ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
2:09 PM

ದ ಮಿಸ್ಟರಿ...

Posted by ekanasu

ಸಿನೆಮಾ

ಅದೊಂದು ದಟ್ಟವಾದ ಭಯಾನಕ ಕಾಡು. ಚಾರಣದ ಖುಷಿಯನ್ನು ಸವಿಯುತ್ತಿರುವ ಹುಡುಗರು. ಮರದ ರೆಂಬೆ ಕೊಂಬೆಗಳ ಜೊತೆ ಆಟವಾಡುತ್ತಾ ತರಗೆಲೆಯನ್ನು ಹಾರಿಸುತ್ತಾ ನಡೆಯುತ್ತಿದ್ದವರು. ಅದಾಗಲೇ ಹರಿಯುತ್ತದೆ ರಕ್ತಪಾತ. ಆ ಸಾವು ಸಂಭವಿಸಿದಾದರೂ ಹೇಗೆ? ಆ ಅಗೋಚರ ಶಕ್ತಿಯಾದರೂ ಯಾವುದು? ಎನ್ನುವ ನಿಗೂಢ ಹಾಗೂ ತರ್ಕಕ್ಕೆ ನಿಲುಕದ ಪ್ರಶ್ನೆಯೊಂದಿಗೆ ಸಾಗುತ್ತದೆ ಉಜಿರೆಯ ಎಸ್.ಡಿ.ಎಂ.ಕಾಲೇಜಿನ ಪತ್ರಿಕೋದ್ಯಮ ವಿದ್ಯಾರ್ಥಿಗಳ ದ ಮಿಸ್ಟರಿ ಎಂಬ 40 ನಿಮಿಶಗಳ ಚಲನಚಿತ್ರ.

ಶ್ರೀಕಾಂತ್ ಕುಂಡಂತಾಯ ಚಿತ್ರದ ನಿರ್ದೇಶಕ. ಎರಡು ವರ್ಷದ ಹಿಂದೆ ಕಂಡ ಸಿನಿಮಾದ ಕನಸನ್ನು ಸ್ನೇಹಿತರಾದ ಮಾಧವ ಹೊಳ್ಳ ಹಾಗೂ ಸನಲ್ ಜೊತೆಗೂಡಿ ನನಸಾಗಿಸಿದ್ದಾರೆ. ಸಿನಿಮಾ ನಿರ್ಮಾಣದಲ್ಲಿ ಇರುವ ಜವಾಬ್ದಾರಿಗಳನ್ನು ಅರಿಯುವ ಉದ್ದೇಶದಿಂದ, 10 ಜನ ವಿದ್ಯಾರ್ಥಿಗಳ ತಂಡವನ್ನು ಕಟ್ಟಿ ಚಿತ್ರಹೊರತಂದಿದ್ದಾರೆ.

ಹೊಸ ಉಪಕರಣಗಳಿಲ್ಲದೆ ಸಾಮಾನ್ಯ ಕ್ಯಾಮೆರಾ ಸಹಾಯದಿಂದ ತಮ್ಮ ಕ್ರಿಯಾತ್ಮಕ ಆಲೋಚನೆಗಳಿಂದಾಗಿ ಭಯಾನಕ ದೃಶ್ಯಗಳನ್ನು ಸೆರೆಹಿಡಿದಿದ್ದಾರೆ. ಆಧುನಿಕ ತಂತ್ರಜ್ಞಾನದ ಕೊರತೆಯಿದ್ದಾಗಿಯೂ ಎತ್ತರದ ಜಾಗದಿಂದ ದೃಶ್ಯಗಳನ್ನು ತೆಗೆಯಬೇಕಾದ ಸಂದರ್ಭದಲ್ಲಿ ಮರವನ್ನು ಹತ್ತಿ, ಕ್ಯಾಮೆರಾವನ್ನು ಹಗ್ಗದಲ್ಲಿ ಕಟ್ಟಿ ರಾಠೆಯ ಮೂಲಕ ಇಳಿಸಿ, ಹತ್ತಿಸಿ ದೃಶ್ಯಗಳ ಚಿತ್ರೀಕರಣ ನಡೆಸಿರುವ ವಿದ್ಯಾರ್ಥಿಗಳ ಪರಿಶ್ರಮವನ್ನು ಮೆಚ್ಚಲೇ ಬೇಕು.

