ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ
ಜೈನ ಕಾಶಿ ಇದೀಗ ಶಿಕ್ಷಣ ಕಾಶಿ...

ಜೈನಕಾಶಿ ಖ್ಯಾತಿಯ ಮೂಡಬಿದಿರೆ `ಶಿಕ್ಷಣ ಕಾಶಿ'ಯಾಗಿ ಪರಿವರ್ತನೆಗೊಂಡಿದೆ. ಶೈಕ್ಷಣಿಕ, ಕಲೆ, ಸಾಹಿತ್ಯ, ಸಾಂಸ್ಕೃತಿಕ ವೈವಿಧ್ಯಗಳ ಮೂಲಕ ಇಡೀ ವಿಶ್ವವೇ `ಇತ್ತ' ನೋಡುವಂತೆ ಮಾಡಿದ ಮಿಜಾರುಗುತ್ತು ಡಾ.ಎಂ.ಮೋಹನ ಆಳ್ವ ಹೋಬಳಿಮಟ್ಟದ ಮೂಡಬಿದಿರೆಯನ್ನು ಶಿಕ್ಷಣ ಕಾಶಿಯಾಗಿ ಪರಿವರ್ತಿಸಿದ್ದಾರೆಂದರೆ ಅತಿಶಯೋಕ್ತಿಯಾಗದು. ಶಿಕ್ಷಣ `ವಾಣಿಜ್ಯೀಕರಣ'ವಾಗುತ್ತಿರುವ ಪ್ರಸಕ್ತ ಸನ್ನಿವೇಶದಲ್ಲಿ ಜನಸಾಮಾನ್ಯರಿಗೂ ಶಿಕ್ಷಣ ತಲಪಬೇಕೆಂಬ ಒಂದು ಮೌಲಿಕ ಚಿಂತನೆಗಳನ್ನಿಟ್ಟುಕೊಂಡು ಎಲ್ಲಾ ಸ್ತರದ ಶಿಕ್ಷಣವನ್ನು ಒಂದೇ ಸೂರಿನಡಿ ನೀಡುವ ಪ್ರಯತ್ನಕ್ಕೆ ಕೈಯಿಟ್ಟು ಅದರಲ್ಲೊಂದು ಸಬಲತೆಯನ್ನು ಕಂಡುಕೊಂಡವರು ಮೋಹನ ಆಳ್ವರು. ಅವರ ದೂರದೃಷ್ಠಿಯ ಚಿಂತನೆಯ ಫಲವೇ ಬೋಳುಗುಡ್ಡೆಯಾಗಿದ್ದ `ವಿದ್ಯಾಗಿರಿ' ಇಂದು ನಿಜಾರ್ಥದಲ್ಲಿ `ವಿದ್ಯಾ'ಗಿರಿಯಾಗಿ ಪರಿವರ್ತನೆಗೊಂಡದ್ದು ಎಂದರೆ ಅಚ್ಚರಿಯಾಗದಿರದು.!


ಇದು ಸುಲಭ ಸಾಧನೆಯಲ್ಲ
ರಾಜ್ಯದಾದ್ಯಂತ ದ್ವಿತೀಯ ಪಿ.ಯು.ಸಿ ಫಲಿತಾಂಶ ಪ್ರಕಟಗೊಳ್ಳುತ್ತಲೇ ಎರಡು ದಾಖಲೆಯ ಫಲಿತಾಂಶವನ್ನು ಪಡೆದುಕೊಂಡ ಹೆಗ್ಗಳಿಕೆಗೆ ಆಳ್ವಾಸ್ ಎಜುಕೇಷನ್ ಫೌಂಡೇಷನ್ ಪ್ರವರ್ತಿತ ಆಳ್ವಾಸ್ ಪಿ.ಯು.ಕಾಲೇಜು ಪಾತ್ರವಾಗಿದೆ.ವಿಜ್ಞಾನ ವಿಭಾಗದ ರಶ್ಮಿ ವಿ.ಪಾಟೀಲ್ 588 ಹಾಗೂ ವಾಣಿಜ್ಯ ವಿಭಾಗದ ರಾಯ್ಸ್ಟನ್ ಪಿಂಟೋ 588 ಅಂಕ ಪಡೆಯುವ ಮೂಲಕ ರಾಜ್ಯದಲ್ಲೇ ಮೊದಲಿಗರಾಗಿದ್ದಾರೆ. ರಶ್ಮಿ ವಿ.ಪಾಟೀಲ್ ಪಿ.ಸಿ.ಎಂ. ವಿಷಯಗಳಲ್ಲಿ ತಲಾ ನೂರು ಅಂಕಗಳನ್ನು ಪಡೆದಿದ್ದಾರೆ.ಈ ಪದವಿಪೂರ್ವ ಕಾಲೇಜಿನ 1528ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ಆ ಪೈಕಿ 1508ಮಂದಿ ಉತ್ತೀರ್ಣರಾಗಿ 98.69ಶೇಕಡಾ ಫಲಿತಾಂಶ ದಾಖಲಾಗಿದೆ. ಈ ಪೈಕಿ 494 ವಿಶಿಷ್ಠ ದರ್ಜೆ ಹಾಗೂ 863ಮಂದಿ ಪ್ರಥಮ ದರ್ಜೆಯಲ್ಲಿ 125ದ್ವಿತೀಯ ಹಾಗೂ 26 ಮಂದಿ ತೃತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.ನುರಿತ ಅನುಭವೀ ಶಿಕ್ಷಕರಿಂದ ಗುಣಮಟ್ಟದ ಶಿಕ್ಷಣದೊಂದಿಗೆ ಪಠ್ಯಪೂರಕ ವಿಶೇಷ ತರಗತಿಗಳನ್ನು ನೀಡುತ್ತಿರುವುದು ಈ ಕಾಲೇಜಿನ ಹೆಗ್ಗಳಿಕೆ. ಶಿಸ್ತು, ಸಮಯಪಾಲನೆ, ಆಧುನಿಕ ಶಿಕ್ಷಣ ವ್ಯವಸ್ಥೆಗಳ ಮೂಲಕ ವಿದ್ಯಾರ್ಥಿಗಳನ್ನು ಮಾದರಿ ವಿದ್ಯಾರ್ಥಿಗಳನ್ನಾಗಿ ರೂಪಿಸುತ್ತಿರುವುದರಿಂದಲೇ ರಾಜ್ಯ, ಅಂತಾರಾಜ್ಯ, ಅಂತಾರಾಷ್ಟ್ರೀಯ ಮಟ್ಟದಿಂದ ವಿದ್ಯಾರ್ಥಿಗಳು ಶಿಕ್ಷಣಕ್ಕಾಗಿ ಈ ಕಾಲೇಜನ್ನರಸಿ ಬರುತ್ತಿದ್ದಾರೆ.

