ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ

ಮುನ್ನಡೆ ಸಾಧಿಸಲಾಗದಿದ್ದರೆ ಹಿನ್ನಡೆ ತಾನಾಗಿಯೇ ಪ್ರಾಪ್ತವಾಗುತ್ತದೆ... ನಮ್ಮಲ್ಲವಿತುಕುಳಿತಿರುವ `ಸಂಕುಚಿತ' ಮನೋಭಾವನೆಗಳನ್ನು ತೊಡೆದು ಹಾಕಿ ಸಮಾಜದಲ್ಲಿ `ನಾವೂ ' ಒಂದು ಶಕ್ತಿ ಎಂಬುದನ್ನು ತೋರ್ಪಡಿಸಬೇಕು. ತನ್ಮೂಲಕ ಕೊರಗ ಸಮಾಜ ಮುಖ್ಯವಾಹಿನಿಗೆ ಬರುವಂತಾಗಬೇಕು'' ಈ ಆಶ್ರಯ ವ್ಯಕ್ತಪಡಿಸಿದ್ದು ಮೂಡಬಿದಿರೆಯ ಶಿಕ್ಷಣ ಕ್ರಾಂತಿಯ ಹರಿಕಾರ ಡಾ.ಎಂ.ಮೋಹನ ಆಳ್ವ ಅವರು.ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮತ್ತು ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟದ ಸಹಯೋಗದೊಂದಿಗೆ `ಬುಡಕಟ್ಟು ಸಮುದಾಯದ ಶಿಕ್ಷಣ ದಿಸೆಗಳು' ಎಂಬ ಎರಡು ದಿನಗಳ ಕಾರ್ಯಾಗಾರವನ್ನು ಡಾ.ಎಂ.ಮೋಹನ ಆಳ್ವರು ಆಳ್ವಾಸ್ ಕಾಲೇಜಿನಲ್ಲಿ ಹಮ್ಮಿಕೊಂಡು ತನ್ಮೂಲಕ ಕೊರಗ ಸಮುದಾಯದವರಿಗೆ ಉಚಿತ ಶಿಕ್ಷಣವನ್ನು ನೀಡುತ್ತಾ ಅವರನ್ನು ಅಭಿವೃದ್ಧಿ ದಿಕ್ಕಿನತ್ತ ಕೊಂಡೊಯ್ಯುವ ಮಹತ್ಕಾರ್ಯಕ್ಕೆ ಕೈಯಿಕ್ಕಿದ್ದಾರೆ.
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ, ಕಾಸರಗೋಡು ಜಿಲ್ಲೆ ಹಾಗೂ ಚಿಕ್ಕಮಗಳೂರು ವ್ಯಾಪ್ತಿಯಲ್ಲಿ ಒಟ್ಟು 18,155ರಷ್ಟು ಸಂಖ್ಯೆಯಲ್ಲಿ ಈ ಕೊರಗ ಸಮುದಾಯದವರಿದ್ದಾರೆ. ಆದರೆ ಇವರಲ್ಲಿ ಶಿಕಣ ಪಡೆದವರ ಸಂಖ್ಯೆ ಮಾತ್ರ ಅತ್ಯಂತ ವಿರಳ. ಈ ಪೈಕಿ 8ಮಂದಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಎಂ.ಬಿ.ಬಿ.ಎಸ್ ಅಭ್ಯಸಿಸಿದವರ ಸಂಖ್ಯೆ ಶೂನ್ಯ. ಉಳಿದಂತೆ ನರ್ಸಿಂಗ್ ಕ್ಷೇತ್ರದಲ್ಲಿ ಒಟ್ಟು 19ಮಂದಿ ಶಿಕ್ಷಣ ಪಡೆದರೆ ಉಳಿದಂತೆ ಪದವಿ/ ಪಿ.ಯು.ಸಿ, ಪ್ರಾಥಮಿಕ ಶಿಕ್ಷಣಕ್ಕೆ ಮೀಸಲು.
ಕೊರಗ ಜನಾಂಗದವರು ಆರ್ಥಿಕವಾಗಿ ಬಲಿಷ್ಠರಾಗಬೇಕು, ಸಮಾಜದಲ್ಲಿ ತಾವೂ ಒಂದು ಪ್ರತಿಷ್ಟಿತ ವ್ಯಕ್ತಿಗಳಾಗಬೇಕು. ಇವೆಲ್ಲದಕ್ಕೂ ಮೂಲವಾಗಿ ಶಿಕ್ಷಣದಲ್ಲಿ ಮುಂದೆ ಬರಬೇಕೆಂಬುದು ಡಾ.ಎಂ.ಆಳ್ವರ ಕಲ್ಪನೆ. ತನ್ಮೂಲಕ ಹಿಂದುಳಿದಿರುವ ಈ ಜನಾಂಗ ಸದೃಢವಾಗಬೇಕೆಂಬ ಕನಸುಕಟ್ಟಿಕೊಂಡಿದ್ದಾರೆ. ಕೊರಗ ಸಮುದಾಯದ ಪ್ರತಿಯೊಬ್ಬ ವ್ಯಕ್ತಿಯೂ ಜ್ಞಾನವಂತರಾಗಬೇಕು, ವಿದ್ಯಾವಂತರಾಗಬೇಕು ಮತ್ತು ಆರೋಗ್ಯವಂತರಾಗಬೇಕು ಆ ಮೂಲಕ ಬಡತನದ ನಿಮರ್ೂಲನೆಯಾಗಬೇಕು. ಇದಕ್ಕೆ ಸ್ವತಃ ಕೊರಗ ಸಮುದಾಯದವರು ಮನಸ್ಸು ಮಾಡಬೇಕೆಂಬ ಕಳಕಳಿ ಡಾ.ಎಂ.ಮೋಹನ ಆಳ್ವರದ್ದಾಗಿದೆ.
ಮಂಗಳವಾರ ಮತ್ತು ಬುಧವಾರ ಆಳ್ವಾಸ್ ಪದವಿ ಕಾಲೇಜಿನಲ್ಲಿ ನಡೆಯುತ್ತಿರುವ ಬುಡಕಟ್ಟು ಸಮುದಾಯದ ಶಿಕ್ಷಣ ದಿಸೆಗಳು ಎಂಬ ಕಾರ್ಯಾಗಾರದಲ್ಲಿ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ಸುಮಾರು ನೂರು ಮಂದಿ ವಿದ್ಯಾರ್ಥಿಗಳು ಆಗಮಿಸಿದ್ದಾರೆ.
ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ, ವಿದ್ಯಾರ್ಥಿಗಳ ಗುಂಪು ಚರ್ಚೆ, ಶಿಕ್ಷಣ ಸಂಬಂಧಿಸಿದಂತೆ ವಿದ್ಯಾರ್ಥಿಗಳ ನಿರ್ಧಾರ, ಮಾತುಕತೆಗಳು ಈ ಕಾರ್ಯಾಗಾರದಲ್ಲಿ ನಡೆಯಲಿದೆ.

0 comments:

Post a Comment