ಸಂದೇಶವುಳ್ಳ ಚಲನಚಿತ್ರಗಳು ಇಂದು ಸಾಮಾನ್ಯ. ಆದರೆ ಅಂತಹಾ ಯಾವುದೇ ಸಂದೇಶಗಳಿಲ್ಲದೆ ತಮ್ಮ ಬುದ್ದಿ ಹಾಗೂ ಸಂಕಲನದಲ್ಲಿ ತಾಂತ್ರಿಕತೆಗೆ ಸಾಣೆ ಹಿಡಿದು ವೀಕ್ಷಕರಿಗೆ ಮನರಂಜನೆ ನೀಡುವಲ್ಲಿ ಈ ತಂಡ ಯಶಸ್ವಿಯಾಗಿದೆ. ವಿದ್ಯಾರ್ಥಿಗಳ ಈ ಯಶಸ್ಸಿಗೆ ಬೆನ್ನುತಟ್ಟಿ ಪ್ರೋತ್ಸಾಹಿಸಿದವರು ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಯಶೋವರ್ಮ ಹಾಗೂ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಭಾಸ್ಕರ ಹೆಗ್ಡೆ.
ವಿದ್ಯಾರ್ಥಿಗಳ ಆಸಕ್ತಿಗೆ ಪುಷ್ಟಿ ನೀಡಿದವರು ಚಲನಚಿತ್ರಗಳಲ್ಲಿ ಕಾರ್ಯನಿರ್ವಹಿಸಿದ ಅನುಭವವುಳ್ಳ, ಕಾಲೇಜಿನ ಸ್ಟುಡಿಯೋ ಟೆಕ್ನಿಕಲ್ ಚೀಫ್ ಅಭಿಷೇಕ್ ಮರಾಠೆ.

ಪರಿಕಲ್ಪನೆ, ಚಿತ್ರಕಥೆ, ಸಾಹಿತ್ಯ, ಸಂಭಾಷಣೆ ಶ್ರೀಕಾಂತ್ ಕುಂಡಂತಾಯ, ಛಾಯಾಗ್ರಹಣ ಸನಲ್ ಹಾಗೂ ಸಂಕಲನದಲ್ಲಿ ಅಭಿಷೇಕ್ ಮರಾಠೆಯವರು ತಮ್ಮ ಕೈಚಳಕವನ್ನು ತೋರಿಸಿದ್ದಾರೆ. ಚಿತ್ರದ ನಿರ್ಮಾಪಕ ಮಾಧವ ಹೊಳ್ಳ, ಸಹ ನಿರ್ಮಾಪಕ ಯತಿನ್ ವಿದ್ಯಾರ್ಥಿಗಳಾದ ಸೌಹಾರ್ದ್ , ಕಾರ್ತಿಕ್, ಮನೋಜ್, ಸಿರಾಜ್, ಚೇತನ್ ಹಾಗೂ ಸನಲ್ ಇವರುಗಳ ನಟನೆ ಚಿತ್ರಕ್ಕೆ ಜೀವ ತುಂಬಿದೆ.


ಬೊರ್ಗಲ್ಗುಡ್ಡೆ ಮಂಜುನಾಥ್

3 comments:

Anonymous said...

ವಿದ್ಯಾರ್ಥಿಗಳ ಪ್ರಯತ್ನಕ್ಕೆ ಶುಭನಮನಗಳು. ಇನ್ನೂ ಹೆಚ್ಚು ಚಿತ್ರಗಳು ಮೂಡಿಬರಲಿ. ಹಾಗೆಯೇ ವಿದ್ಯಾರ್ಥಿಗಳ ಪ್ರತಿಭೆಗೆ ಪ್ರೋತ್ಸಾಹಿಸಿದ ಈ ಕನಸಿಗೂ ವಂದನೆಗಳು. ವಿನ್ಯಾಸ ಉತ್ತಮವಾಗಿದೆ.

ಬಾಲಚಂದ್ರ ಬಾಗಲ್ ಕೋಟೆ

Anonymous said...

Hats up to journalists...........

Ramchandra PN said...

happy to know such films are made... They need to be seen. There should be a system where such films could be shown in other colleges as well. Uploading it on the net is also an option
ramchandra pn

Post a Comment