ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ
ಹಿರಿಯ ಪತ್ರಕರ್ತರಾಗಿದ್ದ ಪ.ಗೋ. ಅವರು ಅಂದೇ ಸತ್ಯ ಅರುಹಿದ್ದರು. ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಮಂಗಳೂರಿನ ಬಜ್ಪೆ ವಿಮಾನ ನಿಲ್ದಾಣದ ಅವ್ಯವಸ್ಥೆಯನ್ನು ಅರುಹಿದ್ದರು. 26-8-81 ರಲ್ಲಿ ಪ.ಗೋ ಅವರು `ವಿಸ್ತರಣೆ - ನವೀಕರಣ ಕಾಣದ ಬಜ್ಪೆ ವಿಮಾನ ನಿಲ್ದಾಣ' ಎಂಬ ವಿಶೇಷ ವರದಿ ಬರೆದಿದ್ದಾರೆ. ಅವರ ನಂತರ ಅನೇಕ ಮಂದಿ ಇದೇ ರೀತಿಯಲ್ಲಿ ಬಜ್ಪೆ ವಿಮಾನ ನಿಲ್ದಾಣದ ದುಸ್ಥಿತಿಯನ್ನು ಮಾಧ್ಯಮಗಳ ಮೂಲಕ ಚಿತ್ರಿಸಿದ್ದಾರೆ. ಇದೀಗ ಹೊಸ ರನ್ ವೇ, ಹೊಸ ಟರ್ಮಿನಲ್ ಬಿಲ್ಡಿಂಗ್, ಅಂತಾರಾಷ್ಟ್ರೀಯ ವಿಮಾಣ ನಿಲ್ದಾಣವೆಂಬ ಗರಿ ಈ ವಿಮಾನ ನಿಲ್ದಾಣಕ್ಕೆ ಲಭಿಸಿದೆ. ಈ ಸಂದರ್ಭದಲ್ಲಿ ಅಂದಿನ ವರದಿ ಹಾಗೂ ಇಂದಿನ ನೋಟವನ್ನು ನಮ್ಮ ಓದುಗರಿಗಾಗಿ.

ಇದು ಇಂದಿನ ಬಜ್ಪೆ ವಿಮಾನ ನಿಲ್ದಾಣದ ಸ್ಥಿತಿ... ಹೇಗಿತ್ತು ಹೇಗಾಯ್ತು ನೋಡಾ...ನಮ್ಮ ಬಜ್ಪೆ ವಿಮಾನ ನಿಲ್ದಾಣ...

