರುಬಳಕೆ ಮಾಡಿಕೊಳ್ಳಬಹುದು.
ಅಲ್ಯುಮೀನಿಯಂ ಕ್ಯಾನ್‌ಗಳು, ಪ್ಲಾಸ್ಟಿಕ್‌ಗಳು, ಗಾಜು, ಕಾಗದ, ಸುದ್ದಿಪತ್ರಿಕೆಗಳು
ಮುಂತಾದುವನ್ನು ಬಳಸಿ ಬೀಸಾಡುತ್ತೇವೆ. ಅದರ ಬದಲು ಇವುಗಳ ಮರುಬಳಕೆ ಮಾಡಿಕೊಳ್ಳಬಹುದು.
ನಮ್ಮ ಮನೆಯಲ್ಲಿ ಬಳಸಿ ಬೀಸಾಡುವ ಕೆಲವು ವಸ್ತುಗಳನ್ನಾದರೂ ಪುನರ್ ಬಳಸಿಕೊಂಡರೆ ಅದು
ಆರ್ಥಿಕವಾಗಿಯೂ ಅನುಕೂಲ. ಸುತ್ತಲ ಪರಿಸರಕ್ಕೂ ಸಹಕಾರಿ.
* ಕಚೇರಿಗಳಲ್ಲಿ, ಮನೆಗಳಲ್ಲಿ ಹವಾನಿಯಂತ್ರಿತ ವ್ಯವಸ್ಥೆಯ ಬಳಕೆಯಲ್ಲಿ ಸಾಕಷ್ಟು ಕಡಿತ
ಮಾಡಬಹುದು. ಬೇಸಿಗೆಯ ಕಾಲದಲ್ಲಿ ಬಿಸಿಲ ಝಳದಿಂದ ರಕ್ಷಿಸಿಕೊಳ್ಳಲು ಹವಾನಿಯಂತ್ರಿತ
ವ್ಯವಸ್ಥೆ ನಮಗೆ ಅನಿವಾರ್‍ಯ. ಆದರೆ, ಮಳೆಗಾಲ, ಚಳಿಗಾಲಗಳಲ್ಲಿ ಇದರ ಬಳಕೆಯನ್ನು
ಕಡಿಮೆ ಮಾಡಬಹುದು.
ಇದರ ಜೊತೆ ವಿದ್ಯುತ್ ಬಳಕೆಯಲ್ಲೂ ಕಡಿತ ಮಾಡಬಹುದು. ರಾತ್ರಿ ಹೊತ್ತು ಮಲಗುವಾಗಲೂ
ವಿದ್ಯುತ್ ದೀಪ ಆರಿಸುವುದನ್ನು ಹಲವರು ಮರೆಯುತ್ತಾರೆ. ಹಗಲು ಹೊತ್ತಿನಲ್ಲೂ ದೀಪ
ಉರಿಸುವುದನ್ನು ಹಲವು ಮನೆಗಳಲ್ಲಿ, ಕಚೇರಿಗಳಲ್ಲಿ ನಾವು ಕಾಣುತ್ತೇವೆ.
ಥರ್ಮೊಸ್ಟ್ಯಾಟ್‌ನ್ನು ಚಳಿಗಾಲದಲ್ಲಿ ೨ ಡಿಗ್ರಿ ತಗ್ಗಿಸಿ. ಇದರಿಂದಾಗಿ ವರ್ಷಕ್ಕೆ
ಸುಮಾರು ೨ ಸಾವಿರ ಪೌಂಡ್ ಇಂಗಾಲದ ಡೈ ಆಕ್ಸೈಡ್ ವಾತಾವರಣಕ್ಕೆ ಬಿಡುಗಡೆಯಾಗುವುದನ್ನು
ತಪ್ಪಿಸಬಹುದು. ಅಷ್ಟಕ್ಕೂ ಈ ನಿಸರ್ಗಕ್ಕಿಂತ ಉತ್ತಮ ಹವಾನಿಯಂತ್ರಕ ವ್ಯವಸ್ಥೆ ಬೇಕೆ?
ಹವಾನಿಯಂತ್ರಿತ ಕೊಠಡಿಯಲ್ಲಿ ಕುಳಿತು ಕಾಲ ಕಳೆಯುವ ಬದಲು ಸ್ವಲ್ಪ ಹೊತ್ತು ಹೊರಗಡೆ
ನಿಸರ್ಗದಲ್ಲಿ ಓಡಾಡಿ. ಪ್ರಕೃತಿಯ ಸೌಂದರ್‍ಯ ಆಸ್ವಾದಿಸಿ.
