ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
7:08 PM

ಅಪಘಾತ: ತೀವ್ರ ಗಾಯ

Posted by ekanasu

ಪ್ರಾದೇಶಿಕ ಸುದ್ದಿ

ಮೂಲ್ಕಿ : ಮುಲ್ಕಿ ಸಮೀಪ ಪ್ರತ್ಯೇಕ ಎರಡು ಭೀಕರ ಅಪಘಾತಗಳು ಸಂಭವಿಸಿವೆ. ಮೂಲ್ಕಿ ಕೊಕ್ಕರಕಲ್ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳೂರು ಕಡೆ ಹೋಗುತ್ತಿದ್ದ ಮಾರುತಿ ಒಮಿನಿ ಗಾಡಿಗೆ ಟಿಪ್ಪರ್ ಡಿಕ್ಕಿಯಾಗಿ ಮಾರುತಿ ಒಮಿನಿ ರಸ್ತೆಯಲ್ಲಿ ಉರುಳಿದೆ. ಇದೇ ಸಂದರ್ಭ ಹಿಂದಿನಿಂದ ಬರುತ್ತಿದ್ದ ಮೈನ್ಸ್ ಲಾರಿ ಡಿಕ್ಕಿಯಾದ ಪರಿಣಾಮ ಒಮಿನಿ ಚಾಲಕ ಮೂಲ್ಕಿ ವಿಜಯಾ ಕಾಲೇಜು ರಸ್ತೆ ಹುಡ್ಕೋ ಕಾಲನಿ ನಿವಾಸಿ ವಿಜಯ ಸಾಲ್ಯಾನ್ ತೀವ್ರ ಗಾಯಗೊಂಡು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದಾರೆ.
ಮೂಲ್ಕಿ ಕೋಲ್ನಾಡು ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಎಕ್ಸಪ್ರೆಸ್ ಬಸ್ಸು ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಚಾಲಕ ಹೆಜಮಾಡಿಯ ಪ್ರಜ್ವಲ್ ಶೆಟ್ಟಿ ತೀವ್ರ ಗಾಯಗೊಂಡಿದ್ದಾರೆ . ಮಳೆಗಾಲ ಆರಂಭಕ್ಕಿಂತ ಮೊದಲೇ ಹೆದ್ದಾರಿಯಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚತೊಡಗಿದೆ.
ಚಿತ್ರ - ವರದಿ : ಭಾಗ್ಯವಾನ್ ಮುಲ್ಕಿ.

0 comments:

Post a Comment