ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಕವನ


ಕೆಂಪು ಮೂಗಿನ ಗಿಣಿಯೆ
ಅವಿತ್ತಿದಿಯೇಕೆ ಪೋಟರೆಯೊಳಗೆ
ನಿನ್ನ ಕೆಂಪು ನಾಸಿಕದ ನೇರ
ಕಾಣುವ ಕೆಂಪಷ್ಟೇ ಜಗವಲ್ಲ
ನಭದ ನೀಲಿ ಭುವಿಯ ಹಸಿರು
ಸಾಗರದ ತುಂಬೆಲ್ಲ ನೀಲ ಜಲರಾಶಿ
ಏಕೆ ಕಾಣಲೋಲ್ಲೇ ಕೆಂಪು ಮೂಗಿನ ಗಿಣಿಯೆ
ಬಾನಂಗನದ ತುಂಬೆಲ್ಲ ಗರಿ ಬಿಚ್ಚಿ
ಬಾನಾಡಿಯಾಗಿ ಹಾರಾದಲೊಲ್ಲೆ ಏಕೆ
ಕೆಂಪಿಹುದು ಒಂದಿನಿತು
ಹಸಿರಿಹುದು ಅನಂತ
ಕಣ್ಬಿಟ್ಟು ನೋಡು ಬಾ ನಿನ್ನ ಕಾಯವೇ ಹಸಿರು
ಸಂಗಾತಿಯೋದಗೂಡಿ ಹಾರಾಡು ಬಾ ಬಾನಾಡಿ
ಹಾರಾಡು ಪೊಟರೆಯ ಒಳ ಹೊರಗೂ
ಮುದ್ದಿನ ಮರಿಗಲೋದಗೂದಿ
ಕೆಂಪು ಮೂಗಿನ ಗಿಣಿಯೆ
ಬದುಕಿಹುದು ನಾಕು ಚಣ
ಇನ್ನೆತಕೀ ಕ್ಷಣ ಗಣನ
ಇಂದು ಇಂದಿಹುದು
ನಾಳೆ ಬಲ್ಲವರಾರು
ವಿಶಾಖ

0 comments:

Post a Comment