* ಕಾಂಪ್ಯಾಕ್ಟ್ ಪ್ಲುರೋಸೆಂಟ್ ಲೈಟ್ ಬಲ್ಬ್‌ಗಳನ್ನು ಬಳಸಿ. ಮಾಮೂಲಿ ಬಲ್ಬ್ ಬದಲಿಗೆ
ಕಾಂಪ್ಯಾಕ್ಟ್ ಪ್ಲುರೋಸೆಂಟ್ ಲೈಟ್ ಬಲ್ಬ್‌ನ್ನು ಬಳಸಿದರೆ ಅದರ ಜೀವಿತಾವಯಲ್ಲಿ ಅದು
ಸುಮಾರು ೧,೫೦೦ ರೂ.ಗಳನ್ನು ಉಳಿಸಬಲ್ಲದು. ಈ ಬಲ್ಬ್‌ನ ಕಾರ್‍ಯ ಸಾಮರ್ಥ್ಯ ಸಾಧಾರಣ
ಬಲ್ಬ್‌ಗಿಂತ ಅಕ. ಅಲ್ಲದೆ, ಇದರಿಂದ ಹಸಿರು ಗಾಜಿನ ಪರಿಣಾಮ ಬೀರುವ ಅನಿಲಗಳ
ಹೊರಸೂಸುವಿಕೆಯನ್ನು ಕಡಿಮೆ ಮಾಡಬಹುದು.
* ನಮ್ಮಲ್ಲಿ ಕೆಲವರಿಗೆ ಸ್ವಲ್ಪ ದೂರ ಅಡ್ಡಾಡುವುದಕ್ಕೂ ವಾಹನವೇ ಬೇಕು. ಈ
ದೊಡ್ಡಸ್ಥಿಕೆ ಬೇಡ. ಸ್ವಲ್ಪ ದೂರ ನಡೆದರೆ ಅದು ಆರೋಗ್ಯಕ್ಕೂ ಒಳ್ಳೆಯದು. ಜೊತೆಗೆ
ಒಂದಿಷ್ಟು ಪೆಟ್ರೋಲ್ ಉಳಿಸಬಹುದು. ಇದರ ಜೊತೆಗೆ ವೈಯಕ್ತಿಕವಾಗಿ ವಾಹನ ಬಳಕೆ
ಮಾಡುವುದಕ್ಕಿಂತ ಸಾಮೂಹಿಕ ಸಾರಿಗೆ ವ್ಯವಸ್ಥೆಯ ಮೇಲೆ ಹೆಚ್ಚು ಅವಲಂಬಿತರಾಗಿ.
ಕಾರು, ಬೈಕ್, ಇತರ ವಾಹನಗಳನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳಿ. ಹಾಳಾದ, ಸವಕಲಾದ
ಟೈರ್‌ಗಳ ಬಳಕೆ ಬೇಡ. ಪ್ರತಿ ಸಲ ಈ ಟೈರ್‌ಗಳಿಗೆ ಗಾಳಿ ತುಂಬಿಸುವಾಗ ಇಂಗಾಲದ ಡೈ
ಆಕ್ಸೈಡ್ ವಾತಾವರಣಕ್ಕೆ ಬಿಡುಗಡೆಯಾಗುತ್ತದೆ. ಒಂದು ಗ್ಯಾಲನ್ ಗ್ಯಾಸ್ ಉಳಿಸಿದರೆ
ಸುಮಾರು ೨೦ ಪೌಂಡ್‌ಗಳಷ್ಟು ಇಂಗಾಲದ ಡೈ ಆಕ್ಸೈಡ್ ಹೊರಸೂಸುವಿಕೆ ತಡೆಯಬಹುದು.
* ಮೋಲ್ಡ್ ಪ್ಲಾಸ್ಟಿಕ್ ಹಾಗೂ ಇತರ ಪ್ಯಾಕ್ ಮಾಡಿದ ಪದಾರ್ಥಗಳ ಬಳಕೆಯನ್ನು ಆದಷ್ಟು
ಕಡಿಮೆ ಮಾಡಿ. ಮನೆಯಲ್ಲಿ ದಿನಬಳಕೆ ವಸ್ತುಗಳ ಮೇಲಿನ ತ್ಯಾಜ್ಯವನ್ನು ಶೇ. ೧೦ರಷ್ಟು
ಕಡಿಮೆ ಮಾಡಿದರೆ ವಾರ್ಷಿಕ ೧,೨೦೦ ಪೌಂಡ್‌ಗಳಷ್ಟು ಇಂಗಾಲದ ಡೈ ಆಕ್ಸೈಡ್ ಹೊರಸೂಸುವಿಕೆ
ತಡೆಗಟ್ಟಬಹುದು.