ಉಚಿತ ಶಿಕ್ಷಣ
ದ್ವಿತೀಯ ಪಿ.ಯು.ಸಿಯಲ್ಲಿ ಶೇ 95 ಅಂಕ ಪಡೆದ ಪದವಿ ವಿಭಾಗಕ್ಕೆ ಸೇರಲಿಚ್ಛಿಸುವ ವಿದ್ಯಾರ್ಥಿಗಳು ಸಂಸ್ಥೆಯ ಉಚಿತ ಶಿಕ್ಷಣ ವ್ಯವಸ್ಥೆಗೊಳಪಡುತ್ತಾರೆ. ಇಲ್ಲಿ ವಿದ್ಯಾರ್ಥಿಗಳಿಗೆ ಸಂಪೂರ್ಣ ಉಚಿತವಾಗಿ ಪಠ್ಯ, ವಸತಿ ವ್ಯವಸ್ಥೆಗೊಳಿಸಲಾಗುತ್ತದೆ. ಇಷ್ಟೇ ಅಲ್ಲದೆ ಸಂಸ್ಥೆಯು ಕಲೆ, ಸಾಹಿತ್ಯ, ಶಿಕ್ಷಣ, ಸಂಸ್ಕೃತಿ, ಕ್ರೀಡಾ ವಿಭಾಗಗಳಲ್ಲಿ ವಿಶಿಷ್ಠ ಸಾಧನೆ ಮೆರೆದ ವಿದ್ಯಾರ್ಥಿಗಳಿಗೂ ಉಚಿತ ಶಿಕ್ಷಣಕ್ಕೆ ವ್ಯವಸ್ಥೆ ಕಲ್ಪಿಸುತ್ತಿದೆ.
ರಾಜ್ಯದ 29ಜಿಲ್ಲೆಗಳಿಂದ 3,500ಮಂದಿ ಇದೀಗ ಆಳ್ವಾಸ್ ಶಿಕ್ಷಣ ಸಂಸ್ಥೆಯ ಪದವಿಪೂರ್ವ ವಿಭಾಗದಲ್ಲಿ ವಿದ್ಯಾರ್ಜನೆಮಾಡುತ್ತಿದ್ದು ರಾಜ್ಯದಲ್ಲಿಯೇ ಅತೀಹೆಚ್ಚು ಮಂದಿ ಸೇರ್ಪಡೆಯಾಗುತ್ತಿರುವ ಪದವಿಪೂರ್ವ ಶಿಕ್ಷಣ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.


ಆಳ್ವಾಸ್ ಪ್ರೌಢಶಾಲೆಯದ್ದೂ ದಾಖಲೆ


ಆಳ್ವಾಸ್ ಎಜುಕೇಷನ್ ಫೌಂಡೇಷನ್ ಆಶ್ರಯದಲ್ಲಿ ಕಾರ್ಯಾಚರಿಸುತ್ತಿರುವ ಆಳ್ವಾಸ್ ಕನ್ನಡ ಪ್ರೌಢಶಾಲೆ ಮೊದಲ ಬ್ಯಾಚ್ ನಲ್ಲೇ ಎಸ್.ಎಸ್.ಎಲ್.ಸಿಯಲ್ಲಿ ಶೇ.100 ಫಲಿತಾಂಶ ದಾಖಲಿಸಿದೆ. ಇಲ್ಲಿ ಕ್ರೀಡಾ ವಿದ್ಯಾರ್ಥಿಗಳು ಹಾಗೂ ಸಾಂಸ್ಕೃತಿಕ, ಶಿಕ್ಷಣ ರಂಗದ ಸಾಧಕ ವಿದ್ಯಾರ್ಥಿಗಳು ವಿದ್ಯಾರ್ಜನೆಗೈಯುತ್ತಿದ್ದು ಮಹತ್ವದ ಫಲಿತಾಂಶ ದಾಖಲಿಸಿಕೊಂಡಿದ್ದಾರೆ.

0 comments:

Post a Comment