ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ

ಮುಂಬಯಿ : ಕನ್ನಡದ ಚಿನ್ನದ ಕಂಠ ಖ್ಯಾತಿಯ ಶಿವರಾಜ್ ಸುವರ್ಣ ಅವರು ದಾದಾ ಸಾಹೇಬ್ ಫಾಲ್ಕೆ ಅಕಾಡೆಮಿ ಪ್ರಶಸ್ತಿ ಪಡೆದುಕೊಂಡಿದ್ದಾರೆ.
ಭಾರತೀಯ ಚಿತ್ರಂಗಕ್ಕೆ ನೀಡಿದ ಕೊಡುಗೆಗಾಗಿ ಸುವರ್ಣ ಅವರನ್ನು ಈ ಉನ್ನತ ಗೌರವಕ್ಕೆ ಆರಿಸಲಾಗಿದೆ. ಧ್ವನಿ ಕಲಾವಿದನಿಗೆ ದಾದಾಸಾಹೇಬ್ ಫಾಲ್ಕೆ ಅಕಾಡೆಮಿಯ ಈ ಪ್ರತಿಷ್ಠಿತ ಪ್ರಶಸ್ತಿ ಸಿಗುತ್ತಿರುವುದು ಇದೇ ಮೊದಲು. ಈ ಮೂಲಕ ಸುವರ್ಣ ಕನ್ನಡಕ್ಕೆ ಗೌರವ ತಂದು ಕೊಟ್ಟಿದ್ದಾರೆ.
ಭಾಯಿದಾಸ್ ಸಭಾಗೃಹದಲ್ಲಿ ಜರಗಿದ ಸಮಾರಂಭದಲ್ಲಿ ಶಿವರಾಜ್ ಸುವರ್ಣ ಅವರಿಗೆ ಪ್ರಶಸ್ತಿ ಪ್ರದಾನಿಸಲಾಯಿತು. ಉಪಮುಖ್ಯಮಂತ್ರಿ ಛಗನ್ ಭುಜಬಲ್ ಅವರು ಚಿತ್ರೋದ್ಯಮದ ಹಿರಿಯರಾದ ದೇವಾನಂದ್, ಮನೋಜ್‌ಕುಮಾರ್, ಪ್ರಾಣ್, ಶ್ರೀರಾಮ್ ಲಾಗೂ, ಸುಲೋಚನಾ ಮತ್ತಿತರರ ಉಪಸ್ಥಿತಿಯಲ್ಲಿ ಸ್ಮರಣಿಕೆ, ಫಲಕವನ್ನೊಳಗೊಂಡಿರುವ ಪ್ರಶಸ್ತಿಯನ್ನು ಪ್ರದಾನಿಸಿದರು.

0 comments:

Post a Comment