* ಕುದಿಯುವ ನೀರಿನ ಬಳಕೆ ಕಡಿಮೆ ಮಾಡಿ. ತುಂಬಾ ಬಿಸಿ ಮಾಡಿ, ನಂತರ ಅದನ್ನು ತಣಿಸಿ
ಕುಡಿಯುವುದಕ್ಕಿಂತ ಬೆಚ್ಚನೆಯ ಉಷ್ಣತೆಯವರೆಗೆ ಮಾತ್ರ ನೀರನ್ನು ಬಿಸಿ ಮಾಡಿದರೆ ಅಷ್ಟರ
ಮಟ್ಟಿನ ಇಂಧನ ಉಳಿಸಬಹುದು. ಬಟ್ಟೆ ತೊಳೆಯಲೂ ಕೆಲವರು ಬಿಸಿ ನೀರನ್ನು ಬಳಸುತ್ತಾರೆ.
ಇದರ ಬದಲು ತಣ್ಣನೆಯ ನೀರನ್ನು ಇಲ್ಲವೇ ಬೆಚ್ಚಗಿನ ನೀರನ್ನು ಬಳಸಬಹುದು.
* ಮನೆಯಿಂದ ಹೊರಹೋಗುವಾಗ ವಿದ್ಯುತ್ ದೀಪಗಳನ್ನು ಕಡ್ಡಾಯವಾಗಿ ಆರಿಸಿ ಹೋಗಿ. ಬಳಕೆ
ಮಾಡದೇ ಇರುವಾಗ ಟಿವಿ, ವಿಡಿಯೋ, ಸ್ಟಿರಿಯೊ, ಕಂಪ್ಯೂಟರ್‌ಗಳನ್ನು ಸಂಪೂರ್ಣ ‘ಆಫ್’
ಮಾಡಬಹುದು. ಇವುಗಳನ್ನು ‘ಆನ್’ ಸ್ಥಿತಿಯಲ್ಲಿ ಇಡುವುದು ಒಳಿತಲ್ಲ.
* ನಿಮ್ಮ ಮನೆಯ ಅಂಗಳದಲ್ಲಿ ಗಿಡಗಳನ್ನು ಬೆಳೆಸುವ ಅಭ್ಯಾಸ ರೂಢಿಸಿಕೊಳ್ಳಿ. ಆ ಮೂಲಕ
ವಾತಾವರಣದಲ್ಲಿನ ಇಂಗಾಲದ ಡೈ ಆಕ್ಸೈಡ್‌ನ್ನು ಹೀರಿಕೊಳ್ಳಲು ಅವಕಾಶ ಮಾಡಿಕೊಡಿ.
ಮರವೊಂದು ಅದರ ಜೀವಿತಾವಯಲ್ಲಿ ಸರಿ ಸುಮಾರು ೧ ಟನ್‌ನಷ್ಟು ಇಂಗಾಲದ ಡೈ ಆಕ್ಸೈಡ್
ಹೀರಿಕೊಳ್ಳಬಹುದು ಎಂಬ ಅಂಶ ನಿಮ್ಮ ಗಮನದಲ್ಲಿರಲಿ.
ಈ ಎಲ್ಲಾ ಸಂಗತಿಗಳ ಬಗ್ಗೆ ನಿಮ್ಮ ಸ್ನೇಹಿತರಲ್ಲಿ, ನೆರೆ-ಹೊರೆಯವರಲ್ಲಿ, ಸಂಬಂಕರಲ್ಲಿ
ಮಾಹಿತಿ ವಿನಿಮಯ ಮಾಡಿಕೊಳ್ಳಿ. ಪರಿಸರ ಸ್ನೇಹಿ ಚಟುವಟಿಕೆಗಳ ಬಗ್ಗೆ ಅವರಿಗೆ ಮನವರಿಕೆ
ಮಾಡಿಕೊಡಿ. ಈ ದಿಸೆಯತ್ತ ಅವರನ್ನು ಪ್ರೇರೇಪಿಸಿ. ಉತ್ತಮ ಬದುಕಿಗೆ ದಾರಿ
ಮಾಡಿಕೊಳ್ಳಿ.

ಮಹಾಬಲೇಶ್ವರ ಹೊನ್ನೆಮಡಿಕೆ

0 comments:

Post a Comment