ಮೇ 15ಕ್ಕೆ ನೂತನ ಟರ್ಮಿನಲ್ ಉದ್ಘಾಟನೆ...
ಮಂಗಳೂರು : ಮಂಗಳೂರು ವಿಮಾನ ನಿಲ್ದಾಣದ ನೂತನ ಟರ್ಮಿನಲ್ ಕಟ್ಟಡ ಕಾಮಾಗಾರಿ ಪೂರ್ಣಗೊಂಡಿದ್ದು, ಮೇ 15 ರಂದು ಶನಿವಾರದಂದು ಕೇಂದ್ರ ನಾಗರಿಕ ವಿಮಾನ ಯಾನ ಖಾತೆಯ ರಾಜ್ಯ ಸಚಿವ ಪ್ರಫುಲ್ ಪಟೇಲ್ ಲೋಕಾರ್ಪಣೆ ಮಾಡಲಿದ್ದಾರೆ ಎಂದು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಅಧ್ಯಕ್ಷ ವಿ.ಪಿ. ಅಗರ್ವಾಲ್ ಪತ್ರಿಕಾಗೋಷ್ಠಿಯಲ್ಲಿಂದು ತಿಳಿಸಿದರು.
ಕಳೆದ ಎರಡೂವರೆ ವರ್ಷದಲ್ಲಿ ಒಟ್ಟು 200 ಕೋಟಿ ರೂಪಾಯಿ ವೆಚ್ಚದಲ್ಲಿ ನೂತನ ಇಂಟಿಗ್ರೇಟೆಡ್ ಟರ್ಮಿನಲ್ ಕಟ್ಟಡ ಕೆಂಜಾರಿನಲ್ಲಿ 70 ಎಕರೆ ವಿಸ್ತೀರ್ಣದಲ್ಲಿ ನಿರ್ಮಾಣಗೊಂಡಿದೆ. ಮುಂದಿನ ಹಂತದಲ್ಲಿ ರನ್ ವೇ ಅಭಿವೃದ್ಧಿಗೆ 50 ಕೋಟಿ ರೂ. ವೆಚ್ಚ ಮಾಡಲಾಗುವುದು. ಒಟ್ಟು 250 ಕೋಟಿ ರೂಪಾಯಿಯ ಈ ಯೋಜನೆ ಜೂನ್ ತಿಂಗಳಿನಿಂದ ಕಾರ್ಯಾರಂಭ ಮಾಡಲಿದೆ ಎಂದು ಅಗರ್ವಾಲ್ ತಿಳಿಸಿದರು.
ಅಂತಾರಾಷ್ಟ್ರೀಯ ಗುಣಮಟ್ಟದ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ 18,220 ಚದರ ಮೀಟರ್ ವಿಸ್ತೀರ್ಣದ ಸಂಪೂರ್ಣ ಹವಾನಿಯಂತ್ರಿತ ಈ ಟರ್ಮಿನಲ್ 500 ಪ್ರಯಾಣಿಕರ ಆಗಮನ ಮತ್ತು ನಿರ್ಗಮನಕ್ಕೆ ಬೇಕಾದ ಸೌಲಭ್ಯವನ್ನು ಹೊಂದಿದೆ. ಹಿಂದಿನ ವಿಮಾನ ನಿಲ್ದಾಣದಲ್ಲಿ ಕೇವಲ 150 ರಿಂದ 180 ಜನರಿಗೆ ಮಾತ್ರ ಸೌಲಭ್ಯ ಇತ್ತು. ಕೆಂಜಾರಿನಲ್ಲಿ ನಿರ್ಮಾಣಗೊಂಡ ನೂತನ ಟರ್ಮಿನಲ್ ನಿಂದಾಗಿ ಮಂಗಳೂರು ನಗರದ ಅಂತರ 7 ಕಿ. ಮೀ. ಕಡಿಮೆಯಾಗಲಿದೆ.5 ಕೋಟಿ ರೂ. ವೆಚ್ಚದಲ್ಲಿ ಹೊಸ ಏರ್ ಟ್ರಾಫಿಕ್ ಕಂಟ್ರೋಲ್ ನಿರ್ಮಾಣಗೊಂಡಿದೆ.ರಾತ್ರಿ ವಿಮಾನ ನಿಲುಗಡೆಗೆ ಸೌಲಭ್ಯ ಇದೆ. ನೂತನ ಟರ್ಮಿನಲ್ ನಿಂದಾಗಿ ಹೆಚ್ಚಿನ ವಿಮಾನ ಆಗಮ ಮತ್ತು ನಿರ್ಗಮನಕ್ಕೆ ಅವಕಾಶ ಲಭಿಸಲಿದೆ ಎಂದು ಅಗರ್ವಾಲ್ ತಿಳಿಸಿದರು. ಈಗಿರುನ ಬಜಪೆ ವಿಮಾನ ನಿಲ್ದಾಣದಲ್ಲಿ ವೈಮಾನಿಕ ತರಬೇತಿ ಶಿಕ್ಷಣ ಮತ್ತು ಸರಕು ಸಾಗಾಟದ ವಿಮಾನಗಳಿಗೆ ಅವಕಾಶ ಕಲ್ಪಿಸಲಾಗುವುದು ಎಂದು ಅವರು ಹೇಳಿದರು.
ಬೆಳಗಾಂ,ಹುಬ್ಬಳ್ಳಿ ವಿಮಾನ ನಿಲ್ದಾಣ ವಿಸ್ತರಣೆ
ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ವತಿಯಿಂದ ಹುಬ್ಬಳ್ಳಿ,ಬೆಳಗಾಂ ವಿಮಾನ ನಿಲ್ದಾಣದ ಅಭಿವೃದ್ಧಿ ಹಾಗೂ ವಿಸ್ತರಣೆಯ ಯೋಜನೆಯನ್ನು ಈಗಾಗಲೇ ರೂಪಿಸಲಾಗಿದ್ದು,ಶೀಘ್ರದಲ್ಲೇ ಕಾಮಗಾರಿ ಆರಂಭಿಸಲಾಗುವುದು. ಮೈಸೂರು ವಿಮಾನ ನಿಲ್ದಾಣದ ವಿಸ್ತರಣೆಗೆ 310 ಎಕರೆ ಹೆಚ್ಚುವರಿ ಭೂಸ್ವಾಧೀನವಾಗಬೇಕಾಗಿದ್ದು, ಪ್ರಗತಿಯಲ್ಲಿದೆ. ಈ ನಿಟ್ಟಿನಲ್ಲಿ ರಾಜ್ಯ ಸರಕಾರದ ಸಹಕಾರ ಕೋರಲಾಗಿದೆ ಎಂದು ಅಗರ್ವಾಲ್ ವಿವರಿಸಿದರು
ಪತ್ರಿಕಾಗೋಷ್ಠಿಯಲ್ಲಿ ಮಂಗಳೂರು ವಿಮಾನ ನಿಲ್ದಾಣ ಪ್ರಾಧಿಕಾರದ ನಿರ್ದೇಶಕ ಪೀಟರ್ ಅಬ್ರಹಾಂ, ಸದರ್ನ್ ರೀಜನಲ್ ಎಕ್ಸಿಕ್ಯೂಟಿವ್ ಡೈರೆಕ್ಟರ್ ಡಿ.ದೇವರಾಜ್,ವಾಸುದೇವ್ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

