ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
11:21 AM

ಕರಾಳ `ಶನಿವಾರ

Posted by ekanasu

ರಾಜ್ಯ - ರಾಷ್ಟ್ರ

ಇದು ಕರಾಳ ಶನಿವಾರ... ಅಕ್ಷರಶಹ ಸತ್ಯ. ಕಾರಣ ಮಂಗಳೂರಿನಲ್ಲಿ ನಡೆದ ಅತ್ಯಂತ ದೊಡ್ಡ ವಿಮಾನ ದುರಂತ. 166 ಮಂದಿ ಪ್ರಯಾಣಿಸುತ್ತಿದ್ದ(ವಿಮಾನದ ಪೈಲೆಟ್ - ತಂಡ ಸೇರಿದಂತೆ)ವಿಮಾನ ಬೆಳ್ಳಂಬೆಳಗ್ಗೆ 5.45ರ ಸುಮಾರಿಗೆ ದುರಂತಕ್ಕೀಡಾಯಿತು. ಇದರಿಂದ ಸುಮಾರು 160ರಷ್ಟು ಮಂದಿ ಸಾವನ್ನಪ್ಪಿದ್ದು ದೃಢಪಟ್ಟಿದೆ. ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗುತ್ತಿದ್ದು ಪ್ರತಿಕೂಲ ಹವಾಮಾನದಿಂದಾಗಿ ಕಾರ್ಯಾಚರಣೆಗೆ ಅಡ್ಡಿಯಾಗುತ್ತಿದೆ.


ಸ್ಥಳೀಯರ ಸಹಕಾರದಿಂದ ಮೃತದೇಹಗಳನ್ನು ಮೇಲೆತ್ತುವ ಕಾರ್ಯ ಭರದಿಂದ ಸಾಗುತ್ತಿದೆ. ಉತ್ತಮ ಸಹಕಾರವನ್ನು ಸ್ಥಳೀಯ ಜನತೆ ನೀಡುತ್ತಿದ್ದಾರೆ. ಮೃತದೇಹಗಳು ಸಂಪೂರ್ಣ ಸುಟ್ಟುಕರಕಲಾಗಿದ್ದು ಅಂಗಾಂಗಳು ಬೇರ್ಪಡುತ್ತಿದ್ದು ಮೇಲೆತ್ತಲು ತೀವ್ರ ತೊಂದರೆಯುಂಟಾಗುತ್ತಿದೆ. ಗುರುತು ಹಿಡಿಯಲು ಕಷ್ಟವಾಗುವ ರೀತಿಯಲ್ಲಿ ಮೃತದೇಹ ಕಂಡುಬಂದಿವೆ.
ಮಂಗಳೂರಿನ ವೆನ್ಲಾಕ್, ಎಜೆ ಆಸ್ಪತ್ರೆ ಸೇರಿದಂತೆ ಇತರ ಆಸ್ಪತ್ರೆಗಳ ಶವಾಗಾರದಲ್ಲಿಡಲಾಗಿದೆ.

1 comments:

ಎಚ್. ಆನಂದರಾಮ ಶಾಸ್ತ್ರೀ said...

ದುರಂತದ ಸುದ್ದಿಯನ್ನು ಈ ತಾಣದಿಂದಲೇ ತಿಳಿದೆ. ಮೃತರ ಆತ್ಮಗಳಿಗೆ ಶಾಂತಿಯನ್ನು ಕೋರುತ್ತೇನೆ. ಅವರ ಬಂಧುಮಿತ್ರರಿಗೆ ದುಃಖ ಭರಿಸುವ ಶಕ್ತಿಯನ್ನು ಭಗವಂತನು ದಯಪಾಲಿಸಲೆಂದು ಪ್ರಾರ್ಥಿಸುತ್ತೇನೆ.

Post a Comment