ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
6:23 PM

ನನ್ನ ಅಜ್ಜಿಯ ಮನೆ

Posted by ekanasu

ಸಾಹಿತ್ಯ


ಅಲ್ಲೊಂದು ಮನೆಯಿತ್ತು, ಅಲ್ಲಿ ಪ್ರೀತಿಯ ಮೊಗೆತವಿತ್ತು
ಆದರೆ ಈಗ ಅವಳಿಲ್ಲ; ಅಜ್ಜಿಲ್ಲ
ಮನೆ ಮೌನದ ಚಿಪ್ಪೊಳಗೆ
ಹಾವು ಸರಿದಾಡಿತ್ತು ಪುಸ್ತಕದ ಇಕ್ಕೆಲಗಳಲ್ಲಿ
ನಾನು ಓದಿಲ್ಲ;ಕಾರಣ ನಾನು ಚಿಕ್ಕವಳು
ಆದರೆ,
ಚಂದ್ರನಂತೆ ಹೆಪ್ಪುಗಟ್ಟಿತ್ತು ನನ್ನ ರಕ್ತ

ಅಪರೂಪಕ್ಕೊಮ್ಮೆ ಅಲ್ಲಿ ಹೋಗುವ
ಕನಸ ಕಾಣುತ್ತೇನೆ

ಕಿಟಕಿಯಾಚೆಯ ಕತ್ತಲೆಯ ಕಣ್ಣುಗಳಲ್ಲಿ
ತಂಪಾದ ಗಾಳಿಯಲ್ಲಿ
ತೇಲಿ ಹೋಗುತ್ತೇನೆ
ಯಾವುದೇ ಬಲವಾದ ಹಂಬಲವಿಲ್ಲದೆ
ಬೊಗಸೆ ತುಂಬಾ ಕತ್ತಲೆಯನ್ನು
ಹೊತ್ತು ತರುತ್ತೇನೆ.
ನನ್ನ ಶಯ್ಯೆಯ ಬಾಗಿಲಲ್ಲಿ
ತನ್ನ ಗುಣವನ್ನು
ಮರೆತ ನಾಯಿಯಂತೆ ಕಾಯುತ್ತೇನೆ.

ಗೆಳೆಯ, ನೀನು ನಂಬಲಿಕಿಲ್ಲ
ನಾನು ಹಿಂದೊಮ್ಮೆ ಬದುಕಿದ್ದೆ ಆ ಮನೆಯಲ್ಲಿ
ಹೆಮ್ಮೆಯಿಂದ ಪ್ರೀತಿಯಿಂದ
ನಾನು,

ಎಲ್ಲ ಕಳಕೊಂಡೆ, ಕೊನೆಗೆ ನನ್ನನ್ನೂ
ಇಂದು ಬೇಡುತ್ತಿದ್ದೇನೆ.
ನಿನ್ನನ್ನು; ಅಪರಿಚಿತರನ್ನು
ಪ್ರೀತಿಯ ಕೊಳ್ಳಲು
ಒಂದು ಚಿಕ್ಕ ಬದಲಾವಣೆಯೊಂದಿಗೆ.....?


ಕಮಲಾದಾಸ್
ಕನ್ನಡಕ್ಕೆ: ದೀಷ್ಮಾ.ಡಿ.ಶೆಟ್ಟಿ
(ಬರಹಗಾರ್ತಿ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಆಂಗ್ಲ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಅಧ್ಯಯನ ನಡೆಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಪದವಿ ಪೂರೈಸಿದ್ದು, ಸಾಹಿತ್ಯದಲ್ಲಿ ಆಸಕ್ತಿಯುಳ್ಳವರು. ಅನೇಕ ಪುಸ್ತಕಗಳನ್ನು ಓದುವ ಹವ್ಯಾಸ ರೂಢಿಸಿಕೊಂಡಿದ್ದಾರೆ.
-ಸಂ.)

1 comments:

siri said...

relly good translation, keep it up..... next time please write a poem on grandfather house.....

Post a Comment