ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಪ್ರಾದೇಶಿಕ ಸುದ್ದಿ

ಮುಲ್ಕಿ: ಸರಕಾರಿ ನಿಯಮಗಳನ್ನು ಗಾಳಿಗೆ ತೂರಿ ಪರವಾನಿಗೆ ರಹಿತವಾಗಿ ಯಾವುದೇ ರಕ್ಷಣಾ ಕ್ರಮಗಳನ್ನು ಬಳಸದೆ ಕಪ್ಪು ಕಲ್ಲಿನ ಕೋರೆಯಲ್ಲಿ ಸ್ಪೋಟಕಗಳನ್ನು ಉಪಯೋಗಿಸಿ ಪರಿಸರದ ನಾಗರೀಕರ ನೆಮ್ಮದಿಯನ್ನು ಹಾಳುಮಾಡುತ್ತಿದ್ದ ಕೋರೆ ಮಾಲಿಕ ಮತ್ತು ಸ್ಪೋಟಕ ತಜ್ಞನನ್ನು ಮೂಲ್ಕಿ ಪೋಲೀಸರು ಬಂಧಿಸಿದ್ದಾರೆ.ಉಳೆಪಾಡಿ ಗ್ರಾಮದಲ್ಲಿ ಕಪ್ಪು ಕಲ್ಲಿನ ಕೋರೆ ನಡೆಸುತ್ತಿದ್ದ ಸಂದೀಪ್ ಮತ್ತು ಸ್ಪೋಟ ನಡೆಸುತ್ತಿದ್ದ ಪದ್ಮನಾಭ ಬಂದಿತ ವ್ಯಕ್ತಿಗಳಾಗಿದ್ದಾರೆ.

ಕಳೆದ ಹಲವು ಸಮಯದಿಂದ ನಾಗರೀಕರು ಮತ್ತು ಕೋರೆ ಮಾಲಿಕರ ವಿರುದ್ದ ದೂರು ನೀಡುತ್ತಾ ಬಂದಿದ್ದರು. ನಂತರದ ಬೆಳವಣಿಗೆಯಲ್ಲಿ ಕೋರೆ ನಡೆಸಬಹುದು ಆದರೆ ಯಾವುದೇ ತೀವ್ರವಾದ ಸ್ಪೋಟ ನಡೆಸಬಾರದು ಎಂಬ ಶರತ್ತಿನಲ್ಲಿ ಕೋರೆ ನಡೆಸಲು ಗಣಿ ಇಲಾಖೆ ಅನುಮತಿ ನೀಡಿತ್ತು ಉಳಿದ ಎರಡು ಕೋರೆಯ ಮಾಲಿಕರು ಶರತ್ತು ಪಾಲಿಸಿ ಸ್ಪೋಟ ನಿಲ್ಲಿಸಿದ್ದರು.

ಸಂದೀಪ್ ಅವರ ಕೋರೆಯಲ್ಲಿ ತೀವ್ರ ಸ್ಪೋಟಗಳು ನಡೆಯುತ್ತಿರುವ ಹಿನ್ನಲೆಯಲ್ಲಿ ಅಲ್ಲಿನ ಕೃಷ್ಣ ಎಂಬವರ ದೂರಿನ ಮೇರೆಗೆ ಮೂಲ್ಕಿ ಪೋಲೀಸರು ಕಾದು ಸ್ಪೋಟ ಸಂಭವಿಸಿದ ಬಳಿಕ ಅದರ ತೀವ್ರತೆಯನ್ನು ಗಮನಿಸಿ ಕಾರ್ಯಾಚರಣೆ ನಡೆಸಿದ್ದಾರೆ ಈಸಂದರ್ಭ 1ಲಾರಿ ಮತ್ತು ಸ್ಪೋಟಕ್ಕಾಗಿ ಅಕ್ರಮ ದಾಸ್ತಾನು ಇರಿಸಿದ ಸ್ಪೋಟಕ ಉಪ್ಪು (ಅಮೋನಿಯಂ ನೈಟ್ರೇಟ್) ಮತ್ತು ಸ್ಪೋಟಕ್ಕಾಗಿ ಉಪಯೋಗಿಸಿದ ವಯರುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

0 comments:

Post a Comment