ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಪ್ರಾದೇಶಿಕ ಸುದ್ದಿ
ಮೇ 5-6ರಂದು ನೇಮೋತ್ಸವ

ಮಂಗಳೂರು: ಗಟ್ಟಿಸಮಾಜದ ಕೈಯರಣ್ಣ ಕುಟುಂಬದ ಕಲ್ಲಂಗಡಿ ಹೊಸಮನೆ (ಚೌಕಿ)ಯಲ್ಲಿ ಶ್ರೀ ಐವರು ಪರಮಾತ್ಮ ದೈವಗಳ `ಧರ್ಮನೇಮೋತ್ಸವ' ಕಾರ್ಯಕ್ರಮ ಮೇ 5ಮತ್ತು 6ರಂದು ನಡೆಯಲಿದೆ. ಕಾರಣೀಕ ಹಾಗೂ ಪ್ರಸಿದ್ಧಿ ಪಡೆದ ಈ ಐವರು ಪರಮಾತ್ಮದೈವಗಳ ನೇಮೋತ್ಸವಾದಿ ಕಾರ್ಯಗಳಿಗೆ ಈಗಾಗಲೇ ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ. `ದೇಹೀ ಎಂದವನಿಗೆ ನಾಸ್ತಿ' ಎನ್ನದೆ ತನ್ನ ಕಾರಣೀಕ ಮಹಿಮೆಗಳಿಂದ ಪ್ರಸಿದ್ಧಿ ಪಡೆದ ಈ `ಶ್ರೀ ಐವರು ಪರಮಾತ್ಮ ದೈವೀ' ಸಾನಿಧ್ಯದಲ್ಲಿ ಪ್ರತೀ ಐದು ವರುಷಗಳಿಗೊಮ್ಮೆ `ಧರ್ಮನೇಮೋತ್ಸವ' ನಡೆಯುತ್ತದೆ.
ದೀಪಾವಳಿ ಹಾಗೂ ಆಷಾಢಮಾಸದಲ್ಲಿ ಉತ್ಸವಗಳು ಈ ಕ್ಷೇತ್ರದಲ್ಲಿ ನಡೆಯುತ್ತಿದ್ದು ದೀಪಾವಳಿಯ ನಾಗಬಲಿ ತಂಬಲ , ಬೊಂಡಾಭಿಷೇಕ ಸೇವೆಗಳು ಹಾಗೂ ಆಷಾಢ ಮಾಸದ ಅಭಿಷೇಕ, ಗುಳಿಗ ಕೋಲಗಳಿಗೆ ಬಹುಸಂಖ್ಯೆಯಲ್ಲಿ ಭಕ್ತಾಧಿಗಳು ಪಾಲ್ಗೊಳ್ಳುತ್ತಿರುವುದು ಈ ಕ್ಷೇತ್ರದ ಕಾರಣೀಕಗಳಿಗೆ ಸಾಕ್ಷಿ.
ಮೇ. 5 ರಂದು ಬೆಳಗ್ಗೆ 11ಗಂಟೆಗೆ ಶ್ರೀ ವೆಂಕಟರಮಣ ದೇವರ ಸೇವೆ ಹಾಗೂ ಅನ್ನ ಸಂತರ್ಪಣೆ, ರಾತ್ರಿ 7ಕ್ಕೆ ಭಂಡಾರ ಪ್ರವೇಶ, ರಾತ್ರಿ 8ರಿಂದ 10ರ ತನಕ ಕೊರತಿ , ಕಾಡೆತ್ತಿ ಗುಳಿಗ ದೈವಗಳ ಕೋಲ, ರಾತ್ರಿ 10ರಿಂದ ಅನ್ನ ಸಂತರ್ಪಣೆ ಕಾರ್ಯಕ್ರಮ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ರಾತ್ರಿ 7.30ಕ್ಕೆ ತುಳುನಾಡ ಐಸಿರಿ ಹಾಗೂ ತಮಾಷೋ ಫ್ಯಾಕ್ಟ್ರಿ ಕಾರ್ಯಕ್ರಮ ನಡೆಯಲಿದೆ.
ಮೇ 6ರಂದು ಬೆಳಗ್ಗೆ 4ಕ್ಕೆ ಬಬ್ಬರ್ಯ ದೈವದ ಕೋಲ, 9ಕ್ಕೆ ಧೂಮಾವತೀ , ವಿಷ್ಣುಮೂರ್ತಿ ದೈವಗಳ ಕೋಲ, ಮಧ್ಯಾಹ್ನ 1ಕ್ಕೆ ಅನ್ನಸಂತರ್ಪಣೆ, ಸಂಜೆ 4ಕ್ಕೆ ಭಂಡಾರ ನಿರ್ಗಮನ, ರಾತ್ರಿ 8ಕ್ಕೆ ಪಳ್ಳತ ಮುದ್ದ ದೈವದ ಕೋಲ ನಡೆಯಲಿದೆ. 8.30ರಿಂದ ವಿಸ್ಮಯ ಜಾದೂ ಪ್ರದರ್ಶನ ನಡೆಯಲಿದೆ.

0 comments:

Post a Comment