ಹೀಗಿದೆ ನೋಡಿ...

ಕೆಂಜಾರಿನ 70 ಎಕರೆ ವಿಸ್ತೀರ್ಣ ಪ್ರದೇಶದಲ್ಲಿ 500 ಕೋಟಿ ರೂ. ವೆಚ್ಚದ ಬೃಹತ್ ಯೋಜನೆಯ ಮೊದಲ ಹಂತ 147 ಕೋಟಿ ರೂ. ವೆಚ್ಚದಲ್ಲಿ ಸಂಪೂರ್ಣ ಹವಾ ನಿಯಂತ್ರಿತ ಸೌಲಭ್ಯ ಹೊಂದಿರುವ 18,200 ಚದರ ಮೀಟರ್ ವ್ಯಾಪ್ತಿಯಲ್ಲಿ ನಿರ್ಮಾಣಗೊಂಡಿದೆ. ಏಕ ಕಾಲದಲ್ಲಿ 500 ಮಂದಿ ಪ್ರಯಾಣಿಕರು ಆಗಮಿಸುವ ಮತ್ತು ನಿರ್ಗಮನ ಸೌಲಭ್ಯ ಹೊಂದಿರುವ ನೂತನ ಏಕೀಕೃತ ಟರ್ಮಿನಲ್ ಭವನದೊಂದಿಗೆ 55 ಕೋಟಿ ರೂ., ವೆಚ್ಚದಲ್ಲಿ ನೂತನ ರನ್ ವೇ ಪೂರ್ಣಗೊಂಡಿದೆ.
ಸಿಸಿ ಕ್ಯಾಮರಾ, 28 ತಪಾಸಣಾ ಕೌಂಟರ್ ಸೇರಿದಂತೆ ಕಸ್ಟಮ್ಸ್ ಮತ್ತು ಎಮಿಗ್ರೇಶನ್ ಸೌಲಭ್ಯ ವಿಐಪಿ ಲಾಂಜ್, ರೆಸ್ಟೊರೆಂಟ್, ವಿದೇಶಿ ಪ್ರಯಾಣಿಕರಿಗೆ ಪ್ರತ್ಯೇಕ ವ್ಯವಸ್ಥೆ, ಹವಾನಿಯಂತ್ರಿತ ಏರೋ ಬ್ರಿಡ್ಜ್ ಅಳವಡಿಸಲಾಗಿದೆ. ಇನ್ ಲೈನ್ ಎಕ್ಸ್ ರೇ ಬ್ಯಾಗೇಜ್ ಸಿಸ್ಟಮ್ ಹೊಂದಿದೆ. 15 ರಂದು ಬೆಳಗ್ಗೆ 11 ಗಂಟೆಗೆ ಭಾರತ ಸರ್ಕಾರದ ನಾಗರೀಕ ವಿಮಾನ ಯಾನ ಖಾತೆಯ ರಾಜ್ಯ ಸಚಿವ ಪ್ರಫುಲ್ ಪಟೇಲ್ ನೂತನ ಏಕೀಕೃತ ಟರ್ಮಿನಲ್ ಭವನ ಉದ್ಘಾಟಿಸುವರು.

0 comments:

Post a Comment